More

    ‘ತಲೈವರ್​ 170’: 32 ವರ್ಷಗಳ ಬಳಿಕ ರಜನಿಕಾಂತ್​ ಜತೆಗೆ ನಟಿಸಲಿದ್ದಾರೆ ಈ ದಿಗ್ಗಜ ನಟ!

    ತಮಿಳುನಾಡು: ಕಾಲಿವುಡ್​ನ ಸೂಪರ್​ಸ್ಟಾರ್​, ತಲೈವಾ ನಟ ರಜನಿಕಾಂತ್​ ಅಭಿನಯದ ‘ಜೈಲರ್’​ ಆಗಸ್ಟ್​ 10 ರಂದು ಜಾಗತಿಕ ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮುಖೇನ ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿತು. ಸದ್ಯ ಈ ಗೆಲುವಿನ ಬೆನ್ನಲ್ಲೇ ಲೈಕಾ ಪ್ರೊಡಕ್ಷನ್ಸ್​​ ರಜನಿ ಅವರ ಮುಂದಿನ ಚಿತ್ರ ‘ತಲೈವರ್​ 170’ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

    ಇದನ್ನೂ ಓದಿ: ಆಧುನಿಕತೆ ಹೆಸರಲ್ಲಿ ದುಶ್ಚಟ ಬೇಡ; ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿಕೆ

    ತಾತ್ಕಾಲಿಕವಾಗಿ ‘ತಲೈವರ್ 170’ ಎಂಬ ಟೈಟಲ್​ ಘೋಷಿಸಿರುವ ಈ ಚಿತ್ರದ ಬಗ್ಗೆ ತಲೈವಾ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಬಗ್ಗೆ ಹೊಸ ಮಾಹಿತಿಯನ್ನು ಪಡೆಯಲು ಸಿನಿಪ್ರಿಯರು ಮತ್ತು ಫ್ಯಾನ್ಸ್​ ಈ ಹಿಂದಿನಿಂದಲೂ ಕಾಯುತ್ತಿದ್ದು, ಚಿತ್ರದಲ್ಲಿ ಯಾವ ಸ್ಟಾರ್​ ಕಲಾವಿದರು ನಟಿಸಲಿದ್ದಾರೆ? ಯೋಜನೆಯ ಟೀಸರ್​ ಅಥವಾ ಮೊದಲ ಗ್ಲಿಂಪ್ಸ್​​ ವಿಡಿಯೋ ಯಾವಾಗ ಹೊರಬರಲಿದೆ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ‘ತಲೈವರ್​ 170’ ಬಗ್ಗೆ ಚಿತ್ರತಂಡ ಹೊಸ ಮಾಹಿತಿಯೊಂದನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಶಾಹೆನ್‌ಶಾ ಅಮಿತಾಬ್ ಅವರು ಚಿತ್ರದ ಭಾಗವಾಗಲಿದ್ದಾರೆ ಎಂದು ಪೋಸ್ಟರ್​ನಲ್ಲಿ ಚಿತ್ರತಂಡ ಉಲ್ಲೇಖಿಸಿದೆ. ಈ ಮೂಲಕ 32 ವರ್ಷದ ಬಳಿಕ ಬಾಲಿವುಡ್​ನ ದಿಗ್ಗಜ ಅಮಿತಾಬ್​ ಬಚ್ಚನ್ ಮತ್ತು ರಜನಿಕಾಂತ್​ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

    ಏಷ್ಯನ್ ಗೇಮ್ಸ್ 2023: ಮಹಿಳೆಯರ 5000 ಮೀ. ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟ ಪರೂಲ್ ಚೌಧರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts