More

    PHOTOS| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಹಾಟ್​ ಬ್ಯೂಟಿ ಅಮಲಾರ ಬೋಲ್ಡ್​ ಅವತಾರಗಳು!

    ಮಾಲೆ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

    ಇತ್ತೀಚೆಗೆ ಮದುವೆ, ಮಾಜಿ ಪ್ರಿಯಕರನ ವಿರುದ್ಧ ದೂರು ಸೇರಿದಂತೆ ವೈಯಕ್ತಿಕ ವಿಚಾರಗಳಿಂದ ಭಾರಿ ಸುದ್ದಿಯಲ್ಲಿದ್ದ ನಟಿ ಅಮಲಾ ಪೌಲ್​ ಇದೀಗ, ಸಿನಿಮಾ ಮತ್ತು ವಿವಾದಗಳಿಂದ ಕೊಂಚ ಬಿಡುವು ಪಡೆದುಕೊಂಡಿದ್ದು, ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ಬೀಡುಬಿಟ್ಟಿದ್ದಾರೆ. ಬಿಡುವಿನ ಸಮಯವನ್ನು ಅಮಲಾ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

    PHOTOS| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಹಾಟ್​ ಬ್ಯೂಟಿ ಅಮಲಾರ ಬೋಲ್ಡ್​ ಅವತಾರಗಳು!

    ನಟಿಯರ ಮಾಲ್ಡೀವ್ಸ್​ ಪ್ರವಾಸ ಅಂದಮೇಲೆ ಅರೆ ನಗ್ನ ದರ್ಶನ ಇರಲೇಬೇಕು. ಇಲ್ಲವಾದಲ್ಲಿ ನಟಿಯರ ಮಾಲ್ಡೀವ್ಸ್​ ಪ್ರವಾಸವೇ ಪೂರ್ಣವಾಗುವುದಿಲ್ಲ. ಇದೀಗ ಅಮಲಾ ಅವರು ಕೂಡ ತಮ್ಮ ಹಾಟ್ ಆ್ಯಂಡ್​ ಸ್ಪೈಸಿ​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈಬಿಸಿಯೇರಿಸಿದ್ದಾರೆ.

    PHOTOS| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಹಾಟ್​ ಬ್ಯೂಟಿ ಅಮಲಾರ ಬೋಲ್ಡ್​ ಅವತಾರಗಳು!

    ನಟಿಯರಿಗೆ ಮಾಲ್ಡೀವ್ಸ್​ ಉಚಿತ ಪ್ರವಾಸದ ಸೌಲಭ್ಯವಿದೆ. ನಟಿಯರು ಬಿಕಿನಿ ಉಡುಗೆಯಲ್ಲಿ ಪೋಸ್​ ನೀಡಿ, ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದರೆ, ಅದಕ್ಕೆ ಪ್ರತಿಯಾಗಿ, ನಟಿಯರಿಗೆ ಮಾಲ್ಡೀವ್ಸ್​ನಲ್ಲಿ ಉಚಿತ ಪ್ರವಾಸ ದೊರೆಯುತ್ತಿದೆಯಂತೆ. ಇದೊಂದು ರೀತಿಯ ಪಾವತಿಸಿದ ಪ್ರಚಾರದ ಭಾಗವಾಗಿದೆ. ನಟಿಯರ ಮೂಲಕ ಮಾಲ್ಡೀವ್ಸ್​ ತನ್ನ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತಿದೆ. ಇದರ ಅಡಿಯಲ್ಲೇ ಅಮಲಾ ಕೂಡ ಮಾಲ್ಡೀವ್ಸ್​ಗೆ ಹಾರಿ, ಕಡಲ ಕಿನಾರೆಯಲ್ಲಿ ಅರೆಬರೆ ಬಟ್ಟೆಯಲ್ಲಿ ಮಿಂದೇಳುತ್ತಿದ್ದಾರೆ.

    PHOTOS| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಹಾಟ್​ ಬ್ಯೂಟಿ ಅಮಲಾರ ಬೋಲ್ಡ್​ ಅವತಾರಗಳು!

    ಡೆನಿಮ್​ ಶಾರ್ಟ್ಸ್​, ಬ್ರಾಲೆಟ್ ಮತ್ತು ಅದರ ಮೇಲೊಂದು ಕೋಟು ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಹಿಂದೆಂದೂ ಕಾಣಿಸದಷ್ಟು ತುಂಬಾ ಮಾದಕವಾಗಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಪೋಟೋ ಪೋಸ್ಟ್​ ಮಾಡಿರುವ ಅಮಲಾ, ರಜೆಯ ಕಂಪನ ಎಂದು ಬರೆದುಕೊಂಡಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 1 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿವೆ. (ಏಜೆನ್ಸೀಸ್​)

    VIDEO| ಟೇಕಾಫ್​ ಆದ ಬೆನ್ನಲ್ಲೇ ವಿದ್ಯುತ್​ ತಂತಿಗೆ ಡಿಕ್ಕಿಯಾಗಿ ಹೆಲಿಕಾಪ್ಟರ್​ ಪತನ: ಸಂಸದ ಸೇರಿ ನಾಲ್ವರ ಸ್ಥಿತಿ ಗಂಭೀರ ​

    ದುಡ್ಡು ಕೊಟ್ಟರೆ ನಮ್ಮ ಸಾಹೇಬರು ಗಾಡಿ ಹಿಡಿಯೋದಿಲ್ಲ! ಲೋಕಾ ದಾಳಿ ಬಳಿಕ ಪೇದೆಗಳಿಬ್ಬರ ಆಡಿಯೋ ವೈರಲ್​

    ಮಣಿದ ಸರ್ಕಾರ, ಮೀಸಲು ನೀಡಲು ನಿರ್ಧಾರ: ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts