More

    ಹಲವರು ಸಧ್ಯದಲ್ಲಿಯೇ ಬಿಜೆಪಿಗೆ: ಅನಿಲ ಮೆಣಸಿನಕಾಯಿ

    ವಿಜಯವಾಣಿ ಸುದ್ದಿಜಾಲ ಗದಗ,
    ಶಾಸಕ ಎಚ್​.ಕೆ.ಪಾಟೀಲ ಅವರ ಕುಟುಂಬದ ಕಪಿಮುಷ್ಠಿಯಲ್ಲಿರುವ ಗದಗ ಕ್ಷೇತ್ರದ ಜನರು ಬೇಸತ್ತಿದ್ದಾರೆ. ಸಧ್ಯದಲ್ಲೇ ಹಲವು ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡ, ಗದಗ ಟಿಕೆಟ್​ ಆಕಾಂಕ್ಷಿ ಅನಿಲ ಮೆಣಸಿನಕಾಯಿ ಹೇಳಿದರು.
    ಶುಕ್ರವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್​ ಪಕ್ಷ ತೊರೆದು ಸಚಿವ ಸಿ.ಸಿ.ಪಾಟೀಲ ಅವರ ನೇತೃತ್ವದಲ್ಲಿ ಚಾಂದಸಾಬ ಕೊಟ್ಟೂರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸಧ್ಯದಲ್ಲಿಯೇ ಇನ್ನು ಹಲವಾರು ಜನ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದರು. ಶಾಸಕ ಎಚ್​.ಕೆ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶಾಸಕರು ಕಳೆದ 50 ವರ್ಷಗಳಿಂದ ಅವರ ಕುಟುಂಬವೇ ಆಳ್ವಿಕೆ ನಡೆಸಿದ್ದರೂ ಮನೆ ಕೊಡುತ್ತೇವೆ, ಹಕ್ಕು ಪತ್ರಗಳನ್ನು ನೀಡುತ್ತೇವೆ ಎಂದು ದಾರಿ ತಪ್ಪಿಸುತ್ತಿದ್ದಾರೆ. ಇದರೊಟ್ಟಿಗೆ ಗ್ಯಾರಂಟಿ ಕಾರ್ಡ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ರಾಷ್ಟ್ರ ಮಟ್ಟದ ನಾಯಕರಾಗಿರುವ ಗದಗ ಶಾಸಕರಿಗೆ ಈ ರೀತಿಯ ಸುಳ್ಳು ಭರವಸೆ ನೀಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಸದಾಶಿವ ಆಯೋಗದ ವರದಿ ಜಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್​ ತತ್ತರಿಸುತ್ತಿದ್ದು, ಈಗ ಈ ವಿಷಯವಾಗಿ ಸುಳ್ಳು ಪ್ರಚಾರವನ್ನು ನಡೆಸುವ ಮೂಲಕ ಮತ್ತೆ ಆ ಸಮುದಾಯಕ್ಕೆ ಅನ್ಯಾಯ ಮಾಡಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಮತದಾರರು ಅವಕಾಶ ನೀಡುವುದಿಲ್ಲ. ಗದಗ ಕ್ಷೇತ್ರದಲ್ಲಿ ಬಡವರಿಗೆ ಮನೆಗಳು ಮತ್ತು ಇನ್ನಿತರ ಸೌಲಭ್ಯಗಳು ಸುಲಭವಾಗಿ ಸಿಗಬೇಕಾದಲ್ಲಿ ಅದು ಬಿಜೆಪಿಯಿಂದ ಸಾಧ್ಯ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದಣ್ಣ ಪಲ್ಲೇದ, ನಗರಸಭೆ ಸದಸ್ಯರಾದ ರಾವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಸೇರಿದಂತೆ ನೂರಾರು ಅಭಿಮಾನಿಗಳು ಹಾಜರಿದ್ದರು.

    ಕೋಟ್​.
    ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ನಾನು ಸ್ವಯಂ ಪ್ರೇರಣೆಯಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಸ್ಥಳಿಯ ನಾಯಕರು ಮತ್ತು ಅವರ ಹಿಂಬಾಲಕರ ಆಡಳಿತದಿಂದ ನನ್ನಂತಾ ನೂರಾರು ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಶಿವಣ್ಣ ಮುಳಗುಂದ ಕಾಂಗ್ರೆಸ್​ನಲ್ಲಿ ಯಾವ ರೀತಿಯ ವಾತಾವರಣ ಇದೆ ಎನ್ನುವುದನ್ನು ತಿಳಿಸಿದ್ದಾರೆ.
    ಚಾಂದಸಾಬ ಕೊಟ್ಟೂರ. ಅಲ್ಪ ಸಂಖ್ಯಾತ ಮುಖಂಡ, ನಗರಸಭೆಯ ಮಾಜಿ ಸದಸ್ಯ.

    ಕೋಟ್​.
    ಬಿಜೆಪಿ ಅಲ್ಪ ಸಂಖ್ಯಾತರಿಗೆ ಏನು ಮಾಡಿದೆ, ಬಿಜೆಪಿ ಬಂದರೆ ಮುಸ್ಲಿಂಗೆ ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್​ ನಾಯಕರು ಸುಳ್ಳು ಹೇಳುತ್ತಲೇ ನಮ್ಮ ಸಮುದಾಯದ ಮತಗಳನ್ನು ಪಡೆಯುತ್ತಾ ಬಂದಿದ್ದಾರೆ. ದೇಶದಲ್ಲಿ ಮೋದಿ ಪ್ರಧಾನ ಮಂತ್ರಿಯಾದ ನಂತರ ಅಲ್ಪಸಂಖ್ಯಾತರಿಗೂ ಸತ್ಯ ಗೋಚರವಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್​ ಹಲವಾರು ಅಲ್ಪ ಸಂಖ್ಯಾತ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ.
    ಇರ್ಷಾದ ಮಾನ್ವಿ. ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts