More

    ಅಪ್ಪು ಅಭಿಮಾನಿಗಳಿಗೆ ಅಮೇಜಾನ್​ ಪ್ರೈಮ್ ಬಂಪರ್ ಆಫರ್!

    ನಟ ಪುನೀತ್ ಅಥವಾ ಜನ ಮೆಚ್ಚಿದ ಅಪ್ಪು ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ, ಸಿನಿಪ್ರಿಯರ ಪಾಲಿಗೆ ದೊಡ್ಡ ನಷ್ಟ ಎಂದೇ ಹೇಳಬೇಕು. ಹಲವಾರು ಚಿತ್ರಗಳಲ್ಲಿ ನಟಿಸಿ, ನಂತರ ನಿರ್ಮಾಪಕನಾಗಿ 3 ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೂಡ ಬಹಳಷ್ಟು ಖ್ಯಾತಿ ಗಳಿಸಿದರು. ಆದರೆ, ಇನ್ನೂ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಲು, ನಟಿಸಲು ಭಗವಂತ ಅವಕಾಶ ಕೊಡಲಿಲ್ಲ. ಅವರು ಇಂದು ಬದುಕಿಲ್ಲವೆಂದರೂ, ಪುನೀತ್​ ಅವರನ್ನು ನಾನಾ ರೀತಿಯಲ್ಲಿ ಜನ ನೆನಪಿಸಿಕೊಳ್ಳುತ್ತಿದ್ದಾರೆ. ಈಗ OTT ವೇದಿಕೆ ಆಗಿರುವ ಅಮೇಜಾನ್​ ಪ್ರೈಮ್​ ವಿಡಿಯೋಕೂಡ ಅಪ್ಪು ಅವರನ್ನು ಅಭಿಮಾನಿಗಳು ನೆನಪಿಸಿಕೊಳ್ಳಲು ಒಂದು ಬಂಪರ್​ ಆಫರ್​ ಕೊಟ್ಟಿದೆ.
    ಹೌದು, ಪವರ್ ಸ್ಟಾರ್ ನಟ ಪುನೀತ್​​ ರಾಜ್​ಕುಮಾರ್ ಅವರ ನಿರ್ಮಾಣದ ಹಾಗೂ ಅವರು ನಟಿಸಿರುವ ಒಂದು ಸಿನಿಮಾವನ್ನು ಉಚಿತವಾಗಿ OTT ವೇದಿಕೆಯಲ್ಲಿ ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿರುವ ಅವರ ಅಭಿಮಾನಿಗಳು ವೀಕ್ಷಿಸಲು ಒಂದೊಳ್ಳೆ ಅವಕಾಶ ನೀಡಿದೆ. ಪುನೀತ್ ಅವರಿಗೆ ಸಂಬಂಧಿಸಿದ ಬರೋಬ್ಬರಿ ಐದು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸೋಕೆ ಪ್ರೇಕ್ಷಕರಿಗೆ ಅವಕಾಶ ನೀಡಿದೆ ಈ OTT. ಅಂದಹಾಗೆ, ಒಂದು ತಿಂಗಳ ಕಾಲ ಈ ಆಫರ್ ಇರಲಿದೆಯಂತೆ. OTT ವೇದಿಕೆ ಈ ಆಫರ್ ಮೂಲಕ ಅಪ್ಪು ಅವರಿಗೆ ವಿಭಿನ್ನವಾಗಿ ಗೌರವ ಸೂಚಿಸುವುದಲ್ಲದೇ, ಆನ್​ಲೈನ್ ಸಿನಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುತ್ತಿದೆ.
    ಅಪ್ಪು ನಿರ್ಮಾಣದ ‘ಕವಲುದಾರಿ’, ‘ಮಾಯಾ ಭಜಾರ್​’, ‘ಲಾ’, ‘ಫ್ರೆಂಚ್​ ಬಿರಿಯಾನಿ’ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದಲ್ಲದೇ, ಅಪ್ಪು ನಟನೆಯ ‘ಯುವರತ್ನ’ ಸಿನಿಮಾ ಕೂಡ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಪ್ರೀಮಿಯರ್​ ಶುರುವಾಗಲಿದೆ. ಈ ಐದೂ ಸಿನಿಮಾಗಳನ್ನು ಪ್ರೇಕ್ಷಕರು ಉಚಿತವಾಗಿ ವೀಕ್ಷಿಸಬಹುದು. ಮುಂಬರುವ ಫೆಬ್ರವರಿ ತಿಂಗಳ 28 ದಿನ ಉಚಿತವಾಗಿ ಈ ಚಿತ್ರಗಳನ್ನು ನೋಡಲು ಅವಕಾಶ ಇದೆ. ಈ ವಿಚಾರ ಅಪ್ಪು ಅಭಿಮಾನಿಗಳಿಗೆ ನಿಜಕ್ಕೂ ಖುಷಿ ನೀಡಿದೆ
    ಜತೆಗೆ, ಅಪ್ಪು ನಿರ್ಮಾಣದ 3 ಸಿನಿಮಾಗಳು ಸದ್ಯದಲ್ಲೇ ಅಮೇಜಾನ್ ನಲ್ಲಿ ಪ್ರೀಮಿಯರ್ ಆಗಲಿವೆ. ಈ ಕುರಿತಿ ಸ್ವತಹ ಅಶ್ವಿನಿ ಪುನೀತ್ ಅವರು ಅಪ್ಡೇಟ್ ಕೊಟ್ಟಿದ್ದಾರೆ. ಪುನೀತ್ ನಿರ್ಮಾಣ ಮಾಡಿರೋ ಕೊನೆಯ ಮೂರು ಚಿತ್ರಗಳು ಒನ್ ಕಟ್ ಟೂ ಕಟ್‘, ‘ಫ್ಯಾಮಿಲಿ ಪ್ಯಾಕ್ಮತ್ತು ಮ್ಯಾನ್ ಆಫ್ ದ ಮ್ಯಾನ್ಪ್ರೀಮಿಯರ್ ಆಗಲಿವೆ. ಅಪ್ಪು ಕನಸಿನ ಈ 3 ಕಥೆಗಳನ್ನ ಪ್ರೀತಿಯಿಂದ ನಿಮ್ಮ ಮುಂದೆ ತರುತ್ತಿದ್ದೆವೆ ಎಂದು ಈ ಬಗ್ಗೆ ಅಶ್ವಿನಿ ಅವರು ಪೋಸ್ಟ್ ಮಾಡಿದ್ದಾರೆ

    ಅಪ್ಪು ಅಭಿಮಾನಿಗಳಿಗೆ ಅಮೇಜಾನ್​ ಪ್ರೈಮ್ ಬಂಪರ್ ಆಫರ್! ಅಪ್ಪು ಅಭಿಮಾನಿಗಳಿಗೆ ಅಮೇಜಾನ್​ ಪ್ರೈಮ್ ಬಂಪರ್ ಆಫರ್! ಅಪ್ಪು ಅಭಿಮಾನಿಗಳಿಗೆ ಅಮೇಜಾನ್​ ಪ್ರೈಮ್ ಬಂಪರ್ ಆಫರ್!

    ಎರಡು ತಿಂಗಳ ಬಳಿಕ ತಿಮ್ಮಪ್ಪನ ದರ್ಶನ ಪಡೆದ ನಟಿ ತಾರಾ! ಫೋಟೋ ವೈರಲ್…

    ಕನ್ನಡದ ‘ಕೆಜಿಎಫ್’ ಸಿನಿಮಾ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಕಿಲಿ ಪೌಲ್! ವಿಡಿಯೋ ವೈರಲ್…

    ಮದುವೆಗೂ ಮುನ್ನ ವಿಚ್ಛೇದನದ ಬಗ್ಗೆ ಹೇಳಿದ್ದ ಸಮಂತಾ! ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿರುವ ಸ್ಯಾಮ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts