More

    ಅಂಬಿಕಾ ಕಾಲೇಜು ವಿದ್ಯಾರ್ಥಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ – ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಧನ್ವಿತ್


    ಪುತ್ತೂರು: ನಟ್ಟೋಜ ಫೌಂಡೇಷನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ದ್ವಿತೀಯ ಪಿಯು ವಿದ್ಯಾರ್ಥಿ ಧನ್ವಿತ್ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ(ಆರ್‌ಎಲ್‌ಎಸ್‌ಎಸ್) ವತಿಯಿಂದ ನಡೆಸಲ್ಪಟ್ಟ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.


    ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಷಿಪ್‌ನ ಆಯ್ಕೆ ಪ್ರಕ್ರಿಯೆಯು ವಿಶಾಖಪಟ್ಟಣದಲ್ಲಿ ಈ ತಿಂಗಳ ೧೫ರಿಂದ ೧೯ರ ತನಕ ತನಕ ನಡೆದಿತ್ತು. ೨೦೦ ಮೀಟರ್ ಅಬ್ಸ್ಟೆಕಲ್, ೨೦೦ ಮೀಟರ್ ಸೂಪರ್ ಲೈಫ್ ಸೇವರ್ ಹಾಗೂ ೧೦೦ ಮೀ. ಮನಿಕಿನ್‌ಕಾರಿಯಲ್ಲಿ ಹಾಗೂ ಒಂದು ಕಿಲೋಮೀಟರ್ ಬೀಚ್ ರನ್ನಿಂಗ್‌ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಧನ್ವಿತ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ತನ್ಮೂಲಕ ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಸ್ಪಽಸಲಿದ್ದಾರೆ.


    ಪುತ್ತೂರು ದರ್ಬೆಯ ಕೇಶವಕುಮಾರ್ ಕೆ. ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಹಾಗೂ ಪುತ್ತೂರಿನ ಬಾಲವನ ಈಜುಕೊಳದ ತರಬೇತುದಾರರಾದ ಪಾರ್ಥ ವಾರಣಾಸಿ, ರೋಹಿತ್ ಪಿ. ಹಾಗೂ ದೀಕ್ಷಿತ್ ಇವರ ಮಾರ್ಗದರ್ಶನದಲ್ಲಿ ತರಬೇತು ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts