More

    ಎಂಜಿಎಂ ಖರೀದಿಸಲು ಒಪ್ಪಿದ ಅಮೇಜಾನ್​ … ರೇಟ್​ ಕೇಳಿದರೆ ಬೆಚ್ಚಿ ಬೀಳ್ತೀರಿ

    ವಾಷಿಂಗ್ಟನ್​: ಹಾಲಿವುಡ್​ನ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆಯಾದ ಎಂಜಿಎಂ ಸ್ಟುಡಿಯೋಸ್​ನ್ನು ಖರೀದಿಸಲು ಇದೀಗ ಅಮೇಜಾನ್​ ಪ್ರೈಮ್​ ಮುಂದೆ ಬಂದಿದೆ. ಈ ಡೀಲ್​ನಿಂದಾಗಿ ಎಂಜಿಎಂ ಸ್ಟುಡಿಯೋಸ್ ನಿರ್ಮಿಸಿರುವ 4,000 ಸಿನಿಮಾಗಳು ಮತ್ತು 17,000 ಟಿವಿ ಕಾರ್ಯಕ್ರಮಗಳು, ಇದೀಗ ಅಮೇಜಾನ್​ ಪ್ರೈಮ್​ ಪಾಲಾಗಲಿದೆ.

    ಇದನ್ನೂ ಓದಿ: ಚಿತ್ರನಟ ಸಂಜಯ್‌ ದತ್‌ಗೆ ಸಿಕ್ಕಿತು ದುಬೈನ ಗೋಲ್ಡನ್‌ ವೀಸಾ- ಟ್ವಿಟರ್‌ನಲ್ಲಿ ಮಾಹಿತಿ

    ಓಟಿಟಿಯಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಅಮೇಜಾನ್​ ಪ್ರೈಮ್​, ನೆಟ್​ಫ್ಲಿಕ್ಸ್​ ಮುಂತಾದ ವೇದಿಕೆಗಳ ಜತೆಗೆ ತೀವ್ರ ಸ್ಪರ್ಧೆಗೆ ಇಳಿದಿದೆ. ಈ ಹಂತದಲ್ಲಿ ಅಮೇಜಾನ್​ ಪ್ರೈಮ್​ನಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಅವಶ್ಯಕತೆ ಇದ್ದು, ಎಂಜಿಎಂ ಖರೀದಿಯಿಂದಾಗಿ, ಅಮೇಜಾನ್​ಗೆ ಹೆಚ್ಚುವರಿ ಸಿನಿಮಾಗಳು ಮತ್ತು ಕಾರ್ಯಕ್ರಮಗಳು ಸಿಗಲಿವೆ. ಈ ಪೈಕಿ ಎಂಜಿಎಂ ನಿರ್ಮಾಣದ ಜೇಮ್ಸ್​ ಬಾಂಡ್​ ಸರಣಿ ಸೇರಿದಂತೆ ನೂರಾರು ಜನಪ್ರಿಯ ಚಿತ್ರಗಳು, ಅಮೇಜಾನ್​ ಪಾಲಾಗಲಿವೆ.

    ಎಲ್ಲ ಸರಿ, ನಾಲ್ಕು ಸಾವಿರ ಸಿನಿಮಾಗಳು ಮತ್ತು 17 ಸಾವಿರ ಕಾರ್ಯಕ್ರಮಗಳನ್ನು ಕೊಂಡುಕೊಳ್ಳುವುದಕ್ಕೆ ಅಮೇಜಾನ್​ ಖರ್ಚು ಮಾಡಿದ ಮೊತ್ತ ಎಷ್ಟು ಗೊತ್ತಾ? 8.45 ಬಿಲಿಯನ್​ ಡಾಲರ್​ಗಳು. ಸಿನಿಮಾ ಜಗತ್ತಿನಲ್ಲಿ ಇಷ್ಟು ದೊಡ್ಡ ವ್ಯವಹಾರ ಆಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಸುಖೀ ದಾಂಪತ್ಯದ ಗುಟ್ಟು ಬಿಟ್ಟುಕೊಟ್ಟ ಪ್ರಿಯಾಂಕಾ …

    ಅಮೇಜಾನ್​ ಮತ್ತು ಎಂಜಿಎಂ ನಡುವಿನ ಈ ವ್ಯವಹಾರದ ಮಾತುಕತೆ ಅಂತಿಮವಾಗಿದ್ದು, ಸದ್ಯದಲ್ಲೇ ಒಪ್ಪಂದವಾಗಲಿದೆ.

    ಮತ್ತೆ ಟಾಲಿವುಡ್​ಗೆ ದಿಶಾ ಪಠಾಣಿ; ಪುಷ್ಪಾ ಚಿತ್ರದ ಐಟಂ ಸಾಂಗ್​ನಲ್ಲಿ ಹೆಜ್ಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts