More

    ಪ್ರಾಣಿಗಳ ದತ್ತು ಪಡೆದು ಪ್ರೋತ್ಸಾಹಿಸಿ

    ಬೆಳಗಾವಿ: ಪ್ರಾಣಿಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡುವ ಪ್ರಾಣಿ ಪ್ರಿಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ‘ಝೂಸ್ ಆಫ್ ಕರ್ನಾಟಕ’ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಬೆಳಗಾವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಆರ್. ಪಾಟೀಲ ತಿಳಿಸಿದರು.

    ನಗರದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಗೂಗಲ್ ಪ್ಲೇ ಸ್ಟೋರ್ಸ್‌ ಮೂಲಕ ಪ್ರತಿ ನಾಗರಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು
    ಪ್ರಾಣಿಗಳ ದತ್ತು ಇಲ್ಲವೇ ದೇಣಿಗೆ ನೀಡಿ ವನ್ಯಪ್ರೀತಿ ಮರೆಯಬೇಕು ಎಂದು ತಿಳಿಸಿದರು. ಬೆಳಗಾವಿ ಬೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದಲ್ಲಿ 147 ಪ್ರಾಣಿಗಳಿವೆ. ಮುಂದಿನ ದಿನಗಳಲ್ಲಿ ಹುಲಿ, ಸಿಂಹ, ಚಿರತೆ, ಹೈನಾ, ಕರಡಿ ಸೇರಿ ಇತರೆ ಪ್ರಾಣಿಗಳನ್ನು ತರಲಾಗುತ್ತಿದೆ. ಸಫಾರಿ ನಡೆಸುವ ಉದ್ದೇಶದಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಝೂಸ್‌ಆಫ್ ಕರ್ನಾಟಕ ಎಂಬ ಮೊಬೈಲ್ ಆ್ಯಪ್‌ನಲ್ಲಿ ರಾಜ್ಯದ 9 ಪ್ರಾಣಿ ಸಂಗ್ರಹಾಲಯಗಳ ಮಾಹಿತಿ ಲಭ್ಯವಿದೆ ಎಂದು ಅವರು ತಿಳಿಸಿದರು.

    ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿರುವು ದರಿಂದ ಆದಾಯ ಇಲ್ಲದಂತಾಗಿದೆ. ಪರಿಣಾಮ ಸಂಗ್ರಹಾಲಯದಲ್ಲಿ ಪ್ರಾಣಿ, ಪಕ್ಷಗಳಿಗೆ ಮೇವು, ಔಷಧ, ಸಿಬ್ಬಂದಿ ವೇತನ, ನಿರ್ವಹಣೆ ಇನ್ನಿತರ ಕಾರ್ಯಗಳಿಗೆ ತೀವ್ರ ಆರ್ಥಿಕ ಸಮಸ್ಯೆ ಎದುರಾಗಿದೆ. ಪ್ರವಾಸಿಗರಿಂದ ಬರುವ ಆದಾಯದಿಂದಲೇ ಪ್ರಾಣಿ ಸಂಗ್ರಹಾಲಯ ನಿರ್ವಹಣೆ ಮಾಡಲಾಗುತ್ತಿದೆ. ಈಗಾಗಲೇ ಬಸವರಾಜ ಪರವಿನಾಯ್ಕರ ಮತ್ತು ಸಮೀರ ಶಿರಗುಪ್ಪಿ ಎಂಬುವರು ಆ್ಯಪ್ ಮೂಲಕ ಪ್ರಾಣಿಗಳ ದತ್ತು ಪಡೆದಿದ್ದಾರೆ. ರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಮಾರ್ಗೋಪಾಯಗಳಲ್ಲಿ ಮೃಗಾಲಯಗಳು ಮಹತ್ತರ ಸ್ಥಾನ ಹೊಂದಿದ್ದು ವನ್ಯಜೀವಿ ಸಂರಕ್ಷಣೆ, ಪುನರ್ವಸತಿಗೆ ಝೂ ಮಹತ್ವ ಹೆಚ್ಚಾಗಿದೆ ಎಂದು ಅಶೋಖ ಪಾಟೀಲ ತಿಳಿಸಿದರು. ಅಧಿಕಾರಿ ರಾಕೇಶ ಅರ್ಜುನವಾಡ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts