More

    ರಾಮಲಲ್ಲಾ ವಿಗ್ರಹ ಫೈನಲ್ ಆದರೂ ಜ.17 ರವರೆಗೆ ಫೋಟೋ ಸೇರಿದಂತೆ ಯಾವುದೇ ವಿವರ ರಿವೀಲ್‌ ಮಾಡಲ್ಲ!

    ಅಯೋಧ್ಯೆ: ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲಾ (ಬಾಲರಾಮ) ವಿಗ್ರಹವನ್ನು ಡಿಸೆಂಬರ್ 29 ರಂದು ಆಯ್ಕೆ ಮಾಡಲಾಗಿದೆ. ಆದರೆ, ಮೂರರಲ್ಲಿ ಯಾವ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ ಎಂಬುದು ಸಾರ್ವಜನಿಕರಿಗೆ ಜನವರಿ 17 ರಂದು ‘ನಗರ ಯಾತ್ರೆ’ಗೆ ಕರೆದೊಯ್ಯುವಾಗ ಮಾತ್ರ ತಿಳಿಯುತ್ತದೆ. ಅಯೋಧ್ಯೆಯಲ್ಲಿ ಟ್ರಸ್ಟ್‌ನ ಎಲ್ಲಾ 11 ಸದಸ್ಯರು ಡಿಸೆಂಬರ್ 29 ರಂದು ಸಭೆ ಸೇರಿದಾಗ ಮತದಾನದ ಮೂಲಕ ವಿಗ್ರಹವನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಸೋಮವಾರ ಪೂರ್ಣಗೊಂಡಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

    11 ಸದಸ್ಯರೂ ತಮ್ಮ ಆದ್ಯತೆಗಳನ್ನು ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರಿಗೆ ಲಿಖಿತವಾಗಿ ಸಲ್ಲಿಸಿದ್ದಾರೆ.
    ಆದರೆ ಜನವರಿ 17 ರವರೆಗೆ ವಿಗ್ರಹದ ಯಾವುದೇ ಫೋಟೋ ಅಥವಾ ವಿಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡುವುದಿಲ್ಲ. ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ವಿಗ್ರಹವನ್ನು ಆಯ್ಕೆ ಮಾಡಲಾಗಿದೆ, ಆದರೆ ಜನವರಿ 17 ರವರೆಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ನಗರ ಯಾತ್ರೆ ವೇಳೆ ವಿಗ್ರಹಕ್ಕೆ ಕಣ್ಣು ಕಟ್ಟಲಾಗುವುದು ಎಂದು ತಿಳಿಸಿದ್ದಾರೆ. 

    ಉದ್ದೇಶಪೂರ್ವಕವಾಗಿ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ದೇವಸ್ಥಾನ ನಿರ್ಮಾಣದ ಬಗ್ಗೆ ಜನರು ನಿತ್ಯವೂ ಮಾಹಿತಿ ಪಡೆಯುತ್ತಿದ್ದಾರೆ. ಶಿಲ್ಪಿಗಳು ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಯಾರೂ ಇನ್ನೂ ಮುಖವನ್ನು ನೋಡಿಲ್ಲ, ಅದನ್ನು ಮಹಾಮಸ್ತಕಾಭಿಷೇಕದ ಸಮಯದಲ್ಲಿ ಮಾತ್ರ ಸಾರ್ವಜನಿಕವಾಗಿ ಹೊರತರುವುದು ಸೂಕ್ತ. ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು ಅದರ ಫೋಟೋಗಳು ಎಲ್ಲಾ ಕಡೆ ಹರಿದಾಡುವುದು ನಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

    ಜನವರಿ 22 ರಂದು ಮಧ್ಯಾಹ್ನ 12.20 ರಿಂದ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ ಪ್ರಾರಂಭವಾಗಲಿದೆ. ಸೂರ್ಯಾಸ್ತದ ನಂತರ ದೀಪಗಳನ್ನು ಬೆಳಗಿಸಲಾಗುತ್ತದೆ ಎಂದು ರೈ ಸುದ್ದಿಗಾರರಿಗೆ ತಿಳಿಸಿದರು. ಸೋಮವಾರ ಅಯೋಧ್ಯೆಯಲ್ಲಿ ನಡೆದ ‘ಅಕ್ಷತ್’ ವಿತರಣಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಚಂಪತ್ ರೈ ಭಾಗವಹಿಸಿದ್ದರು. 25 ಕೋಟಿಗೂ ಹೆಚ್ಚು ಜನರಿಗೆ ಅಕ್ಷತೆ ಕಾಳು ವಿತರಿಸಲಾಗುತ್ತಿದ್ದು, ಜನವರಿ 22 ರಂದು ತಮ್ಮ ಮನೆಗಳಲ್ಲಿ ಮತ್ತು ಹತ್ತಿರದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಬೇಕು ಎಂದು ಅವರು ಕೋರಿದರು.   

    VIDEO | ಜಪಾನ್‌ನಲ್ಲಿ ಒಂದೇ ದಿನದಲ್ಲಿ 155 ಕಡೆ ಭೂಕಂಪ, ಇದುವರೆಗೆ 13 ಮಂದಿ ಸಾವು …ಎಚ್ಚರಿಕೆ ನೀಡಿದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts