More

  ಗ್ರಾಮೀಣ‌ ಯುವಕರಿಂದ ಸಧೃಡ ದೇಶ ನಿರ್ಮಾಣ ಸಾಧ್ಯ- ಚಕ್ರವರ್ತಿ ಸೂಲಿಬೆಲೆ

  ಚಾಮರಾಜನಗರ: ದೇಶದ ಬೆನ್ನೆಲುಬಾದ ಹಳ್ಳಿಗಳ‌ ಯುವಕರು ಸಧೃಡರಾದರೆ ದೇಶ ಸಧೃಡಗೊಳ್ಳಲಿದೆ ಎಂದು ರಾಷ್ಟ್ರೀಯ ಚಿಂತಕ ಚರ್ಕವರ್ತಿ ಸೂಲಿಬೆಲೆ‌ ಹೇಳಿದರು.

  ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಜ.10ರಿಂದ 12ರವೆಗೆ ಹಮ್ಮಿಕೊಂಡಿರುವ “ವೀರ್ ಭಾರತ್ ಗುರಿಯತ್ತ ನಡೆ” ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

  ಹಳ್ಳಿಗಳ ಯುವಕರು ದುಷ್ಚಟಗಳಿಂದ ದೂರ ಉಳಿಯಬೇಕು. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್ ಸಧೃಡ ಯುವಪಡೆ ನಿರ್ಮಾಣಕ್ಕಾಗಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದೆ ಎಂದರು. ಚಂದ್ರು,‌ಮೋಹನ್, ರಾಜು, ಮಂಜು ಮತ್ತು ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts