More

    ಕೆಎಂಎಫ್‌ನೊಂದಿಗೆ ಅಮೂಲ್ ವಿಲೀನದ ನಿರ್ಧಾರ ನಾಡಿಗೆ ದ್ರೋಹ: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ

    ಮಂಡ್ಯ: ರಾಜ್ಯ ಸರ್ಕಾರ ಆಮೂಲಾಗ್ರವಾಗಿ ಪರಿಶೀಲಿಸದೆ, ಆಧ್ಯಯನ ನಡೆಸದೆ ಹಾಗೂ ಯಾವುದೇ ವರದಿಯನ್ನು ಪಡೆಯದೆ ಅಮೂಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ನಿರ್ಬಂಧವಿಲ್ಲದೆ ಮಾರಾಟ ಮಾಡುವುದು ಮತ್ತು ಕೆಎಂಎಫ್‌ನೊಂದಿಗೆ ವಿಲೀನ ಮಾಡಿಕೊಳ್ಳಲು ಮುಂದಾಗಿರುವುದು ನಾಡಿನ ಜನರಿಗೆ ಮಾಡಿದ ದ್ರೋಹ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ ಹೊರಹಾಕಿದ್ದಾರೆ.
    ಸಮಸ್ಯೆಗಳ ಗಂಭೀರತೆಯನ್ನು ಗಮನಿಸದೆ ರೈತರ, ಕಾರ್ಮಿಕರ, ಮಹಿಳೆಯರ ಮತ್ತು ಸಹಕಾರ ಸಂಘಗಳ ಅಸ್ತಿತ್ವದ ಬಗ್ಗೆ ಕಿಂಚಿತ್ತೂ ಚಿಂತನೆ ಮಾಡದೆ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ. ಅಮೂಲ್ ಹಾಲು ಹಾಗೂ ಇತರೆ ಉತ್ಪನ್ನಗಳನ್ನು ಕರ್ನಾಟಕದಲ್ಲಿ ನಿರ್ಬಂದವಿಲ್ಲದೆ ಮಾರಾಟ ಮಾಡುವುದು ಆಥವಾ ಕೆಎಂಎಫ್‌ನೊಂದಿಗೆ ವಿಲೀನ ಮಾಡುವುದು ಸೂಕ್ತವಲ್ಲ. ಅಮೂಲ್ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಲು ತೀರ್ಮಾನಿಸಿರುವುದು ನಾಡಿನ ಜನರಿಗೆ ಹಾಗೂ ಹಾಲು ಉತ್ಪಾದಕರಲ್ಲಿ ಸಹಜವಾಗಿ ಆತಂಕವನ್ನು ಉಂಟು ಮಾಡಿದೆ ಎಂದಿದ್ದಾರೆ.
    ರಾಜ್ಯದಲ್ಲಿ 15 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಗುಣಮಟ್ಟದ ನಂದಿನಿ ಹಾಲು ಹಾಗೂ ಉತ್ಪನ್ನಗಳು ರಾಷ್ಟ್ರದಲ್ಲಿ ಮಾನ್ಯತೆ ಪಡೆದಿದೆ. ಶೇ.50ಕ್ಕೂ ಹೆಚ್ಚು ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇದರಿಂದಾಗಿ ಲಕ್ಷಾಂತರ ಕುಟುಂಬಗಳು ಆರ್ಥಿಕ ಸಬಲೀಕರಣವನ್ನು ಹೊಂದುತ್ತಿವೆ. ಚುನಾವಣೆಯ ಸಮಯದಲ್ಲಿ ಹೈನುಗಾರಿಕೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರ ತಪ್ಪು ನಿರ್ಧಾರದಿಂದ ಹಾಲು ಉತ್ಪಾದಕರು ಮತ್ತು ಕೆಎಂಎಫ್ ತುಂಬ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಈ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸಿ ಅಮೂಲ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬಾರದು ಹಾಗೂ ಕೆಎಂಎಫ್‌ನೊಂದಿಗೆ ವಿಲೀನ ಮಾಡಬಾರದೆಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts