More

  ನಾನಿ ಅಭಿನಯದ ಇನ್ನೊಂದು ಚಿತ್ರ ಶುರು; ಈ ಬಾರಿ ಮೃಣಾಲ್​ ನಾಯಕಿ

  ಹೈದರಾಬಾದ್​: ನಾನಿ ಅಭಿನಯದ ‘ದಸರಾ’ ಚಿತ್ರದ ಟೀಸರ್​ ಸೋಮವಾರವಷ್ಟೇ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಅದೇ ದಿನ ಅವರ ಇನ್ನೊಂದು ಹೊಸ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರದ ಮುಹೂರ್ತಕ್ಕೆ ‘ಮೆಗಾಸ್ಟಾರ್​’ ಚಿರಂಜೀವಿ ಬಂದು, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದ್ದಾರೆ.

  ಇದನ್ನೂ ಓದಿ: ಸತತ ಸೋಲುಗಳಿಂದ ಪರ್ಯಾಯ ವೃತ್ತಿಯ ಬಗ್ಗೆ ಯೋಚಿಸಿದ್ದರಂತೆ ಶಾರುಖ್​!

  ನಾನಿ ಅಭಿನಯದ ಇನ್ನೊಂದು ಚಿತ್ರ ಶುರು; ಈ ಬಾರಿ ಮೃಣಾಲ್​ ನಾಯಕಿಹೊಸ ವರ್ಷದ ಮೊದಲ ದಿನ ನಾನಿ ಅಭಿನಯದ ಹೊಸ ಚಿತ್ರದ ಘೋಷಣೆಯಾಗಿತ್ತು. ನಾನಿ ಚಿತ್ರಜೀವನದ 30ನೇ ಚಿತ್ರವನ್ನು ವೈರ ಎಂಟಟೈನ್ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿದ್ದು, ಶೌರ್ಯುವ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ.

  ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ಈ ಕಥೆಯನ್ನು ಶೌರ್ಯುವ್​ ಅವರೇ ರಚಿಸಿದ್ದಾರೆ. ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

  ಇದನ್ನೂ ಓದಿ: ದುಬೈ, ಅಬು ಧಾಬಿ, ಮಸ್ಕತ್‌ ಕನ್ನಡಿಗರು ನೋಡಾಯ್ತು ‘ಎಸ್.ಎಲ್.ವಿ’

  ಈ ಚಿತ್ರಕ್ಕೆ ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಮಾಡುತ್ತಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶಿಸುತ್ತಿದ್ದಾರೆ.

  ಕಂಬಳದಲ್ಲಿ ಕಿರಿಕ್; ಸುದ್ದಿಗೋಷ್ಠಿ ನಡೆಸಿದ ಸಾನ್ಯಾ ಅಯ್ಯರ್ ಹೇಳಿದ್ದಿದು..

  See also  ಮಗ ಜನಿಸಿದಾಗ, ನನ್ನ ಅಂಗೈನಷ್ಟೆ ಅಗಲ, ಎತ್ತರ ಇದ್ದ: ಸಮಾಜ ಸೇವೆಯ ಬಗ್ಗೆ ಪ್ರಿನ್ಸ್ ಹೇಳಿದ್ದೇನು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts