More

    ಕರೊನಾ ಜಾಗೃತಿ ಕಿರುಚಿತ್ರದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿಗಳು! ;ಇಂದು ರಾತ್ರಿ 9ಕ್ಕೆ ಸೋನಿ ನೆಟ್​ವರ್ಕ್​ನಲ್ಲಿ ಪ್ರಸಾರ.

    ಕರೊನಾ ಬಗ್ಗೆ ಭೀತಿ ಬೇಡ, ಜಾಗೃತಿ ಇರಲಿ ಎಂದು ಸರ್ಕಾರ ಮೇಲಿಂದ ಮೇಲೆ ಜಾಹೀರಾತು ಮೂಲಕ ಆಜ್ಞೆ ಮಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟಪ್ಪಣೆ ಹೊರಡಿಸಿದೆ. ಇಡೀ ರಾಷ್ಟ್ರವನ್ನೇ ಲಾಕ್​ಡೌನ್​ ಮಾಡಲಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಈಗ ಸಿನಿಮಾ ಕ್ಷೇತ್ರದ ಘಟಾನುಟಿಗಳು ಮೊದಲ ಬಾರಿ ಒಟ್ಟಾಗಿದ್ದಾರೆ. ಅದೂ ಕಿರುಚಿತ್ರದ ಮೂಲಕ ಎಂಬುದು ವಿಶೇಷ!
    ಹೌದು, ಬಾಲಿವುಡ್​ನಿಂದ ಹಿಡಿದು ದಕ್ಷಿಣ ಭಾರತೀಯ ಸಿನಿಮಾರಂಗದ ಸ್ಟಾರ್​ ಕಲಾವಿದರು “ಫ್ಯಾಮಿಲಿ’ ಹೆಸರಿನ ಕಿರುಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಈ ಕಿರುಚಿತ್ರದಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​, ಸೂಪರ್​ಸ್ಟಾರ್​ ರಜನಿಕಾಂತ್​, ಪ್ರಿಯಾಂಕಾ ಚೋಪ್ರಾ, ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಕಾಣಿಸಿಕೊಳ್ಳಲಿದ್ದಾರೆ. ಈ ಕಿರುಚಿತ್ರ ಮನೆಯಲ್ಲಿಯೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ ಎಂಬಂಥ ಸಂದೇಶಾತ್ಮಕ ಅಂಶಗಳನ್ನು ಹೇಳಲಾಗಿದೆ. ಈ ಕಿರುಚಿತ್ರ ಸೋನಿ ಪಿಕ್ಚರ್ಸ್​ನಲ್ಲಿ ಸೋಮವಾರ (ಇಂದು) ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಕಿರುಚಿತ್ರದ ಅವಧಿ ಎಷ್ಟು, ಎಷ್ಟು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ? ಈ ಎಲ್ಲ ಕುತೂಹಲಗಳಿಗೂ ಇಂದು ರಾತ್ರಿ 9ಕ್ಕೆ ಉತ್ತರ ಸಿಗಲಿದೆ.
    ಅಂದಹಾಗೆ, ಪ್ರಸೂನ್​ ಪಾಂಡೆ ಈ “ಫ್ಯಾಮಿಲಿ’ ಕಿರುಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಪ್ರಸೂನ್​ ಅವರದ್ದು ಚಿರಪರಿಚಿತ ಹೆಸರು. ವಿಶ್ವದ 100 ಅತ್ಯುತ್ತಮ ಜಾಹೀರಾತು ನಿರ್ದೇಶಕರ ಪಟ್ಟಿಯಲ್ಲಿ ಪ್ರಸೂನ್​ 24ನೇ ಸ್ಥಾನದಲ್ಲಿದ್ದಾರೆ. ಸರಣಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ಈಗ ಕರೊನಾ ಜಾಗೃತಿ ಕುರಿತ ಕಿರುಚಿತ್ರ ಸಿದ್ಧಪಡಿಸಿದ್ದಾರೆ. (ಏಜೆನ್ಸೀಸ್​)

    ಬೇರೆ ಅರ್ಥ ಕಲ್ಪಿಸಿ ಚರ್ಚೆ ಬೇಡ … ‘ರಿಯಲ್ ಸ್ಟಾರ್’ ಹೀಗೆ ಹೇಳಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts