More

    ವಿಧಾನಪರಿಷತ್ ರದ್ದುಗೊಳಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿದ ಆಂಧ್ರ – ಇದು ಜಗನ್ ರಾಜ’ಕಾರಣ’!

    ಅಮರಾವತಿ: ಆಂಧ್ರಪ್ರದೇಶದಲ್ಲಿ ವಿಧಾನಪರಿಷತ್​ ಅನ್ನು ರದ್ದುಗೊಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಮನವಿ ಮಾಡಿದೆ. ಆಡಳಿತಾರೂಢ ವೈಆರ್​ಎಸ್ ಕಾಂಗ್ರೆಸ್ ಪಕ್ಷದ ಸಂಸದರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಎಪಿ ದಿಶಾ ಕ್ರಿಮಿನಲ್​ ಲಾ (ಎಪಿ ಅಮೆಂಡಮೆಂಟ್​) ಬಿಲ್ ಅನ್ನು ಪರಿಗಣಿಸಿ ರಾಷ್ಟ್ರಪತಿಯವರ ಅಂಕಿತ ಬೀಳುವಂತೆ ಮಾಡಿ ಅದನ್ನು ಕಾನೂನು ಮಾಡಲು ಸಹಕರಿಸಬೇಕು ಎಂದೂ ಕೇಂದ್ರವನ್ನು ಕೋರಿದ್ದಾರೆ.

    ಮುಖ್ಯಮಂತ್ರಿ ವೈ.ಎಸ್.ಜಗನ್​ ಮೋಹನ ರೆಡ್ಡಿ ಪಕ್ಷದ ಸಂಸದರ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಸಂಸತ್​ನ ಮುಂಗಾರು ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸುವಂತೆ ನಿರ್ದೇಶನ ನೀಡಿದ್ದಾರೆ. ಆಂಧ್ರಪ್ರದೇಶ ವಿಧಾನ ಪರಿಷತ್​ ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಶಾಸನಾತ್ಮಕ ನಿರ್ಣಯವನ್ನು ಆಂಧ್ರ ಸರ್ಕಾರ ಜನವರಿ 27ರಂದು ತೆಗೆದುಕೊಂಡಿದೆ. ಸಂವಿಧಾನದಲ್ಲಿರುವ ಪ್ರಕಾರ, ವಿಧಾನಪರಿಷತ್ ರದ್ದುಗೊಳಿಸುವುದಕ್ಕೆ ಕೇಂದ್ರ ಸರ್ಕಾರದ ಅನುಮತಿಯೂ ಬೇಕು.

    ಇದನ್ನೂ ಓದಿ: ದೇವರಮನೆ ಗುಡ್ಡದಲ್ಲೀಗ ಕುರಂಜಿ ಹೂವಿನ ಘಮ

    58 ಸದಸ್ಯ ಬಲದ ವಿಧಾನಪರಿಷತ್​ನಲ್ಲಿ ತೆಲುಗುದೇಶಂ ಪಾರ್ಟಿಗೆ ಹೆಚ್ಚು ಸದಸ್ಯಬಲವಿದ್ದು, ವೈಎಸ್​ಆರ್​ಸಿಗೆ ಯಾವುದೇ ಬಿಲ್​ಗಳನ್ನು ಪಾಸ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಆದಷ್ಟು ಶೀಘ್ರವಾಗಿ ವಿಧಾನಪರಿಷತ್ ರದ್ದುಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. (ಏಜೆನ್ಸೀಸ್)

    ಪ್ರಧಾನಿಯಿಂದ ಸಿಜೆಐವರೆಗೆ ವ್ಯಾಪಿಸಿದೆ ಚೀನಿ ಬೇಹು; ಸಿದ್ದರಾಮಯ್ಯ ಮೇಲೂ ಕಣ್ಗಾವಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts