More

    ಆಸ್ಟ್ರಿಯಾ ಬಳಿಕ ಅಟ್ಲಾಂಟ ಚಿತ್ರೋತ್ಸವಕ್ಕೆ ಹರಿಪ್ರಿಯಾ ಅಮೃತಮತಿ

    ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿ, ಪುಟ್ಟಣ್ಣನವರು ನಿರ್ಮಿಸಿರುವ ಅಮೃತಮತಿ ಚಿತ್ರವು ಇತ್ತಿಚೆಗಷ್ಟೇ ಆಸ್ಟ್ರೀಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಗೊತ್ತೇ ಇದೆ. ಇದೀಗ ಇನ್ನೊಂದು ಸಂತೋಷದ ಸುದ್ದಿಯೊಂದಿಗೆ ಚಿತ್ರತಂಡ ಮುಂದೆಬಂದಿದೆ.
    ಅಮೃತಮತಿ ಚಿತ್ರವೂ ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತ ಆಯ್ಕೆಯಾಗಿದ್ದು, ಪ್ರದರ್ಶನಗೊಳ್ಳಲಿದೆ. ಕರೊನಾ ಕಾರಣದಿಂದ ಈ ಚಿತ್ರೋತ್ಸವ ಕೂಡ ಆನ್​ಲೈನ್​ ಮೂಲಕ ಜು. 29ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಈ ಸಿನಿಮಾ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದೆ.

    ಇದನ್ನೂ ಓದಿ: PHOTOS| ಶಿವಣ್ಣ ಹುಟ್ಟುಹಬ್ಬಕ್ಕೆ ಪೋಸ್ಟರ್​ಗಳ ಸುರಿಮಳೆ ಹೇಗಿದೆ ನೋಡಿ…

    ಹದಿಮೂರನೇ ಶತಮಾನದಲ್ಲಿ ಜನ್ನಕವಿ ರಚಿತ ಯಶೋಧರ ಚರಿತೆಯನ್ನು ಆಧರಿಸಿ ಅಮೃತಮತಿ ಸಿನಿಮಾ ಸಿದ್ಧವಾಗಿದೆ. ಪ್ರಾಚೀನ ಕನ್ನಡ ಕಾವ್ಯವೊಂದರ ಸಿನಿಮಾ ರೂಪವು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸ್ಪರ್ಧಾಕಣಕ್ಕೆ ಅಧಿಕೃತವಾಗಿರುವುದು ಕನ್ನಡ ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಿಗೆ ಸಂದ ಗೌರವವಾಗಿದೆ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹರ್ಷ ವ್ಯಕ್ತಪಡಿಸುತ್ತಾರೆ.

    ಇದನ್ನೂ ಓದಿ: ನಾನಾವತಿ ಆಸ್ಪತ್ರೆಯಿಂದ ತಮ್ಮ ಚಿತ್ರ ಹಂಚಿಕೊಂಡ ಅಮಿತಾಭ್​ ಬಚ್ಚನ್​

    ಈ ಚಿತ್ರದಲ್ಲಿ ಅಮೃತಮತಿಯಾಗಿ ಹರಿಪ್ರಿಯಾ ನಟಿಸಿದ್ದು, ಯಶೋಧರ ಪಾತ್ರದಲ್ಲಿ ಕಿಶೋರ್​ ಅಭಿನಯಿಸಿದ್ದಾರೆ. ಇತರೆ ತಾರಾಗಣದಲ್ಲಿ ಸುಂದರ್​ರಾಜ್​, ಪ್ರಮೀಳಾ ಜೋಷಾಯ್​, ತಿಲಕ್​, ಸುಪ್ರಿಯಾ ರಾವ್​, ಅಂಬರೀಷ್​ ಸಾರಂಗಿ, ವತ್ಸಲಾ ಮೋಹನ್​ ನಟಿಸಿದ್ದಾರೆ.

    ಎಣ್ಣೆ ಮತ್ತಿನಲ್ಲಿ ಶ್ರೀದೇವಿ ಕೋಣೆಗೆ ಸಂಜಯ್​ ದತ್​ ಎಂಟ್ರಿ; ಮುಂದಾಗಿದ್ದೇ ಬೇರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts