More

    ಸಂವಿಧಾನ ನೀಡಿದ ಅಂಬೇಡ್ಕರ್ ಅಜರಾಮರ: ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಡಾ. ಜಿ. ಗೋವಿಂದಯ್ಯ

    ರಾಮನಗರ: ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅಜರಾಮರರಾಗಿದ್ದಾರೆ ಎಂದು ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಡಾ. ಜಿ. ಗೋವಿಂದಯ್ಯ ಬಣ್ಣಿಸಿದರು

    ನಗರದ ಐಜೂರು ವೃತ್ತದಲ್ಲಿ ಸಮತಾ ಸೈನಿಕ ದಳದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 64ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತ ನಾಡಿ, ಅಂಬೇಡ್ಕರ್ ತಾವು ನೀಡಿದ ಸಂವಿಧಾನದ ಮೂಲಕ ಪ್ರತಿಯೊಬ್ಬ ಭಾರತೀಯನನ್ನೂ ತಲುಪುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಳವರ್ಗದವರ ಬದುಕು ಶೋಚನೀಯವಾಗಿತ್ತು. ಈ ಅವಕಾಶ ವಂಚಿತ ಸಮುದಾಯದ ಧ್ವನಿಯಾಗಿ ಅಂಬೇಡ್ಕರ್ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

    ಅಂಬೇಡ್ಕರ್ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಅಲ್ಲಿನ ಸಾಮಾಜಿಕ ಮತ್ತು ಧಾರ್ವಿುಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದರು. ಭಾರತದಲ್ಲಿ ಒಂದೇ ಬಣ್ಣದ ಜನರ ನಡುವೆ ಅಗಾಧವಾದ ಕಂದಕವಿತ್ತು. ಮುಕ್ತವಾಗಿ ಮನೆ ಮತ್ತು ದೇವಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ದೇಶದ ಜಾತೀಯತೆಯ ಕ್ರೌರ್ಯ ಮತ್ತು ಶೋಷಣೆಯ ಕರಾಳತೆ ಬಾಬಾ ಸಾಹೇಬರ ಮೇಲೆ ಪ್ರಭಾವ ಬೀರಿತ್ತು. ಶೋಷಿತ ಸಮುದಾಯಗಳ ಅಭಿವೃದ್ಧಿ ಹಾಗೂ ಹಕ್ಕುಗಳ ರಕ್ಷಣೆಗಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನದನ್ನು ನೀಡಿದ್ದಾರೆ ಎಂದರು.

    ಎಂಇಐ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ವಿಶ್ವದ ಶ್ರೇಷ್ಠರಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಅವರು ರಚಿಸಿದ ಸಂವಿಧಾನವನ್ನು ಪೂರ್ಣವಾಬಿ ಜಾರಿಗೆ ತಂದರೆ ಭಾರತ ವಿಶ್ವಗುರುವಾಗಲಿದೆ ಎಂದರು.

    ವಿವಿಧ ದಲಿತ ಸಂಘಟನೆಯ ಮುಖಂಡರಾದ ಕಲ್ಬಾಳ್ ಲಕ್ಷ್ಮಣ್, ಯಡವನಹಳ್ಳಿ ಚಂದ್ರು, ಮರಳವಾಡಿ ಮಂಜು, ಕೋಟೆ ಶ್ರೀನಿವಾಸ್, ಚೌವಳೂರಯ್ಯ, ಪುನೀತ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts