More

    ಪಂಜಾಬ್​ನಲ್ಲಿ 1,561 ಮೊಬೈಲ್​ ಟವರ್​ಗಳನ್ನು ಹಾಳುಗೆಡವಿದ ರೈತ ಹೋರಾಟಗಾರರು; ಕಠಿಣ ಕ್ರಮಕ್ಕೆ ಮುಂದಾದ ಸಿಎಂ

    ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಕಿಚ್ಚು ದಿನೇದಿನೆ ಹೆಚ್ಚಾಗುತ್ತಲೇ ಇದೆ. ಪಂಜಾಬ್​ನಲ್ಲಂತೂ ಹೋರಾಟದ ಕಿಚ್ಚು ಹೆಚ್ಚೇ ಇದೆ. ಮುಖ್ಯಮಂತ್ರಿ ಅಮರೇಂದರ್​ ಸಿಂಗ್​ ಅವರ ಸರ್ಕಾರವೂ ಹೋರಾಟಕ್ಕೆ ಸಾಥ್​ ನೀಡಿದ್ದು, ಇದೀಗ ಮೊದಲನೇ ಬಾರಿಗೆ ರೈತ ಹೋರಾಟಗಾರರ ವಿರುದ್ಧ ಸಿಎಂ ಮುನಿಸಿಕೊಂಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಮದ್ವೆಯಾದ ಎರಡೇ ತಿಂಗಳಿಗೆ 51 ವರ್ಷದ ಪತ್ನಿಗೆ ಸಾವಿನ ದಾರಿ ತೋರಿದ 29ರ ಪತಿ: ಕೊಲೆ ಹಿಂದೆ ಭಯಾನಕ ಸಂಚು!

    ಕೃಷಿ ಕಾಯ್ದೆಗಳಿಂದ ರೈತರ ಬದಲಾಗಿ ಬಂಡವಾಳಶಾಹಿಗಳಿಗೆ ಸಹಾಯವಾಗಲಿದೆ ಎಂದು ರೈತರು ದೂರುತ್ತಿದ್ದಾರೆ. ಮುಕೇಶ್​ ಅಂಬಾನಿಯಂತಹ ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಈ ಕಾಯ್ದೆಗಳು ಲಾಭ ಮಾಡಿಕೊಡಲಿವೆ ಎಂದು ದೂರಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಮುಕೇಶ್​ ಅಂಬಾನಿ ಮತ್ತು ಅವರ ಸಂಸ್ಥೆಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ರೈತ ಹೋರಾಟಗಾರರು, ಜಿಯೋ ಸಿಮ್​ ತ್ಯಜಿಸುವುದರ ಜತೆಗೆ ಜಿಯೋ ಮೊಬೈಲ್​ ಟವರ್​ಗಳಿಗೂ ಹಾನಿ ಮಾಡಲಾರಂಭಿಸಿದ್ದಾರೆ.

    ಪಂಜಾಬ್​ ರಾಜ್ಯವೊಂದರಲ್ಲಿ 21,306 ಟವರ್​ಗಳಿವೆ. ಅದರಲ್ಲಿ 1,561 ಟವರ್​ಗಳನ್ನು ರೈತರು ಹಾಳು ಮಾಡಿದ್ದಾರೆ. ಅಲ್ಲಿನ ಕೇಬಲ್​ಗಳನ್ನು ಕಟ್​ ಮಾಡಿ, ಜನರೇಟರ್​ಗಳನ್ನು ಕದ್ದು ಟವರ್​ ಕೆಲಸ ಮಾಡದಂತೆ ಮಾಡಲಾಗಿದೆ. ಆದರೆ ಇದರಿಂದಾಗಿ ರಾಜ್ಯದ ಜನತೆಗೆ ಸಾಕಷ್ಟು ತೊಂದರೆ ಉಂಟಾಗಿದೆ. ಸಾರ್ವಜನಿಕ ಆಸ್ಥಿಯನ್ನು ಹಾನಿ ಮಾಡುತ್ತಿರುವುದನ್ನು ತಾವು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಅಮರೇಂದರ್​ ಸಿಂಗ್​ ಹೇಳಿದ್ದಾರೆ. ಈ ರೀತಿ ಕೆಲಸ ಮಾಡುತ್ತಿರುವ ಹೋರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

    ರಾಜ್ಯದಲ್ಲಿ ಈವರೆಗೆ ಹಾಳು ಮಾಡಲಾದ ಟವರ್​ಗಳಲ್ಲಿ 433 ಟವರ್​ಗಳನ್ನು ಸರಿಪಡಿಸಲಾಗಿದೆ. ಟವರ್​ ಹಾಳು ಮಾಡಿದ್ದರಿಂದಾಗಿ ಬ್ಯಾಂಕಿಗ್​ ಸೇವೆ, ವರ್ಕ್​ ಫ್ರಂ ಹೋಂ ನಲ್ಲಿದ್ದವರು ಮತ್ತು ಆನ್​ಲೈನ್​ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್​)

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts