More

    ಚೆನ್ನೈ ಬಂದರು ಪ್ರದೇಶ ನಿವಾಸಿಗಳ ನಿದ್ದೆಗೆಡಿಸಿದ್ದ ಆತಂಕ ಕೊನೆಗೂ ದೂರ; ಎಲ್ಲಿಗೆ ರವಾನೆಯಾಯ್ತು ರಾಸಾಯನಿಕ?

    ಚೆನ್ನೈ: ವರ್ಷಗಳಿಂದ ಅಲ್ಲಿನ ಜನರು ಯಾವುದೇ ಆತಂಕವಿಲ್ಲದೇ ನೆಲೆಸಿದ್ದರು. ಆದರೆ, ಕೆಲ ದಿನಗಳ ಹಿಂದಷ್ಟೇ ನಮ್ಮ ನಡುವೆಯೇ ಭಾರಿ ಸ್ಫೋಟಕವಿದೆ ಎಂಬುದು ತಿಳಿಯುತ್ತಲೇ ನಿದ್ದೆಗಳನ್ನು ಕಳೆದುಕೊಂಡಿದ್ದರು. ಆದರೀಗ ಅವರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.

    ಚೆನ್ನೈ ಬಂದರು ಬಳಿ ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿದ್ದ ಅಮೋನಿಯಂ ನೈಟ್ರೇಟ್​ ಈಗ ಹೈದರಾಬಾದ್​ಗೆ ರವಾನೆಯಾಗುತ್ತಿದೆ. ಹೀಗಾಗಿ ಸ್ಥಳೀಯರು ಅಬ್ಬಾ..! ಆತಂಕವೊಂದು ದೂರಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

    ಐದು ದಿನಗಳ ಹಿಂದೆ ಲೆಬನಾನ್​ನ ಬೈರುತ್​ನಲ್ಲಿ 2,700 ಟನ್​ ಅಮೋನಿಯಂ ನೈಟ್ರೇಟ್​ ಸ್ಫೋಟಿಸಿ ಇಡೀ ರಾಜಧಾನಿಯೇ ಧ್ವಂಸಗೊಂಡಿದೆ. ಈ ಘಟನೆ ಬಳಿಕ ಚೆನ್ನೈ ಬಂದರಿನಲ್ಲೂ 740 ಟನ್​ ಅಮೋನಿಯಂ ನೈಟ್ರೇಟ್​ ದಾಸ್ತಾನಿದೆ ಎಂಬ ವಿಚಾರ ಭಾರಿ ಕಳವಳಕ್ಕೆ ಕಾರಣವಾಗಿತ್ತು.

    ಇದನ್ನೂ ಓದಿ; ಮುಗಿಯುತ್ತ ಬಂತು ಅರ್ಧ ಶೈಕ್ಷಣಿಕ ವರ್ಷ; ನರ್ಸರಿ ಬಳಿಕ ಮುಚ್ಚುವ ಭೀತಿಯಲ್ಲಿವೆಯೇ ಖಾಸಗಿ ಶಾಲೆಗಳು?

    ಒಟ್ಟು 36 ಕಂಟೇನರ್​ಗಳಲ್ಲಿ ಇದನ್ನು ಸಂಗ್ರಹಿಸಿಡಲಾಗಿತ್ತು. ಈ ಪ್ರದೇಶದಿಂದ ಅಂದಾಜು 1.5 ಕಿ.ಮೀ. ವ್ಯಾಪ್ತಿಯಲ್ಲಿ 12,000ಕ್ಕೂ ಅಧಿಕ ಜನರು ವಾಸವಿದ್ದಾರೆ ಎಂದು ಲೆಕ್ಕ ಹಾಕಲಾಗಿತ್ತು. ಹೀಗಾಗಿ ಇದನ್ನು ಆದಷ್ಟು ಬೇಗ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

    ಕರೂರಿನ ಅಮ್ಮನ್​ ಕೆಮಿಕಲ್ಸ್​ ಕಂಪನಿ 2015ರಲ್ಲಿ ಇದನ್ನು ತರಿಸಿತ್ತು. ಆದರೆ ಪರವಾನಗಿ ವಿವಾದದ ಕಾರಣದಿಂದಾಗಿ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದರ ಹರಾಜಿಗೆ ಪ್ರಕ್ರಿಯೆಗಳನ್ನು ನಡೆಸಿದ ಕಸ್ಟಮ್ಸ್​ ಇಲಾಖೆ ಹೈದರಾಬಾದ್​ನ ಕಂಪನಿಯನ್ನು ಅಂತಿಮಗೊಳಿಸಿದೆ. 36 ಕಂಟೇನರ್​ಗಳನ್ನು ತಲಾ 10 ಕಂಟೇನರ್​ಗಳಂತೆ ರಸ್ತೆ ಮಾರ್ಗದಲ್ಲಿ ಸಾಗಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ; ಪ್ರತಿದಾಳಿಗೆ ಅಣುಶಕ್ತಿಯನ್ನೇ ಬಳಸ್ತೀವಿ; ರಷ್ಯಾ ಸೇನೆ ನೀಡಿದೆ ಎಚ್ಚರಿಕೆ 

    ಆದರೆ, ಒಟ್ಟು 740 ಟನ್​ ಪೈಕಿ 697 ಟನ್​ ಮಾರಾಟ ಮಾಡಲಾಗಿದ್ದು, ಇನ್ನುಳಿದ ಸರಕನ್ನು ಯಾವಾಗ ಹರಾಜು ಮಾಡಲಾಗುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ.

    ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts