More

    ಬಿಕಿನಿಯಲ್ಲಿ ಗುಡ್ಡ ಏರಿ ಜಿಗಿದ ಅಮಲಾ ಪೌಲ್:​ ಸೌತ್​ ಬ್ಯೂಟಿಯ ಸಾಹಸಕ್ಕೆ ಅಭಿಮಾನಿಗಳು ಫಿದಾ

    ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

    ಸಿನಿಮಾದಿಂದ ಕೊಂಚ ಬಿಡುವು ಪಡೆದುಕೊಂಡಿರುವ ಅಮಲಾ, ಪ್ರವಾಸಿಗರ ಸ್ವರ್ಗ ಇಂಡೋನೇಷ್ಯಾದ ಬಾಲಿಯಲ್ಲಿ ಬೀಡುಬಿಟ್ಟಿದ್ದಾರೆ. ಬಿಡುವಿನ ಸಮಯವನ್ನು ಅಮಲಾ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಮಲಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ವೈರಲ್​ ಆಗಿದೆ.

    ಇದನ್ನೂ ಓದಿ: ಮಗು ಸತ್ತೇ ಹೋಯ್ತು ಅಂತ ಅಳುತ್ತಿದ್ದವರಿಗೆ ಕಾದಿತ್ತು ಅಚ್ಚರಿ! ಪೊಲೀಸ್ ಪವಾಡದಿಂದ ಮಗುವಿಗೆ ಸಿಕ್ತು ಮರುಜನ್ಮ

    ವಿಡಿಯೋದಲ್ಲಿ ಬಿಕಿನಿ ಉಡುಗೆಯಲ್ಲಿ ಬಾಲಿಯಲ್ಲಿರುವ ಸ್ವಾಭಾವಿಕ ಜಲಪಾತ ಮುಂದಿನ ಗುಡ್ಡವನ್ನು ಏರಿ ಜಿಗಿಯುತ್ತಿರುವ, ಜಲಪಾತದ ಮುಂದೆ ವಿವಿಧ ಭಂಗಿಯಲ್ಲಿ ಪೋಸ್​ ನೀಡಿರುವುದು ಮತ್ತು ಉಯ್ಯಾಲೆ ಆಡುತ್ತಿರುವ ದೃಶ್ಯಗಳಿವೆ. ವಿಡಿಯೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ಅಮಲಾ ಅವರ ಸೌಂದರ್ಯಕ್ಕೆ ಮರುಳಾಗಿರುವ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

    View this post on Instagram

    A post shared by Amala Paul (@amalapaul)

    ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ಅಮಲಾ ಅಭಿನಯದ ಕ್ರಿಸ್ಟೋಫರ್​ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಮುಮ್ಮಟ್ಟಿ ಅವರು ನಾಯಕರಾಗಿ ನಟಿಸಿದ್ದಾರೆ. (ಏಜೆನ್ಸೀಸ್​)

    ತಂದೆ-ತಾಯಿಯ ಸಮಾಧಿ ಮೇಲೆ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜಿಸುತ್ತಿರುವ ಪುತ್ರ!

    RRR ಕಿರೀಟಕ್ಕೆ ಮತ್ತೊಂದು ಗರಿ; ಎಚ್​ಸಿಎ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts