More

    ಜಡ್ಜ್​ಗಳು ಸರ್ಕಾರ ನಡೆಸಬೇಕಾ? ನ್ಯಾಯಾಧೀಶರ ವಿರುದ್ಧವೇ ಹರಿಹಾಯ್ದ ಆಂಧ್ರ ಸ್ಪೀಕರ್​

    ಹೈದರಾಬಾದ್​: ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಸರ್ಕಾರದ ಕಾರ್ಯಗಳಲ್ಲಿ ನ್ಯಾಯಾಂಗವು ಹಸ್ತಕ್ಷೇಪ ನಡೆಸುತ್ತಿದೆ ಎಂದು ಆಂಧ್ರಪ್ರದೇಶ ಸ್ಪೀಕರ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತಿರುಪತಿಗೆ ಆಗಮಿಸಿದ್ದ ಸ್ಪೀಕರ್​ ತಮ್ಮನೇನಿ ಸೀತಾರಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಧೀಶರು ಸರ್ಕಾರ ನಡೆಸಬೇಕೆಂದು ಬಯಸುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

    ಇದನ್ನೂ ಓದಿ; ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು 

    ಸರ್ಕಾರ ಏನು ಮಾಡಬೇಕೆಂಬುದನ್ನು ಕೋರ್ಟ್​ ನಿರ್ಧಾರ ಮಾಡುವುದಾದಲ್ಲಿ ಚುನಾವಣೆಯ ಅಗತ್ಯವೇನಿದೆ? ಜನರು ಶಾಸಕರು, ಸಂಸದರನ್ನು ಏಕೆ ಆಯ್ಕೆ ಮಾಡಬೇಕು? ಆಡಳಿತ ನಡೆಸಲು ಮುಖ್ಯಮಂತ್ರಿ ಯಾಕಿರಬೇಕು? ವಿಧಾನಸಭೆ, ಸ್ಪೀಕರ್​ ಅಗತ್ಯವೇನು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

    ನ್ಯಾಯಾಧೀಶರು ಕೋರ್ಟ್​ ಹಾಲ್​ಗಳಿಂದಲೇ ನೇರವಾಗಿ ಸರ್ಕಾರವನ್ನು ನಡೆಸುತ್ತ ರಾಜ್ಯವನ್ನು ಆಳಲು ಬಯಸುತ್ತಾರಾ ಎಂದು ಸೀತಾರಾಮ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ; ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ

    ಆಡಳಿತಾರೂಢ ಜಗನ್​ಮೋಹನ್​ ರೆಡ್ಡಿ ಸರ್ಕಾರದ ವಿರುದ್ಧ ಹಲವು ತೀರ್ಪಗಳು ಬಂದ ಹಿನ್ನೆಲೆಯಲ್ಲಿ ಸೀತಾರಾಮ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಲಿತ ವೈದ್ಯನ ಮೇಲೆ ಹಲ್ಲೆಯ ಸಿಬಿಐ ತನಿಖೆ, ಚುನಾವಣಾಧಿಕಾರಿಯಾಗಿ ನಿವೃತ್ತ ಐಎಎಸ್​ ಅಧಿಕಾರಿ ನಿಮ್ಮಗಢ ರಮೇಶ್​ಕುಮಾರ್​ ಮರುನೇಮಕ, ಸರ್ಕಾರ ಕಟ್ಟಡಗಳ ಮೇಲಿದ್ದ ವೈಎಸ್​ಆರ್​ ಪಕ್ಷದ ಬಣ್ಣವನ್ನು ತೆಗೆಸಿದ್ದು, ಗುಪ್ತಚರದ ವಿಭಾಗದ ನಿವೃತ್ತ ಮುಖ್ಯಸ್ಥನ ಅಮಾನತು ರದ್ದುಪಡಿಸಿದ್ದು… ಹೀಗೆ ಹಲವು ತೀರ್ಪುಗಳು ಸರ್ಕಾರದ ಮುಖಭಂಗಕ್ಕೆ ಕಾರಣವಾಗಿದ್ದರಿಂದ ಸ್ಪೀಕರ್​ ನ್ಯಾಯಾಲಯಗಳ ವಿರುದ್ಧ ಹಾಯ್ದಿದ್ದಾರೆ.

    ಬೆಳಗಾವಿ ರೋಗಿಗಳು ಪಡೆಯಲಿದ್ದಾರೆ ದೇಶದ ಮೊಟ್ಟ ಮೊದಲ ಕರೊನಾ ಲಸಿಕೆ; ಕ್ಲಿನಿಕಲ್​ ಟ್ರಯಲ್​ಗೆ 12 ಸಂಸ್ಥೆಗಳ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts