More

    ಖ್ಯಾತ ಕಂಪನಿ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ಅಮಿತಾಬ್…ಹಾಗಾದ್ರೆ ವಾರ್ಷಿಕ ಲಾಭವೆಷ್ಟು ಗೊತ್ತೇ?

    ಮುಂಬೈ: ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ 2023ರ ಅಂತ್ಯದ ಮೊದಲು ಮತ್ತೊಂದು ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅಮಿತಾಬ್ ಮುಂಬೈನಲ್ಲಿರುವ ತಮ್ಮ ಕಚೇರಿಯ ನಾಲ್ಕು ಯುನಿಟ್​​​​​​ಗಳನ್ನು ವಾರ್ನರ್ ಮ್ಯೂಸಿಕ್ ಕಂಪನಿಗೆ 5 ವರ್ಷಗಳ ಕಾಲ ಗುತ್ತಿಗೆ ನೀಡಲು ನಿರ್ಧರಿಸಿದ್ದಾರೆ.
    ವರದಿ ಪ್ರಕಾರ, ಈ ಒಪ್ಪಂದದ ನಂತರ ಅಮಿತಾಬ್ ಬಚ್ಚನ್ ವಾರ್ಷಿಕ 2 ಕೋಟಿ ರೂಪಾಯಿ ಬಾಡಿಗೆ ಪಡೆಯುತ್ತಾರೆ. ಈ ವ್ಯವಹಾರದಲ್ಲಿ 2.88 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಸೇರಿದೆ ಎಂದು ವರದಿಯಾಗಿದೆ.

    ಈ ಕಚೇರಿ ಎಲ್ಲಿದೆ?
    ಈ ಕಚೇರಿಯು ಲೋಟಸ್ ಸಿಗ್ನೇಚರ್ ಬಿಲ್ಡಿಂಗ್‌ನ 21 ನೇ ಮಹಡಿಯಲ್ಲಿದ್ದು, ಸಾಜಿದ್ ನಾಡಿಯಾಡ್ವಾಲಾ ಅವರ ಓಶಿವಾರಾ ಕಚೇರಿಯ ಬಳಿ ಇದೆ. ಲೋಟಸ್ ಸಿಗ್ನೇಚರ್ ಬಿಲ್ಡಿಂಗ್ ಈಗಾಗಲೇ ಕಾಜೋಲ್, ಮನೋಜ್ ಬಾಜ್‌ಪೇಯಿ, ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಅವರಂತಹ ಅನೇಕ ಸೆಲೆಬ್ರಿಟಿಗಳ ಕಚೇರಿಗಳನ್ನು ಹೊಂದಿದೆ.

    ಎಷ್ಟು ದೊಡ್ಡದಾಗಿದೆ ಗೊತ್ತಾ?
    ಅಮಿತಾಭ್ ಬಚ್ಚನ್ ಅವರು ಆಗಸ್ಟ್ 2023 ರಲ್ಲಿ ಓಶಿವಾರದಲ್ಲಿ ಸುಮಾರು 10,000 ಚದರ ಅಡಿಯ ನಾಲ್ಕು ವಾಣಿಜ್ಯ ಘಟಕಗಳನ್ನು ಖರೀದಿಸಿದ್ದರು, ಇದಕ್ಕಾಗಿ ಬಚ್ಚನ್ ಪ್ರತಿ ಘಟಕಕ್ಕೆ ಅಂದಾಜು 7.18 ಕೋಟಿ ರೂ. ಪಾವತಿಸುತ್ತಿದ್ದರು. ಡಾಕ್ಯುಮೆಂಟ್ ಪ್ರಕಾರ, ವಹಿವಾಟು ಮಾರ್ಚ್ 2024 ರಿಂದ ಪ್ರಾರಂಭವಾಗುತ್ತದೆ.

    ವಾರ್ನರ್ ಮ್ಯೂಸಿಕ್ ಕಂಪನಿ
    ವಾರ್ನರ್ ಮ್ಯೂಸಿಕ್ ಕಂಪನಿಯು ನ್ಯೂಯಾರ್ಕ್‌ನಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿರುವ ಅಮೇರಿಕನ್ ಬಹುರಾಷ್ಟ್ರೀಯ ಕಂಪನಿಯಾಗಿದೆ. ಯುನಿವರ್ಸಲ್ ಮ್ಯೂಸಿಕ್ ಗ್ರೂಪ್ ಮತ್ತು ಸೋನಿ ಮ್ಯೂಸಿಕ್ ಎಂಟರ್‌ಟೈನ್‌ಮೆಂಟ್ ನಂತರ ಈ ಕಂಪನಿಯು ಜಾಗತಿಕ ಸಂಗೀತ ಉದ್ಯಮದಲ್ಲಿ ಮೂರನೇ ಅತಿದೊಡ್ಡ ಕಂಪನಿಯಾಗಿದೆ.

    2020 ರಲ್ಲಿ, ವಾರ್ನರ್ ಮ್ಯೂಸಿಕ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯ ಪ್ರಾರಂಭಿಸಿತು. ವಾರ್ನರ್ ಮ್ಯೂಸಿಕ್ ಕಂಪನಿಯು ಇದುವರೆಗೆ ಮಾನ್ ಮೇರಿ ಜಾನ್, ಹೀರಿಯೇ, ಮಹಿಯೆ ಜಿನ್ನಾ ಸೊಹ್ನಾ, ಏಕ್ತಾಫಾ ಮುಂತಾದ ಅನೇಕ ಹಿಟ್ ಹಾಡುಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. 

    ರಾಮಲಲ್ಲಾ ವಿಗ್ರಹ ಫೈನಲ್ ಆದರೂ ಜ.17 ರವರೆಗೆ ಫೋಟೋ ಸೇರಿದಂತೆ ಯಾವುದೇ ವಿವರ ರಿವೀಲ್‌ ಮಾಡಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts