More

    ಮಗಳೊಂದಿಗೆ ನಟಿಸಿದ ‘ಬಿಗ್​ ಬಿ’ … ಯಾವ ಚಿತ್ರ?

    ಮುಂಬೈ: ಬಾಲಿವುಡ್​ನ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಅವರು ಹೆಂಡತಿ ಜಯಾ ಬಚ್ಚನ್​, ಮಗ ಅಭಿಷೇಕ್​ ಬಚ್ಚನ್​ ಮತ್ತು ಸೊಸೆ ಐಶ್ವರ್ಯಾ ರೈ ಜತೆಗೆ ಕೆಲವು ಚಿತ್ರಗಳಲ್ಲಿ ನಟಿಸಿರಲಿಲ್ಲ. ಇದೀಗ ಅಮಿತಾಭ್​ ಬಚ್ಚನ್​ ಮತ್ತು ಅವರ ಮಗಳು ಶ್ವೇತಾ ನಂದ ತೆರೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಜಗ್ಗೇಶ್​ ಹೀರೋ ಆಗುವುದಕ್ಕೆ ಪ್ರೇರೇಪಿಸಿದ್ದು ಯಾರು ಗೊತ್ತಾ?

    ಇಷ್ಟು ಕೇಳುತ್ತಿದ್ದಂತೆ ಯಾವ ಚಿತ್ರ? ಏನು ಕಥೆ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಬರಬಹುದು. ಅಮಿತಾಭ್​ ಮತ್ತು ಅವರ ಮಗಳು ಶ್ವೇತಾ ಜತೆಯಾಗಿ ನಟಿಸಿರುವುದು ಸಿನಿಮಾದಲ್ಲ್ಲ, ಜಾಹೀರಾತೊಂದರಲ್ಲಿ. ಇದರಲ್ಲಿ ಅವರಿಬ್ಬರಷ್ಟೇ ಅಲ್ಲ, ಜಯಾ ಬಚ್ಚನ್​ ಸಹ ಕಾಣಿಸಿಕೊಂಡಿದ್ದಾರೆ.

    ಇತ್ತೀಚೆಗೆ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು, ಅಮಿತಾಭ್​, ಜಯಾ ಮತ್ತು ಶ್ವೇತಾ ಜತೆಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಈ ಮೂವರೂ ಎರಡೆರೆಡು ವಿಭಿನ್ನ ಕಾಸ್ಟ್ಯೂಮ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಅಮಿತಾಭ್​ ಬಚ್ಚನ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಪತ್ನಿ ಮತ್ತು ಮಗಳ ಜತೆಗಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಈ ಫೋಟೋಗಳಿಗೆ ಅವರು ‘ಫ್ಯಾಮಿಲಿ ಅಟ್​ ವರ್ಕ್​’ ಎಂಬ ಕ್ಯಾಪ್ಶನ್​ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕುಟುಂಬದವರು ಒಟ್ಟಿಗೆ ನಟಿಸುವಾಗ ಒಂದು ಹಿತವಾದ ಅನುಭವ ಸಿಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​…

    ಅಮಿತಾಭ್​ ತಮ್ಮ ಹೆಂಡತಿ ಮತ್ತು ಮಗಳ ಜತೆಗೆ ಕಾಣಿಸಿಕೊಂಡಿರುವ ಜಾಹೀರಾತು ಯಾವ ಬ್ರಾಂಡ್​ದು ಇರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಜಾಹೀರಾತು ಸದ್ಯದಲ್ಲೇ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

    ಆಸ್ಕರ್​ ಸ್ಪರ್ಧೆಗೆ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts