More

    ಭದ್ರಾವತಿಯಲ್ಲಿ ಆರ್​ಎಎಫ್​ ಘಟಕ ಉದ್ಘಾಟಿಸಿದ ಅಮಿತ್ ಷಾ

    ಬೆಂಗಳೂರು: ಎರಡು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಷಾ, ಇಂದು ಭದ್ರಾವತಿಗೆ ತೆರಳಿ ಆರ್​ಎಎಫ್​ ಘಟಕವನ್ನು ಉದ್ಘಾಟಿಸಿದ್ದಾರೆ. ಕಮಲ ಪಡೆಯ ವರಿಷ್ಠ ಷಾಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಇನ್ನಿತರ ಸಚಿವರು, ನಾಯಕರೂ ಗುಲಾಬಿ ನೀಡಿ ಷಾ ಅವರನ್ನು ಸ್ವಾಗತಿಸಿದರು.

    ಬೆಂಗಳೂರಿನಿಂದ ಭದ್ರಾವತಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿದ ಷಾ ಅಲ್ಲಿ ಆರ್​ಎಎಫ್​ ಘಟಕವನ್ನು ಉದ್ಘಾಟನೆ ಮಾಡಿದರು. ದಕ್ಷಿಣ ಭಾರತದ ಮೊದಲ ಆರ್​ಎಎಫ್​ ಘಟಕದ ಉದ್ಘಾಟನೆಯ ಈ ಸಂದರ್ಭದಲ್ಲಿ ಆಯೋಜಿಸಿದ್ದ ಪೂಜೆಯಲ್ಲೂ ಆಸೀನರಾಗಿ ಷಾ ಗಮನ ಸೆಳೆದರು. ಇಂದು ಸಂಜೆ ಮತ್ತೆ ಬೆಂಗಳೂರಿಗೆ ಮರಳಲಿರುವ ಷಾ, ಎಚ್​ಎಎಲ್ ವಿಮಾನ ನಿಲ್ದಾಣದ ಹೊರಗಡೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಇಲ್ಲಿ ಸುಮಾರು 4ರಿಂದ 5 ಸಾವಿರ ಕಾರ್ಯಕರ್ತರು ಸೇರುವ ಸಾಧ್ಯತೆ ಇದ್ದು, ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

    ನಾಳೆ ಬೆಳಗಾವಿಯಲ್ಲಿ ಷಾ: ಜ. 17ರಂದು ಮಧ್ಯಾಹ್ನ 3ಕ್ಕೆ ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿಯ ಜನಸೇವಕ ಸಮಾರೋಪ ಸಮಾರಂಭದಲ್ಲಿ ಷಾ ಪಾಲ್ಗೊಳ್ಳಲಿದ್ದಾರೆ. ಬಳಿಕ ನಡೆಯಲಿರುವ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಮಾತನಾಡಿ ನಂತರ ಇತ್ತೀಚೆಗೆ ಅಗಲಿದ್ದ ಸುರೇಶ್​ ಅಂಗಡಿ ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಲಿದ್ದಾರೆ ಎನ್ನಲಾಗಿದೆ. ಜತೆಗೆ ಬಾಗಲಕೋಟೆಯ ಕೆರಕಲಮಟ್ಟಿ ಗ್ರಾಮದ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿರಾಣಿ ಸಮೂಹದ ವಿವಿಧ ಕಾರ್ಖಾನೆಗಳ ಉದ್ಘಾಟನೆ, ವಿಸ್ತರಣೆಗೆ ಭೂಮಿ ಪೂಜೆ ಇತ್ಯಾದಿ ಕಾರ್ಯಕ್ರಮಗಳಲ್ಲೂ ಷಾ ಭಾಗಿ ಆಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts