ಸಿನಿಮಾ

ಕಬ್ಬಾಳಮ್ಮ ಅಗ್ನಿಕೊಂಡೋತ್ಸವ

ಆನೇಕಲ್: ತಾಲೂಕಿನ ಬ್ಯಾಟರಾಯನದೊಡ್ಡಿ ಗ್ರಾಮದಲ್ಲಿ ಕಬ್ಬಾಳಮ್ಮ, ಮಸಿಯಮ್ಮ ಮತ್ತು ಸಿದ್ದಪ್ಪಾಜಿ ದೇವಾಲಯದ 18ನೇ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.
ಜಾತ್ರೆಯ ಅಂಗವಾಗಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ದೇವಾಲಯದ ಅರ್ಚಕರು ದೇವಾಲಯದ ಆವರಣದಲ್ಲಿ ಹಾಕಲಾಗಿದ್ದ ಅಗ್ನಿಕೊಂಡವನ್ನು ಪ್ರವೇಶಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ವೀರಗಾಸೆ, ಪಟದ ಕುಣಿತ, ಕೋಲಾಟ ಸೇರಿ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು.
ಮಹಿಳೆಯರು ತಂಬಿಟ್ಟಿನ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ಜಾತ್ರೆ ಅಂಗವಾಗಿ ಅರವಂಟಿಕೆಗಳನ್ನು ಸ್ಥಾಪಿಸಿ ಮಜ್ಜಿಗೆ ಮತ್ತು ಪಾನಕ ವ್ಯವಸ್ಥೆ ಮಾಡಲಾಗಿತ್ತು.

Latest Posts

ಲೈಫ್‌ಸ್ಟೈಲ್