More

    ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದಲ್ಲಿ ಜಯಂತ್ಯುತ್ಸವ

    ರಾಣೆಬೆನ್ನೂರ: ಶರಣರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯುತ್ಸವ ಆಚರಿಸಿದ್ದಕ್ಕೆ ಅರ್ಥ ಬರುತ್ತದೆ ಎಂದು ಒಡೆಯರ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿಯ ತಟದ ಶರಣ ಶ್ರೀ ಅಂಬಿಗರ ಚೌಡಯ್ಯನವರ ಐಕ್ಯಮಂಟಪದಲ್ಲಿ ಭಾನುವಾರ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
    ಅಂಬಿಗರ ಚೌಡಯ್ಯನವರು ತಮ್ಮ ಕಠೋರವಾದ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪ್ರಮುಖರಾದ ಮಹಾ ಶರಣರರಾಗಿದ್ದರು. ಅಂತಹ ಶರಣ ಆದರ್ಶಗಳನ್ನು ಸರ್ವರೂ ರೂಢಿಸಿಕೊಂಡು ಸಾಗಿದಾಗ ಅಂತವರ ಜೀವನ ಸಾರ್ಥಕತೆಯಿಂದ ಕೂಡಿರುತ್ತದೆ ಎಂದರು.
    ಅರ್ಚಕ ಪ್ರಶಾಂತ ಹಾಲ್ವಡಿಮಠ, ಗಿರೀಶ ದೀಪಾವಳಿ, ಮಹಲಿಂಗಪ್ಪ ಭತ್ತದ, ಸಿದ್ದಪ್ಪ ನಾಗನೂರ, ಲಕ್ಷ್ಮಣ ದೀಪಾವಳಿ, ಶಂಭುಲಿಂಗಪ್ಪ ಭತ್ತದ, ಚನ್ನವೀರಪ್ಪ ಯಲಿಗಾರ, ವೀರಭದ್ರಪ್ಪ ದೀಪಾವಳಿ, ಧರ್ಮಪ್ಪ ಕುಂಚೂರ, ವೀರಣ್ಣ ಗಂಗಮ್ಮನವರ, ನಾಗರಾಜಪ್ಪ ದೀಪಾವಳಿ, ಗಂಗಾಧರಯ್ಯ ಪೂಜಾರ, ಜಯಪ್ಪ ಹೊನಕುದರಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts