More

    ಅಮೃತ ಸಿಂಚನ ಅಂಕಣ| ಸಾರ್ಥಕ ಮಾನವ ಜೀವನದ ನಾಲ್ಕು ಮಜಲುಗಳು

    ಅಮೃತ ಸಿಂಚನ ಅಂಕಣ| ಸಾರ್ಥಕ ಮಾನವ ಜೀವನದ ನಾಲ್ಕು ಮಜಲುಗಳುಈ ಅಂಕಣದ ಹಿಂದಿನ ಎಂಟು ಲೇಖನಗಳಲ್ಲಿ ನಾವು ಸನಾತನ ಧರ್ಮದ ಮೂಲಭೂತ ಸಿದ್ಧಾಂತಗಳನ್ನು ತಿಳಿದುಕೊಂಡಿದ್ದೇವೆ. ಸನಾತನ ಧರ್ಮ ಒಂದು ಮತವಲ್ಲ, ಅದು ಸಷ್ಟಿಯನ್ನು ಆಳುವ ಪರಮೋಚ್ಚ ನಿಯಮ. ಸಕಲ ಸಷ್ಟಿಯ ದಿವ್ಯತೆ ಹಾಗೂ ಜೀವನವನ್ನು ನಿಯಂತ್ರಿಸುವ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತಗಳು ಸನಾತನ ಧರ್ಮದ ಎರಡು ಪ್ರಧಾನ ಸಿದ್ಧಾಂತಗಳಾಗಿವೆ. ಇದರ ಅತ್ಯುನ್ನತ ತತ್ತ$$$್ವವಾದ ಅದ್ವೆ$$ೈತ ವೇದಾಂತ ವೇದಗಳಲ್ಲಿ ಅಡಕವಾಗಿರುವ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ. ಆದುದರಿಂದ ಉಪನಿಷತ್ತುಗಳು ಸನಾತನ ಧರ್ಮದ ಮೂಲಗ್ರಂಥಗಳೆಂದು ಹೇಳಬಹುದು.

    ಹಾಗೆಯೇ ಸನಾತನ ಧರ್ಮದ ದೇವರು ನಾಮ&ರೂಪ&ಗುಣ&ಲಣಗಳಿಗೆ ಅತೀತ. ಅವನ ಅತ್ಯುತ್ತಮ ಸ್ವರೂಪನಿರೂಪಣೆಯೆಂದರೆ “ಸತ್ಯಂ ಜ್ಞಾನಂ ಅನಂತಂ’; ಎಂದರೆ ಶಾಶ್ವತ ಹಾಗೂ ಅನಂತ ಅಸ್ತಿತ್ವ ಮತ್ತು ಪರಿಪೂರ್ಣ ಪ್ರಜ್ಞೆಗಳೇ ಅವನ ಸ್ವರೂಪ. ಈ ನಮ್ಮ ಅದ್ಭುತ ವಿಶ್ವ ಅವನ ಅಭಿವ್ಯಕ್ತರೂಪವೇ ಆಗಿದೆ. ಪ್ರತಿ ಮಾನವನೂ ದೇವರ ಪ್ರತಿರೂಪವೇ ಆಗಿದ್ದರೂ, ಮಾಯೆ ಮನಸ್ಸಿನ ರೂಪದಲ್ಲಿ ಅವನನ್ನು ಆವರಿಸಿ ಅವನಿಂದ ಸತ್ಯವನ್ನು ಮರೆಮಾಚುತ್ತದೆ; ತಾನು ಕೇವಲ ದೇಹವೆಂಬ ಅಜ್ಞಾನದಲ್ಲಿ ಅವನು ಬೀಳುತ್ತಾನೆ. ಮಾನವನ ಅಂತರಂಗದಲ್ಲಿರುವ ಅಜ್ಞಾನದ ಕಗ್ಗಂಟನ್ನು ಹದಯಗ್ರಂಥಿಯೆಂದು ಕರೆಯುತ್ತಾರೆ. ಇಂತಹ ಅಜ್ಞಾನದಿಂದ ಹೊರಬರಬೇಕಾದರೆ ಇರುವ ದಾರಿ ಒಂದೇ. ಅದುವೇ ಆತ್ಮಜ್ಞಾನಿಯಾದ ಗುರುವಿನ ಮಾರ್ಗದರ್ಶನ ಹಾಗೂ ಅನುಗ್ರಹಗಳು.

    ಶಿಷ್ಯನು ಗುರುವಿನ ಸಹಾಯದಿಂದ ವಿವೇಕ, ಮಾನಸಿಕ ದಢತೆ, ಇಂದ್ರಿಯನಿಗ್ರಹ ಹಾಗೂ ಮುಮುತ್ವಗಳನ್ನು ಬೆಳೆಸಿಕೊಂಡು ಸಾಧನಾಪಥದಲ್ಲಿ ಮುಂದುವರಿಯಬೇಕು. ಇಂತಹ ಮಾನವನು ಮೋವನ್ನು ಪಡೆದು ಶಾಶ್ವತವಾದ ಆನಂದವನ್ನು ಅನುಭವಿಸುತ್ತಾನೆ. ಮೋ ಮರಣದ ನಂತರ ಮಾತ್ರವೇ ಲಭ್ಯವಾಗುವ ಸ್ಥಿತಿಯಲ್ಲ; ಬದುಕಿರುವಾಗಲೇ ಮೋ ಪಡೆದು ಜೀವನ್ಮುಕ್ತನಾಗಬಹುದು. ಇಂತಹ ಮುಕ್ತನು ಅಪಾರ ಪ್ರೇಮ&ಕರುಣೆಗಳ ಆಗರವಾಗಿದ್ದು, ತನ್ನ ಶೇಷಜೀವನವನ್ನು ಲೋಕಕಲ್ಯಾಣಕ್ಕಾಗಿ ಮುಡಿಪಾಗಿಟ್ಟು, ಜಗತ್ತಿಗೆ ಅವನು ಒಂದು ದೇವರ ವರವಾಗುತ್ತಾನೆ.

    ಇದನ್ನು ಅರ್ಥಮಾಡಿಕೊಂಡಾಗ, ನಮಗೆ ಸನಾತನ ಧರ್ಮ ಮಾನವ ಸಮುದಾಯದ ಎಂತಹ ಅದ್ಭುತ ಸಂಪತ್ತೆಂಬುದು ತಿಳಿಯುತ್ತದೆ! ಸಂನ್ಯಾಸಿಗಳು ಮಾತ್ರವಲ್ಲದೆ, ಜನಸಾಮಾನ್ಯರು ಕೂಡ ಇಂತಹ ಭವ್ಯವಾದ ಮೋಮಾರ್ಗದಲ್ಲಿ ನಡೆಯಬಹುದೇ? “ಖಂಡಿತ ಹೌದು,’ ಎಂದು ಸನಾತನ ಧರ್ಮ ೂಷಿಸಿ, ಪ್ರತಿ ಮಾನವನೂ ನಡೆಯಬಹುದಾದ ದಾರಿಯನ್ನು ಅದು ತೋರಿಸುತ್ತದೆ.

    ನಾವು ದೇವಾಲಯಗಳಲ್ಲಿ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಆಶೀರ್ವಚನವನ್ನು ಹಲವಾರು ಬಾರಿ ಕೇಳಿರಬಹುದು. “ಶತಮಾನಂ ಭವತಿ ಶತಾಯುಃ ಪುರುಷಸ್ಯ ಶತೇಂದ್ರಿಯ ಆಯುಷ್ಯೇವೇಂದ್ರಿಯೇ ಪ್ರತಿತಿಷ್ಠತಿ’. ತೆತ್ತೀರಿಯ ಬ್ರಾಹ್ಮಣದ ಈ ಮಂತ್ರದ ಅರ್ಥ: “ನಿನಗೆ ನೂರು ವರ್ಷಗಳ ಆರೋಗ್ಯಪೂರ್ಣ ಆಯುಷ್ಯ ಲಭಿಸಲಿ. ನೂರು ವರ್ಷಗಳ ಜೀವನಾದ್ಯಂತ ನಿನ್ನ ಬಹಿರಿಂದ್ರಿಯ ಹಾಗೂ ಅಂತರಿಂದ್ರಿಯಗಳು ಸದಢವಾಗಿದ್ದು, ನೀನು ನಿನ್ನ ಎಲ್ಲ ಕರ್ತವ್ಯಗಳನ್ನೂ ಮಾಡುವಂತಾಗಲಿ’. ಹೀಗೆ ಸನಾತನ ಧರ್ಮದಲ್ಲಿ ಮನುಷ್ಯನಿಗೆ ನೂರು ವರ್ಷಗಳ ಸಂಪೂರ್ಣ ಆರೋಗ್ಯದಿಂದ ಕೂಡಿದ ಆಯುಷ್ಯವನ್ನು ಹೊಂದುವಂತೆ ಆಶೀರ್ವಚನವಿದೆ. ಈ ನೂರು ವರ್ಷಗಳಲ್ಲಿ ಅವನು ತನ್ನ ಎಲ್ಲ ವೆಯಕ್ತಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ಸನಾತನ ಧರ್ಮದಲ್ಲಿ ಈ ನೂರು ವರ್ಷಗಳ ಜೀವನವನ್ನು ಇಪ್ಪತೆದು ವರ್ಷಗಳ ನಾಲ್ಕು ಹಂತ ಅಥವಾ ಮಜಲುಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಹಂತಕ್ಕೂ ತನ್ನದೇ ಆದ ನಿಯಮ ಹಾಗೂ ಕರ್ತವ್ಯಗಳಿವೆ. ನಾವು ಮಾನವ ಜೀವನದ ಆ ನಾಲ್ಕು ಮಜಲುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

    ಪ್ರತಿ ಮಾನವನೂ ತನ್ನ ಜೀವನದಲ್ಲಿ ಧರ್ಮ, ಅರ್ಥ, ಕಾಮ ಹಾಗೂ ಮೋಗಳೆಂಬ ಚತುವಿರ್ಧ ಪುರುಷಾರ್ಥಗಳನ್ನು ಸಾಧಿಸಬೇಕು. ಇವುಗಳಲ್ಲಿ ಮೋ ಸಾಧನೆ ಪ್ರಧಾನವಾಗಿದ್ದು, ಇತರ ಮೂರು ಉದ್ದೇಶಗಳಾದ ಧರ್ಮ, ಅರ್ಥ ಹಾಗೂ ಕಾಮಗಳು ಮೋ ಸಾಧನೆಗೆ ಸಹಾಯಕವಾಗಿರಬೇಕು. ಧರ್ಮಬದ್ಧ ಜೀವನವನ್ನು ನಡೆಸುತ್ತ, ಗಳಿಸಿದ ಅರ್ಥದಿಂದ ಧರ್ಮದ ಚೌಕಟ್ಟಿನಲ್ಲಿ ತನ್ನ ಕಾಮನೆಗಳನ್ನು ಪೂರೈಸಿಕೊಂಡು, ನಂತರ ಅವುಗಳೆಲ್ಲವನ್ನೂ ತ್ಯಾಗಮಾಡಿ ಮೋ ಪಡೆಯಬೇಕಾಗಿದೆ. ಈ ದಷ್ಟಿಯಿಂದ ಜೀವನವನ್ನು ಬ್ರಹ್ಮಚರ್ಯ, ಗಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸಗಳೆಂಬ ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಇದನ್ನು ಆಶ್ರಮ ಧರ್ಮವೆಂದು ಕರೆಯುತ್ತಾರೆ.

    ಜೀವನದ ಮೊದಲನೆಯ ಹಂತವಾದ ಬ್ರಹ್ಮಚರ್ಯಾಶ್ರಮದಲ್ಲಿ ಮಾನವನು ತನ್ನ ವಿದ್ಯಾಭ್ಯಾಸವನ್ನು ಮಾಡಿ, ಜೀವನಪೋಷಣೆಗೆ ಅವಶ್ಯಕವಾದ ವತ್ತಿಕುಶಲತೆಯ ಜೊತೆಗೆ, ತಾನು ಚರಮಗಮ್ಯವಾದ ಮೋ ಸಾಧನೆಯ ಗುರಿಯಿಂದ ವಿಚಲಿತನಾಗದೆ ಹೇಗೆ ತನ್ನ ಜೀವನವನ್ನು ಧರ್ಮಬದ್ಧವಾಗಿ ಸಾಗಿಸಬೇಕೆಂಬುದನ್ನು ಕಲಿಯುತ್ತಾನೆ. ಹೀಗೆ ಮೊದಲ ಇಪ್ಪತೆದು ವರ್ಷಗಳ ಬ್ರಹ್ಮಚರ್ಯಾಶ್ರಮದಲ್ಲಿ ಅವನು ವಿದ್ಯಾಭ್ಯಾಸದಿಂದ ಜ್ಞಾನಸಂಪಾದನೆ ಮಾಡುತ್ತಾನೆ. ಇದಕ್ಕಾಗಿ ಅವನು ಲೌಕಿಕ ಹಾಗೂ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಪರಿಣತನಾದ ಗುರುವಿನ ಬಳಿಗೆ ಹೋಗಿ ಗುರುಕುಲದಲ್ಲಿ ವಾಸಿಸುತ್ತ ವಿದ್ಯಾಭ್ಯಾಸ ಮಾಡುತ್ತಾನೆ. ಈ ಸಮಯದಲ್ಲಿ ಅವನು ಜೀವನ ಉಪಾಧಿ (ಲೌಕಿಕ ವಿದ್ಯೆ) ಹಾಗೂ ಜೀವನ ಪರಮಾವಧಿ (ಆಧ್ಯಾತ್ಮಿಕ ವಿದ್ಯೆ)ಗಳೆರಡನ್ನೂ ಕಲಿಯುತ್ತಾನೆ.

    ಬ್ರಹ್ಮಚರ್ಯಾಶ್ರಮದ ನಂತರದ ಮುಂದಿನ ಇಪ್ಪತೆದು ವರ್ಷಗಳಲ್ಲಿ ಮಾನವನು ಗಹಸ್ಥಾಶ್ರಮ ಆಶ್ರಯಿಸುತ್ತಾನೆ. ಈ ಸಮಯದಲ್ಲಿ ವಿವಾಹವಾಗಿ, ಮಕ್ಕಳನ್ನು ಪಡೆದು, ತಾನು ಕಲಿತಿರುವ ವತ್ತಿಯ ಮೂಲಕ ಸಮಾಜಸೇವೆ ಮಾಡಿ ಗಳಿಸಿದ ಧನದಿಂದ ಕುಟುಂಬದ ಪೋಷಣೆ ಮಾಡುತ್ತಾನೆ. ಈ ಇಪ್ಪತೆದು ವರ್ಷಗಳಲ್ಲಿ ಮಾನವನು ಧರ್ಮದ ಆಧಾರದಲ್ಲಿ ಅರ್ಥ ಹಾಗೂ ಕಾಮಗಳನ್ನು ಸಾಧಿಸುತ್ತಾನೆ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಈ ಆಶ್ರಮದ ಪ್ರಧಾನ ಕರ್ತವ್ಯವಾಗಿರುತ್ತದೆ. ಇದಲ್ಲದೆ, ತಂದೆ- ತಾಯಿಯರ ಪಾಲನೆ- ಪೋಷಣೆ ಹಾಗೂ ವಂಶದ ಪೂರ್ವಜರೆಡೆಗಿನ ಕತತೆಯನ್ನು ಶಾಸೊಕ್ತವಾದ ವಿಧಿಗಳ ಮೂಲಕ ಸಲ್ಲಿಸುವುದನ್ನು ಪಿತಯವೆಂದೂ, ಸರ್ವಶ್ರೇಷ್ಠವಾದ ಜೀವನ ವಿಧಾನವನ್ನು ನಮಗೆ ನೀಡಿರುವ ಋಷಿಗಳೆಡೆಗೆ ನಮ್ಮ ಕರ್ತವ್ಯವನ್ನು ಋಷಿಯವೆಂದೂ ಮತ್ತು ಸಹಮಾನವರೊಂದಿಗೆ ಹಾಗೂ ಇತರ ಜೀವಿಗಳೊಂದಿಗೆ ನಮ್ಮಲ್ಲಿರುವುದನ್ನು ಹಂಚಿಕೊಳ್ಳುವುದನ್ನು ನರಯ-ಭೂತಯಗಳೆಂದೂ ಕರೆಯುತ್ತಾರೆ. ಈ ಪಂಚಯಗಳಲ್ಲಿ ಅತಿ ಮುಖ್ಯವಾದುದು ದೆವಯ& ನಮ್ಮ ಅಂತಿಮ ಗಮ್ಯವಾದ ಭಗವಂತನೆಡೆಗೆ ನಮ್ಮ ಭಕ್ತಿ- ಶರಣಾಗತಿಗಳು.

    ವಾನಪ್ರಸ್ಥಾಶ್ರಮ ಜೀವನದ ಮುಂದಿನ ಇಪ್ಪತೆದು ವರ್ಷಗಳ ಅವಧಿಯ ಮಜಲು. “ವನದಲ್ಲಿ ಜೀವಿಸುವುದು’ ಎಂದು ಇದರ ಅರ್ಥ. ಈ ಹಂತದಲ್ಲಿ ಮಾನವನು ಗಹಸ್ಥಾಶ್ರಮದ ಕರ್ತವ್ಯಗಳನ್ನು ಬದಿಗಿಟ್ಟು, ಆಧ್ಯಾತ್ಮಿಕ ಸಾಧನೆ ಹಾಗೂ ಸಮಾಜಸೇವೆಗಳಲ್ಲಿ ತೊಡಗಬೇಕು. ಹಿಂದಿನ ಕಾಲದಲ್ಲಿ ಪತಿ-ಪತ್ನಿಯರು ತಮ್ಮ ಬಾಧ್ಯತೆಗಳನ್ನು ಬೆಳೆದ ಮಕ್ಕಳಿಗೆ ಒಪ್ಪಿಸಿ, ಸ್ವಗಹಗಳನ್ನು ಬಿಟ್ಟು ಕುಲಗುರುವಿನ ಆಶ್ರಮಕ್ಕೆ ಬಂದು ನೆಲೆಸುತ್ತಿದ್ದರು ಹಾಗೂ ಗುರುಕುಲದಲ್ಲಿ ಸೇವೆ ಹಾಗೂ ಆಧ್ಯಾತ್ಮಿಕ ಸಾಧನೆ ಮಾಡುತ್ತ ಜೀವನದ ಮುಂದಿನ ಮಜಲಾದ ಸಂನ್ಯಾಸಾಶ್ರಮಕ್ಕೆ ಸಿದ್ಧರಾಗುತ್ತಿದ್ದರು. ಆದರೆ ನಮ್ಮ ಇಂದಿನ ಕಾಲದಲ್ಲಿ ಅಂತಹ ಗುರುಗಳಾಗಲೀ, ಗುರುಕುಲಗಳಾಗಲೀ ಇಲ್ಲದೇ ಇರುವುದರಿಂದ, ನಾವು ಇದ್ದ ಸ್ಥಳಗಳಲ್ಲಿಯೇ ವಾಸಿಸುತ್ತ, ನಿಸ್ವಾರ್ಥ ಸಮಾಜಸೇವೆ ಹಾಗೂ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಬಹುದು.

    ಸಂನ್ಯಾಸಾಶ್ರಮದಲ್ಲಿ, ಹೇಗೆ ಒಂದು ಮರದಲ್ಲಿ ಕಾಯಿ ಸಹಜ ರೀತಿಯಲ್ಲಿ ಪಕ್ವವಾಗಿ ಲವಾಗಿ ಮಾರ್ಪಡುತ್ತದೆಯೋ, ಹಾಗೆಯೇ ಮಾನವನು ತನ್ನ ಆಧ್ಯಾತ್ಮಿಕ ಸಾಧನೆಯಿಂದ ಪಕ್ವವಾಗಿ, ಸದಾಕಾಲ ಆತ್ಮದ ಅರಿವಿನಲ್ಲಿ ಮುಳುಗಿ ತನ್ನ ದೇಹವನ್ನು ತ್ಯಜಿಸಲು ಸಿದ್ಧನಾಗುತ್ತಾನೆ. ಈ ಸ್ಥಿತಿಯಲ್ಲಿ ಅವನು ಜನನ- ಮರಣಗಳ ಚಕ್ರದಿಂದ ಪಾರಾಗಿ, ಜೀವನದ ಗಮ್ಯವಾದ ಮೋವನ್ನು ಪಡೆಯುತ್ತಾನೆ.

    ಈ ಆಶ್ರಮಧರ್ಮದ ವ್ಯವಸ್ಥೆ ನಮಗೆ ಪ್ರಾಚಿನ ಋಷಿದತ್ತವಾದ ಮಹಾ ವರವಾಗಿದೆ. ಇದನ್ನು ಅನುಸರಿಸಿ, ಪ್ರತಿಯೊಬ್ಬರೂ ಜೀವನದಲ್ಲಿ ಧರ್ಮ, ಅರ್ಥ, ಕಾಮ ಹಾಗೂ ಮೋಗಳನ್ನು ಸಾಧಿಸಬಹುದಾಗಿದೆ. ಮೊದಲ ಎರಡು ಮಜಲುಗಳಾದ ಬ್ರಹ್ಮಚರ್ಯ ಹಾಗೂ ಗಹಸ್ಥಾಶ್ರಮಗಳ ಮೂಲಕ ಮಾನವನು ಲೌಕಿಕ ಜೀವನ ಪ್ರವೇಶಿಸಿ, ಅಲ್ಲಿ ಸರಿಯಾದ ರೀತಿಯಲ್ಲಿ ನೆಲೆಸುವುದನ್ನು ಕಲಿಯುತ್ತಾನೆ; ನಂತರದ ಎರಡು ಹಂತಗಳಾದ ವಾನಪ್ರಸ್ಥ ಹಾಗೂ ಸಂನ್ಯಾಸಾಶ್ರಮಗಳಲ್ಲಿ, ಅವನು ಲೌಕಿಕ ಜೀವನದ ಬಂಧನಗಳಿಂದ ನಿರ್ಗಮಿಸುವುದನ್ನು ಕಲಿತು, ಮೋ ಪಡೆಯುತ್ತಾನೆ.

    ಪ್ರತಿ ಮಾನವನೂ ಮೋ ಸಾಧಿಸಲು ಈ ನಾಲ್ಕೂ ಆಶ್ರಮಗಳನ್ನು ಪಾಲಿಸಲೇಬೇಕೆಂಬ ನಿಯಮವೇನೂ ಇಲ್ಲ; ಇದಕ್ಕೆ ವಿನಾಯಿತಿಗಳೂ ಇವೆ. ಯೋಗ್ಯನಾದ ಯಾವುದೇ ವ್ಯಕ್ತಿ, ಸ್ವಯಂಇಚ್ಛೆಯಿಂದ ಬ್ರಹ್ಮಚರ್ಯದಿಂದ ನೇರವಾಗಿ ಸಂನ್ಯಾಸಾಶ್ರಮ ಪ್ರವೇಶಿಸಬಹುದಾಗಿದೆ. ಎಂದರೆ ಆ ವ್ಯಕ್ತಿ ಗಹಸ್ಥ ಹಾಗೂ ವಾನಪ್ರಸ್ಥಾಶ್ರಮಗಳನ್ನು ಪಾಲಿಸುವ ಆಗತ್ಯವಿರುವುದಿಲ್ಲ. ಅಂತಹ ವ್ಯಕ್ತಿಯನ್ನು ಸಮಾಜವು ಹೀಯಾಳಿಸುತ್ತಿರಲಿಲ್ಲ. ಬದಲಿಗೆ, ಲೌಕಿಕ ಕಾಮನೆಗಳನ್ನು ತ್ಯಜಿಸಿ ಮೋಸಾಧನೆಗಾಗಿ ನೇರವಾಗಿ ಸಂನ್ಯಾಸಾಶ್ರಮ ಸ್ವೀಕರಿಸಿದ ವ್ಯಕ್ತಿಯನ್ನು ಸಮಾಜ ಬಹುವಾಗಿ ಗೌರವಿಸಿ ಪೂಜ್ಯಭಾವನೆಯಿಂದ ನೋಡುತ್ತಿತ್ತು.

    ಅಂತಹ ವ್ಯಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅದ್ವೈತ ವೇದಾಂತಿಯಾದ ಶ್ರೀಆದಿ ಶಂಕರಾಚಾರ್ಯರು, ಬಾಲಕನಾಗಿದ್ದಾಗಲೇ ತಂದೆ ನಿಧನದ ನಂತರ ತಾಯಿ ಅನುಮತಿ ಪಡೆದು ನೇರವಾಗಿ ಸಂನ್ಯಾಸಾಶ್ರಮ ಸ್ವೀಕರಿಸಿದರು. ಹೀಗಾಗಿ ಅವರು ಗಹಸ್ಥ ಹಾಗೂ ವಾನಪ್ರಸ್ಥಾಶ್ರಮಗಳನ್ನು ಸ್ವೀಕರಿಸಲಿಲ್ಲ. ಹಾಗೆಯೇ ಸ್ವಾಮಿ ವಿವೇಕಾನಂದರೂ ಬ್ರಹ್ಮಚರ್ಯಾಶ್ರಮದಿಂದ ನೇರವಾಗಿ ಸಂನ್ಯಾಸಾಶ್ರಮ ಸ್ವೀಕರಿಸಿದರು. ಅದರಿಂದಾಗಿ ಇವರಿಬ್ಬರೂ ಜನನ-ಮರಣಗಳ ಚಕ್ರದಿಂದ ಮುಕ್ತರಾಗಿದ್ದು ಮಾತ್ರವಲ್ಲದೆ, ಯೌವ್ವನದ ಎಲ್ಲ ಶಕ್ತಿ-ಸಾಮರ್ಥ್ಯಗಳನ್ನು, ತಮ್ಮದೇ ಆದ ರೀತಿಯಲ್ಲಿ, ಸಮಾಜಸೇವೆಗಾಗಿ ಹಾಗೂ ಜಗತ್ತಿನಲ್ಲಿ ಆಧ್ಯಾತ್ಮಿಕತೆಯನ್ನು ಪ್ರಚಾರ ಮಾಡುವುದಕ್ಕಾಗಿ ಮೀಸಲಾಗಿಟ್ಟರು. ಅವರ ಜೀವನಧ್ಯೇಯ “ಆತ್ಮನೋ ಮೋಾರ್ಥಂ ಜಗತ್​ ಹಿತಾಯ ಚ- ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣ’ ಎಂಬುದೇ ಆಗಿತ್ತು. ಈ ಧ್ಯೇಯಕ್ಕಾಗಿ ಜೀವನವನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟ ವ್ಯಕ್ತಿಗಳನ್ನು ಇಂದೂ ಸಮಾಜದಲ್ಲಿ ಕಾಣಬಹುದು. ಯಾವುದೇ ಸಾಂಸಾರಿಕ ಭಾರ&ಬಾಧ್ಯತೆಗಳಿಲ್ಲದೆ ಇರುವುದರಿಂದ, ಇವರು ತಮ್ಮೆಲ್ಲ ಸಮಯ ಹಾಗೂ ಚೈತನ್ಯಗಳನ್ನು ಲೋಕಸೇವೆಯಲ್ಲಿ ತೊಡಗಿಸಿ ಅಪಾರ ಸಹಾಯ ಮಾಡಬಲ್ಲರು. ಇಂತಹ ವ್ಯಕ್ತಿಗಳನ್ನು ಸಮಾಜ ಕತತೆಯಿಂದ ಪೂಜಿಸುವುದು ಸಹಜವೇ ಸರಿ.

    ಆದರೆ ಸಾಮಾನ್ಯ ಮಾನವರು ಈ ನಾಲ್ಕೂ ಆಶ್ರಮ ಧರ್ಮಗಳನ್ನು, ಒಂದಾದ ಮೇಲೆ ಒಂದು ಮೆಟ್ಟಿಲನ್ನು ಏರುವಂತೆ, ಪಾಲಿಸಿ ಭವಬಂಧನದಿಂದ ಮುಕ್ತರಾಗಬಹುದು. ಪ್ರಾಚಿನ ಕಾಲದ ಭರತ ಚಕ್ರವತಿರ್ಯಂತೆ ರಾಜರಿರಬಹುದು, ಯಾವಲ್ಕ ್ಯ ಮಹಷಿರ್ಯಂತೆ ಋಷಿಗಳಾಗಿರಬಹುದು, ಅಥವಾ ಇತ್ತೀಚಿನ ಕಾಲದ ಮಹಾತ್ಮ ಗಾಂಧೀಜಿಯವರಾಗಿರಬಹುದು- ಇವರೆಲ್ಲರೂ ಈ ನಾಲ್ಕೂ ಆಶ್ರಮಗಳ ಮಾರ್ಗವನ್ನು ಅನುಸರಿಸಿದವರೇ. ಈ ಕ್ರಮವಾದ ಪಥವನ್ನು ಎಲ್ಲರೂ ಅನುಸರಿಸಬಹುದಾಗಿದೆಯಲ್ಲವೇ? ಸರ್ವರಿಗೂ ಉದ್ಧಾರಮಾರ್ಗವಾದ ಇಂತಹ ಅಮತಮಯ ಆಶ್ರಮ ಧರ್ಮವನ್ನು ಮಾನವ ಕುಲಕ್ಕೆ ನೀಡಿದ ಸನಾತನ ಧರ್ಮದ ಋಷಿಗಳ ಕರುಣೆ-ಅನುಕಂಪಗಳಿಗೆ ಎಲ್ಲೆಯಿದೆಯೇ!

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts