More

    ಹುಟ್ಟುಹಬ್ಬದಂದು 2ನೇ ಮದುವೆ ಸುದ್ದಿ ಪ್ರಸ್ತಾಪ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ ಪೌಲ್

    ಹೈದ್ರಾಬಾದ್​: ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಟಿ ತಮ್ಮ ಜನ್ಮ ದಿನಾಚರಣೆ ಸಂಭ್ರಮದ ದಿನವೇ ತಮ್ಮ 2ನೇ ಮದುವೆ ವಿಚಾರವಾನ್ನು ಅಭಿಮಾನಿಗಳ ಎದುರು ಪ್ರಸ್ತಾಪ ಮಾಡಿದ್ದಾರೆ.

    ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಡಿಯೋ  ಸೋಶಿಯಲ್ ಮೀಡಿಯಾದಲ್ಲಿ ವೈರಲ್​​ ಆಗಿದ್ದು,  ಅಭಿಮಾನಿಗಳು ಶುಭಕೋರಿ ಕಾಮೆಂಟ್​​  ಮಾಡುತ್ತಿದ್ದಾರೆ.

    ಅಮಲಾ ಪೌಲ್​​ಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಾಲು ಸಾಲು ಅವಕಾಶಗಳು ಬಂದರೂ ನಿರೀಕ್ಷಿತ ಸ್ಟಾರ್ ಪಟ್ಟ ಸಿಗಲಿಲ್ಲ. ಕೆಲ ವರ್ಷಗಳ ಕಾಲ ತೆಲುಗಿನಲ್ಲಿ ಮಿಂಚಿದ್ದ ಈ ಚೆಲುವೆ ನಂತರ ತಮಿಳು, ಕನ್ನಡ ಚಿತ್ರಗಳನ್ನು ಮಾಡಿದರು. ತಮಿಳು ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಪ್ರೀತಿಸಿ  ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಆದರೆ ಇವರ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು. ವಿಚ್ಛೇದನದ ನಂತರವೂ ಅಮಲಾ ಪೌಲ್ ಒಂಟಿಯಾಗಿದ್ದರು. ಆದರೆ ಇದೀಗ ಅಮಲಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

    View this post on Instagram

    A post shared by Jagat Desai (@j_desaii)

    ಇಂದು ಅಮಲಾ ಪೌಲ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಪಬ್ ಒಂದರಲ್ಲಿ ಬರ್ತ್ ಡೇ ಆಚರಿಸಿಕೊಂಡ ಗೆಳೆಯ ಜಗತ್ ದೇಸಾಯಿ ಅದೇ ಸಮಯಕ್ಕೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ಕೂಡಲೇ ಅಮಲಾ ಪೌಲ್ ಕೂಡ ಓಕೆ ಅಂದಿದ್ದಾರೆ.

    ಈ ವಿಡಿಯೋವನ್ನು ಶೇರ್ ಮಾಡುತ್ತಾ.. ನನ್ನ ರಾಣಿ ಎಸ್. ಮದುವೆಯ ಘಂಟೆಗಳು ಮೊಳಗುತ್ತಿವೆ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿ ಎಂದು ಬರೆಯಲಾಗಿದೆ. ಅಮಲಾ ಪೌಲ್​ ಬಳಿ ಜಗತ್ ದೇಸಾಯಿ ಮದುವೆ ಪ್ರಸ್ತಾಪ ಮಾಡಿರುವ ವಿಡಿಯೋ ನೋಡಿದ ಅಭಿಮಾನಿಗಳು ನಟಿಯ ಹೊಸ ಜೀವನಕ್ಕೆ ಶುಭಕೋರುತ್ತಿದ್ದಾರೆ.

    ಅಮಲಾ ಪೌಲ್ ಅವರನ್ನು ಮದುವೆಯಾಗಲಿರುವ ಜಗತ್ ದೇಸಾಯಿ ಚಿತ್ರರಂಗಕ್ಕೆ ಸೇರಿದವರಲ್ಲ. ಎರಡು ವರ್ಷಗಳ ಹಿಂದೆ ಇವರ ನಡುವೆ ಪ್ರೀತಿ ಚಿಗುರಿದೆಯಂತೆ. ವಿಚ್ಛೇದನದ ನಂತರ ನಟಿ ಮರುಮದುವೆಯ ಬಗ್ಗೆ ಯೋಚಿಸದೆ ಸಿನಿಮಾಗಳತ್ತ ಗಮನ ಹರಿಸಿದರು. ಇದೀಗ 2ನೇ ಮದುವೆಗೆ ಸಿದ್ಧರಾಗಿದ್ದಾರೆ. ಅಮಲಾ ಪೌಲ್​​ ಸದ್ಯ ಎರಡು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ಹುಲಿ ಉಗುರು ಪ್ರಕರಣ; ದರ್ಶನ್​ ವಿರುದ್ಧ ದೂರು ನೀಡಿದ ಶಿವಕುಮಾರ್​ಗೆ ಕೊಲೆ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts