More

    ಅಮೆರಿಕದಲ್ಲಿ ಏರುತ್ತಲೇ ಇದೆ ಮೃತರ ಸಂಖ್ಯೆ: ಒಂದೇ ದಿನ 1850 ಸಾವು, ನ್ಯೂಯಾರ್ಕ್‌ನಲ್ಲಿ 800 ಬಲಿ

    ನ್ಯೂಯಾರ್ಕ್‌: ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಅತಿ ವೇಗದಲ್ಲಿ ಸಾಗುತ್ತಲೇ ಇದೆ. ಒಂದೇ ದಿನಕ್ಕೆ 1850 ರೋಗಿಗಳು ಮೃತಪಟ್ಟಿರುವುದು ವರದಿಯಾಗಿದೆ. ನ್ಯೂಯಾರ್ಕ್‌ ಒಂದರಲ್ಲಿಯೇ 800 ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ವರದಿ ಹೇಳಿದೆ.

    ಇಲ್ಲಿಯವರೆಗೆ ನ್ಯೂಯಾರ್ಕ್‌ ಒಂದರಲ್ಲಿಯೇ ಸುಮಾರು ಐದೂವರೆ ಸಾವಿರ ಮಂದಿ ಕರೊನಾ ಸೋಂಕಿನಿಂದ ಮರಣಹೊಂದಿರುವುದಾಗಿ ಹೇಳಲಾಗಿದೆ. 1.42 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದರೆ, ನ್ಯೂಜೆರ್ಸಿಯಲ್ಲಿ 1232 ಮಂದಿ ಮೃತರಾಗಿದ್ದು, ಸುಮಾರು 45 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ.

    ಏಪ್ರಿಲ್ 6 -7ರ ನಡುವೆ ಒಂದೇ ದಿನದಲ್ಲಿ ನ್ಯೂಯಾರ್ಕ್‌ನಲ್ಲಿ 731 ಮಂದಿ ಮೃತಪಟ್ಟಿದ್ದರು. ಈಗ ಸಂಖ್ಯೆ ಮತ್ತಷ್ಟು ಏರಿಕೆ ಆಗಿರುವುದು ಅಮೆರಿಕ ಪ್ರಜೆಗಳಿಗೆ ದಿಗಿಲು ಉಂಟು ಮಾಡಿದೆ. ಷಿಕಾಗೋದಲ್ಲಿ ಆಫ್ರಿಕಾ ಮೂಲದ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದಾಗಿ ವರದಿ ಹೇಳಿದೆ. ಇಲ್ಲಿಯವರೆಗೆ ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸುಮಾರು 13 ಸಾವಿರ.

    ಕರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಮಲೇರಿಯಾಕ್ಕೆ ನೀಡುವ ಔಷಧವನ್ನು ಕರೊನಾ ಸೋಂಕಿತರಿಗೆ ನೀಡುವ ಸಂಬಂಧ ಭಾರತದಿಂದ ತರಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇನ್ನೂ ಹೆಚ್ಚಿನ ಔಷಧಕ್ಕಾಗಿ ಬೇರೆ ಬೇರೆ ದೇಶಗಳ ಮೊರೆ ಹೋಗಿದ್ದಾರೆ. (ಏಜನ್ಸೀಸ್‌)

    ಅಮೆರಿಕಕ್ಕೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ: ಮೋದಿಯನ್ನು ಹಾಡಿ ಹೊಗಳಿ ಕೊಂಡಾಡಿದ ಟ್ರಂಪ್‌!

    ಯುಪಿಎಸ್​ಸಿಯಿಂದ ಸಿಎಂಎಸ್​ ನೇಮಕಾತಿ ಅಧಿಸೂಚನೆ ವಿಳಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts