More

    ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!

    ಹ್ಯಾಂಬರ್ಗ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಜತೆಗಿನ ಬಿಕ್ಕಟ್ಟಿನ ಕಾರಣಕ್ಕೆ ಯುರೋಪ್ ಜತೆಗಿನ ಬಾಂಧವ್ಯ ಹಾಳಾಗಬಾರದು ಎಂದು ಪ್ರತಿಪಾದಿಸುತ್ತ ತೈವಾನ್ ಜತೆಗಿನ ನಂಟಿನ ಬಗ್ಗೆಯೂ ಎಚ್ಚರಿಕೆ ನೀಡಿದ ಚೀನಾಕ್ಕೆ ಜರ್ಮನಿ ಸರಿಯಾದ ಎದುರೇಟು ನೀಡಿದೆ.

    ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹೊರಟ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಯುರೋಪ್​ ಒಕ್ಕೂಟ ಪಂಚ ರಾಷ್ಟ್ರ ಪ್ರವಾಸ ಕೈಗೊಂಡಿದ್ದರು. ಅಮೆರಿಕದ ಜತೆಗಿನ ಬಿಕ್ಕಟ್ಟು, ತೈವಾನ್ ಜತೆಗಿನ ಬಿಕ್ಕಟ್ಟಿನ ಪ್ರಸ್ತಾಪ ಮಾಡುತ್ತಲೇ ಅವರ ಪ್ರವಾಸ ಆರಂಭಿಸಿದ್ದು. ಕೊನೆಯದಾಗಿ ವಾಂಗ್​ ಯಿ ಜರ್ಮನಿಗೆ ಭೇಟಿ ನೀಡಿದ್ದರು. ಮಂಗಳವಾರ ಅಲ್ಲಿ ಮಾತುಕತೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿ ವೇಳೆ ವಾಂಗ್ ಯಿ, ಜರ್ಮನಿಯ ವಿದೇಶಾಂಗ ಸಚಿವ ಹೈಕೋ ಮಾಸ್​ ಝೆಕ್ ವಿದೇಶಾಂಗ ಸಚಿವರೊಂದಿಗೆ ಈ ಬಗ್ಗೆ ಮಾತನಾಡಿ, ಯುರೋಪ್​ನಿಂದ ಚೀನಾಕ್ಕೆ ಏನೂ ತೊಂದರೆ ಇಲ್ಲ ಎಂಬುದನ್ನು ಖಾತರಿಪಡಿಸಿದ್ದಾರೆ. ಆದಾಗ್ಯೂ ತೈವಾನ್​ಗೆ ಭೇಟಿ ನೀಡಿದ ಝೆಕ್ ಸೆನೆಟ್​ ಪ್ರೆಸಿಡೆಂಟ್ ಮಿಲೋಸ್ ವಿಸ್ಟ್ರಿಸಿಲ್ ​ ಇದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

    ಇದನ್ನೂ ಓದಿ: ರಾಗಿಣಿ ಆಪ್ತ ರವಿಶಂಕರ್​ ಸಿಸಿಬಿ ಬಲೆಗೆ ಹೇಗೆ ಬಿದ್ದ!

    ಇದಕ್ಕೆ ಅಲ್ಲೇ ಪ್ರತಿಕ್ರಿಯೆ ನೀಡಿದ ಜರ್ಮನಿಯ ಮಾಸ್​, ನಾವು ಯುರೋಪಿಯನ್ನರು ಬಹಳ ವಿಶ್ವಾಸದಿಂದ ವರ್ತಿಸುತ್ತೇವೆ. ಯಾವುದನ್ನೇ ಆದರೂ ಸಹಕಾರದೊಂದಿಗೆ ಮಾಡುತ್ತೇವೆ. ನಾವು ಅಂತಾರಾಷ್ಟ್ರೀಯ ಪಾಲುದಾರರನ್ನು ಗೌರವಿಸುತ್ತೇವೆ. ಅದೇ ಗೌರವ ನಮಗೂ ಸಿಗಬೇಕು ಎಂಬುದನ್ನು ಬಯಸುತ್ತೇವೆ. ಇಂತಹ ವಾತಾವರಣದಲ್ಲಿ ‘ಬೆದರಿಕೆಗೆ ಹೊಂದುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಕ್ರೀಡಾ ಪ್ರಶಸ್ತಿಗೆ ರಾಜೀವ್ ಗಾಂಧಿ ಹೆಸರೇಕೆ? ಬದಲಾಯಿಸಿ ಎಂದ ಕುಸ್ತಿಪಟು ಬಬಿತಾ ಪೋಗಟ್

    ಕಡಕ್ ವಾರ್ನಿಂಗ್ ಪಡೆದ ಬಳಿಕವೂ ವಾಂಗ್ ತಮ್ಮ ನಿಲುವು ಸಡಿಲಿಸದೆ, ಮಿಲೋಸ್ ಅವರು ತೈವಾನ್​ ಗೆ ಭೇಟಿ ನೀಡಿ ಚೀನಾದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಈ ಉಲ್ಲಂಘನೆ ಸಂಬಂಧ ಬೀಜಿಂಗ್ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದೆ. ನೀವು ರೆಡ್​ಲೈನ್ ಅನ್ನು ಕ್ರಾಸ್ ಮಾಡಿದ್ದೀರಿ ಎಂದು ಎಚ್ಚರಿಸಿದರು.

    ಇದನ್ನೂ ಓದಿ: ಚಲಿಸುತ್ತಿದ್ದ ಟಾಟಾ ಇಂಡಿಕಾ ಇದ್ದಕ್ಕಿದ್ದಂತೆ ಹೊತ್ತಿ ಉರಿಯಿತು

    ಮಿಲೋಸ್ ನೇತೃತ್ವ 90 ಸದಸ್ಯರ ನಿಯೋಗ ತೈವಾನ್​ಗೆ ಕಳೆದ ಜನವರಿಯಲ್ಲಿ ತೆರಳಿದ್ದು, ತೈಪೇಯಿ ಯನ್ನು ಝೆಕ್ ರಾಜಧಾನಿಯ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದರು. (ಏಜೆನ್ಸೀಸ್)

    ನರೇಗಾ ಕಾರ್ಮಿಕರಿಗೆ ಸಿಕ್ತು ಬಿಂದಿಗೆ ತುಂಬ ಬೆಳ್ಳಿ, ತಾಮ್ರದ ನಾಣ್ಯಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts