More

    ವಚನಗಳ ಉಳಿವಿಗೆ ಹೋರಾಡಿದ ಚೌಡಯ್ಯ

    ಕಾಳಗಿ: ಅಂಬಿಗರ ಚೌಡಯ್ಯ ಅವರು ನಿಷ್ಟುರವಾದಿ ಶರಣರಾಗಿದ್ದು, ಯಾವುದೇ ವಿಷಯಕ್ಕೂ ರಾಜಿ ಮಾಡಿಕೊಳ್ಳದಿರುವುದರಿಂದಲೇ ನಿಜಶರಣ ಎಂಬ ಹೆಸರು ಬಂದಿದೆ ಎಂದು ಸೂಗುರಿನ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು ನುಡಿದರು.

    ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ನಿಜಶರಣ ಅಂಬಿಗರ ಚೌಡಯ್ಯ ಜೀವನ ದರ್ಶನ ಪುರಾಣದಲ್ಲಿ ಬುಧವಾರ ಸಂಜೆ ಜರುಗಿದ ಚೌಡಯ್ಯನವರ ಮದುವೆ ಸನ್ನಿವೇಶದಲ್ಲಿ ಆಶೀರ್ವಚನ ನೀಡಿ, ಚೌಡಯ್ಯ ಅವರು ಬಸವಣ್ಣನವರ ಜತೆಗೆ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಬಿಜ್ಜಳನ ಸೈನಿಕರು ಶರಣರ ಮೇಲೆ ದಾಳಿ ಮಾಡಿ, ವಚನಗಳನ್ನು ಸುಡಲು ಬಂದಾಗ ಚನ್ನಬಸವಣ್ಣನವರ ನೇತೃತ್ವದಲ್ಲಿ ಚೌಡಯ್ಯನವರು ಖಡ್ಗ ಹಿಡಿದು ಹೋರಾಟ ಮಾಡಿದರು ಎಂದು ಹೇಳಿದರು.

    ದೇವಸ್ಥಾನ ಸಮಿತಿ ಅಧ್ಯಕ್ಷ ಜಗನ್ನಾಥ ಚಂದನಕೇರಾ ಅಧ್ಯಕ್ಷತೆ ವಹಿಸಿದ್ದರು. ಅಪಾರ ಭಕ್ತರ ಮಧ್ಯೆ ಶಾಸ್ತೊಸ್ತ್ರವಾಗಿ ಚೌಡಯ್ಯನವರ ವಿವಾಹ ನೆರವೇರಿತು.

    ಕೊಲಿ ಸಮಾಜ ತಾಲೂಕು ಅಧ್ಯಕ್ಷ ಜಗನ್ನಾಥ ಚಂದನಕೇರಿ, ಪ್ರಮುಖರಾದ ಶಿವರಾಯ ಕೊಯಿ, ಶಿವಶರಣಪ್ಪ ಗುತ್ತೇದಾರ್, ವಿಶ್ವನಾಥ ವನಮಾಲಿ, ರವಿದಾಸ ಪತಂಗೆ, ನೀಲಕಂಠ ಮಡಿವಾಳ, ಸಂತೋಷ ಪತಂಗೆ, ರತ್ನಮ್ಮ ಡೊಣ್ಣೂರ, ಶಾಂತಾಬಾಯಿ ಕೋಯಿ, ರಾಘವೇಂದ್ರ ಗುತ್ತೇದಾರ್, ಭೀಮರಾಯ ಮಲಘಾಣ, ಬಾಬು ನಾಟೀಕಾರ, ದಯಾನಂದ ಹೊಸಮನಿ, ಕಾಳಪ್ಪ ತಳವಾರ, ಕಾಶೀನಾಥ ತೆಲಗಾಣಿ, ಸುನೀಲ್​, ರಾಜಾಪುರ, ಸಂಗಮೇಶ ಬಡಿಗೇರ, ದೇವಿಂದ್ರಪ್ಪ ಚಿಮ್ಮನಚೋಡ, ಕೃಷ್ಣ ಸಿಂಗಶೆಟ್ಟಿ, ಶ್ರೀನಿವಾಸ ಗುರುಮಠಕಲ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts