More

    ಕುಂದಗೋಳಕ್ಕೆ ಆಗಮಿಸಿದ ಅಮಿತ್​ ಷಾ; ರೋಡ್​ ಶೋ ಮೂಲಕ ಕಾಂಗ್ರೆಸ್​ ಭದ್ರಕೋಟೆಯಲ್ಲಿ ರಣಕಹಳೆ

    ಹುಬ್ಬಳ್ಳಿ: ಅಮಿತ್ ಶಾ ಭೇಟಿ ಹಿನ್ನೆಲೆ ಕುಂದಗೋಳದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದ್ದು ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸೋ ಕಸರತ್ತನ್ನು ಷಾ ಮಾಡಲಿದ್ದಾರೆ. ಅದಕ್ಕೂ ಮೊದಲು ಧಾರವಾಡದ ಫೊರೆನ್ಸಿಕ್​ ವಿವಿಯನ್ನು ಉದಘಾಟಿಸಿದ ಅಮಿತ್​ ಷಾ, ‘ಧಾರವಾಡದಲ್ಲಿ ಎನ್‌ಎಫ್‌ಎಸ್‌ಯು ಕ್ಯಾಂಪಸ್ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡಿದ ಗೃಹಮಂತ್ರಿ ಅಮಿತ್​ ಷಾ ‘ಕರ್ನಾಟಕ ರಾಜ್ಯದ ಬಗ್ಗೆ ಬಹಳ ಹತ್ತಿರದಿಂದ ಬಲ್ಲೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಕೊಡುಗೆ ಕರ್ನಾಟಕ ರಾಜ್ಯ ನೀಡಿದೆ.

    ಇವತ್ತು ಅಪರಾಧ ಪತ್ತೆಯಲ್ಲಿ‌ ನಾವು ಬೆಳೆದಿದ್ದೇವೆ. ಇದಕ್ಕೆ ಅಡಿಪಾಯ ಹಾಕಿದ್ದು ಎಲ್.ಕೆ. ಅಡ್ವಾಣಿ. ಅವರು ಗೃಹ ಸಚಿವರು ಇದ್ದಾಗಲೇ ಇಂತಹುದನ್ನೆಲ್ಲ ಆರಂಭಿಸಿದ್ದರು. ಮುಂದೆ ಜಗತ್ತಿನಲ್ಲಿಯೇ ಹೆಚ್ಚು ಫೋರೆನ್ಸಿಕ್ ತಜ್ಞರನ್ನು ಹೊಂದಿದ ದೇಶ ಭಾರತ ಆಗಲಿದೆ

    ಇವತ್ತು ಅಪರಾಧ ಜಗತ್ತು ಬೇರೆ ಬೇರೆ ಆಯಾಮದಲ್ಲಿ ಬೆಳೆದಿದೆ. ಪೊಲೀಸರಿಗಿಂತ ಅಪರಾಧಿಗಳು ಎರಡು ಹೆಜ್ಜೆ ಮುಂದೆ ಇದ್ದಾರೆ. ಆದರೆ ಪೊಲೀಸರು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದೆ ಹೋಗಬೇಕಿದೆ. ಇದಕ್ಕಾಗಿ ಈಗ ತಂತ್ರಜ್ಞಾನ ಅಧಾರಿತ ತನಿಖೆ ಬೇಕಾಗಿದೆ. ಅಪರಾಧಿಗಳಿಗೆ ಶಿಕ್ಷೆ ಆಗಬೇಕಾದ ಅಪರಾಧ ದೃಢ ಆಗಬೇಕು. ಹೀಗಾಗಿ ಅಪರಾಧ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ ಅದರಲ್ಲಿ ಫೊರೆನ್ಸಿಕ್​ ತಜ್ಞರ ಪಾತ್ರ ತುಂಬಾ ಇದೆ. ಹೀಗಾಗಿ ಈ ವಿವಿ ಬಹಳ ಮಹತ್ವದ ಪಾತ್ರ ವಹಿಸಲಿದೆ’ ಎಂದ ಅವರು, ಕಾರ್ಯಕ್ರಮ ಮುಗಿಸಿ ಕುಂದಗೋಳಕ್ಕೆ ಹೆಲಿಕಾಪ್ಟರ್​ ಮೂಲಕ ತೆರಳಿದರು. ಈ ಸಂದರ್ಭ ಕುಂದಗೋಳಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸ್ವಾಗತಿಸಿದ್ದು ಈ ಸಂದರ್ಭ ಎಂ.ಆರ್. ಪಾಟೀಲ ಮತ್ತು ಎಸ್.ಐ ಚಿಕ್ಕನಗೌಡರು ಶಾಲು ಹೊದಿಸಿ, ಮಾಲೆ ಹಾಕಿ ಸ್ವಾಗತ ಕೋರಿದ್ದಾರೆ.

    ಇದೀಗ ಚುನಾವಣಾ ಚಾಣಾಕ್ಷ ಅಮಿತ್​ ಷಾರಿಂದ ರಣಕಹಳೆ ಮೊಳಗಲಿದ್ದು ಅವರು ರೋಡ್ ಶೋ ಮೂಲಕ ಆಗಮಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಅಬ್ಬರದ ಸ್ವಾಗತ ಕೋರಲು ಕುಂದಗೋಳ‌ ಜನ ಸಿದ್ಧರಾಗಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಗೋಡೆ ಬರಹಕ್ಕೂ ಅಮಿತ್ ಶಾ ಚಾಲನೆ ನೀಡಲಿದ್ದು ಕುಂದಗೋಳ ಪಟ್ಟಣದ ಬಸವರಾಜ ಹಂಚಿನಮನಿ ಅವರ ಮನೆಗೆ ಗೋಡೆ ಬರಹಕ್ಕೆ ಸಿದ್ಧತೆ ನಡೆಸಲಾಗಿದೆ.

    ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಪಟ್ಟಣದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಕೃಷಿ ವಿವಿಯಲ್ಲಿಯೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿರುವ ಅಮಿತ್​ ಷಾ, ವಿಶ್ರಾಂತಿ ಬಳಿಕ ರೋಡ್​ ಶೋ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts