More

    ಕರೊನಾ ಚಿಕಿತ್ಸೆಗೆ ಕ್ರಿಮಿನಾಶಕ ಬಳಸುವ ಐಡಿಯಾ ಕೊಟ್ಟ ಅಮೆರಿಕ ಅಧ್ಯಕ್ಷ; ಮುಜುಗರದಿಂದ ಪಾರಾಗಲು ವೈಟ್​ಹೌಸ್​ ಹೆಣಗಾಟ

    ವಾಷಿಂಗ್ಟನ್​: ಕರೊನಾ ರೋಗಕ್ಕೆ ಕ್ರಿಮಿನಾಶಕವೇ ಮದ್ದು ಎಂದು ಚರ್ಚಿನ ಪಾದ್ರಿಯೊಬ್ಬ ಭಕ್ತರಿಗೆ ಅದನ್ನು ಕುಡಿಸಿದ್ದು ದಕ್ಷಿಣ ಆಫ್ರಿಕಾದಿಂದ ವರದಿಯಾಗಿತ್ತು. ಈಗ ಅಂಥದ್ದೇ ಸಲಹೆಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನೀಡಿದ್ದಾರೆ.

    ಅಮೆರಿಕದಲ್ಲಿ ಕರೊನಾ ಸ್ಥಿತಿಗತಿಯ ಬಗ್ಗೆ ಸ್ವತಃ ಡೊನಾಲ್ಡ್​ ಟ್ರಂಪ್​ ದಿನವೂ ಸುದ್ದಿಗೊಷ್ಠಿ ನಡೆಸುತ್ತಾರೆ. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು, ವೈದ್ಯರು ಹಾಜರಿದ್ದು ಅಗತ್ಯ ಮಾಹಿತಿ ಒದಗಿಸುತ್ತಾರೆ.

    ಆದರೆ, ಎರಡು ದಿನಗಳ ಹಿಂದೆ ಮಾಡಿಕೊಂಡ ಎಡವಟ್ಟೊಂದು ಸ್ವತಃ ಟ್ರಂಪ್​ ಹಾಗೂ ಅಮೆರಿಕಕ್ಕೆ ಭಾರಿ ಮುಜುಗರ ತಂದಿಟ್ಟಿದೆ. ಕರೊನಾ ರೋಗಿಗಳಿಗೆ ಕ್ರಿಮಿನಾಶಕಗಳ ಚುಚ್ಚಮದ್ದು ನಿಡಿ ಗುಣಪಡಿಸಬಹುದು ಎಂದು ಟ್ರಂಪ್​ ಹೇಳಿದ್ದರು. ಜತೆಗೆ, ಸೂರ್ಯನ ಬೆಳಕು ಹಾಗೂ ಶಾಖದಿಂದ ವೈರಸ್​ಗಳನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿ ಇನ್ನಷ್ಟು ಅಚ್ಚರಿ ಮೂಡಿಸಿದ್ದರು. ಈ ಹೇಳಿಕೆಗಳಿಂದ ಉಂಟಾಗಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಭಾರಿ ಹೆಣಗಾಟ ನಡೆಸುತ್ತಿದ್ದಾರೆ. ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸುವ ಅವಧಿಯನ್ನೇ ಕಡಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಅಷ್ಟಕ್ಕೂ ಶುಕ್ರವಾರ ಟ್ರಂಪ್​ ಹೇಳಿದ್ದೇನು ಗೊತ್ತಾ? “ಕ್ರಿಮಿನಾಶಕಗಳು ಒಂದೇ ನಿಮಿಷದಲ್ಲಿ ಎಲ್ಲವನ್ನೂ ಹೊಡೆದೋಡಿಸಿ ಬಿಡುತ್ತವೆ. ಅಂಥದ್ದನ್ನೇ ನಾವೀಗ ಮಾಡಬೇಕಾಗಿದೆ. ದೇಹಕ್ಕೆ ಚುಚ್ಚುವುದು ಅಥವಾ ದೇಹದ ಸಂಪೂರ್ಣ ಸ್ವಚ್ಛತೆ. ಅಂದರೆ, ಇದು ನಮ್ಮ ಶ್ವಾಸಕೋಶಗಳನ್ನು ಸೇರಿ ಅಲ್ಲಿ ಸಂಪೂರ್ಣ ಸ್ವಚ್ಛವಾಗಿಸುವುದು. ಇದು ಅತ್ಯಂತ ಕುತೂಹಲಕಾರಿಯೂ ಆಗಿದೆ. ಇದು ವೈದ್ಯರ ಸಹಾಯದಿಂದಲೇ ಆಗಬೇಕು. ಇದೆಲ್ಲವನ್ನು ಗಮನಿಸುವುದಾದರೆ.. ಒಂದೇ ನಿಮಿಷದಲ್ಲಿ ಕ್ರಿಮಿನಾಶಕ ಎಷ್ಟೆಲ್ಲ ನಿವಾರಿಸುತ್ತದೆ ಎನ್ನುವುದು ಅಷ್ಟು ಶಕ್ತಿಶಾಲಿ ಎಂಬುದನ್ನು ತಿಳಿಸುತ್ತದೆ” ಎಂದಿದ್ದರು.

    ಇನ್ನೂ ಮುಂದುವರಿದು, ಸೂರ್ಯನ ಶಾಖಕ್ಕೆ ಹಾಗೂ ಬಿಸಿಲಿಗೂ ಕೂಡ ವೈರಸ್​ಗಳನ್ನು ನಾಶಪಡಿಸುವ ಶಕ್ತಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ವೈದ್ಯರೊಂದಿಗೆ ಚರ್ಚಿಸುತ್ತಲೇ ಹೇಳಿದ್ದರು.

    ತಾವು ಇದನ್ನು ವ್ಯಂಗ್ಯವಾಗಿ ಹೇಳಿದ್ದಾಗಿ ಬಳಿಕ ಟ್ರಂಪ್​ ಸ್ಪಷ್ಟನೆ ನೀಡಿದ್ದರಾದರೂ, ಈ ಪರಿಕಲ್ಪನೆ ಬಗ್ಗೆ ಚರ್ಚಿಸಿ ಸಂಶೋಧನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ.

    ನೀರಾಯ್ತು, ಇದೀಗ ಗಾಳಿಯ ಮಾಲಿನ್ಯಕಾರಕ ಕಣಗಳಲ್ಲೂ ಕರೊನಾ ವೈರಸ್​? ಸೋಂಕಿಲ್ಲದಿದ್ದರೂ ಹರಡುವುದಕ್ಕೆ ಇದೇ ಕಾರಣವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts