More

    ಮಕ್ಕಳ ಚಲನವಲನದ ಮೇಲಿರಲಿ ಸದಾ ಗಮನ

    ಸಾಗರ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಕುರಿತು ಪಾಲಕರು ಹಾಗೂ ಶಿಕ್ಷಕರು ಸದಾ ಗಮನ ಹರಿಸಬೇಕು. ಕಾಲೇಜಿನ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅವಶ್ಯಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಹೇಳಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಾಲಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಶಿಸ್ತು ಮತ್ತು ಸಂಯಮ ಪಾಲನೆ ಮಾಡಬೇಕು ಎಂದು ಹೇಳಿದರು.
    ಕರೊನಾ ನಂತರದ ದಿನಗಳಲ್ಲಿ ಪದವಿ ಶಿಕ್ಷಣ ಕಲಿಕೆಯಲ್ಲಿ ಶಿಸ್ತು ಮತ್ತು ಶ್ರದ್ಧೆ ಕಾಣಿಸುತ್ತಿಲ್ಲ. ಸದಾ ಮೊಬೈಲ್ ಫೋನ್‌ನಲ್ಲಿ ಯುವ ಸಮೂಹ ಮುಳುಗಿರುವುದು ಕಂಡು ಬರುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಉನ್ನತ ಶಿಕ್ಷಣ ಇಲಾಖೆ ಎಲ್‌ಎಂಎಸ್‌ನಂತಹ ಕಲಿಕಾ ವಿಧಾನ ಜಾರಿಗೆ ತಂದ ಮೇಲೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದು ಕಡಿಮೆ ಆಗುತ್ತಿದೆ. ಪಾಲಕರು ಮಕ್ಕಳ ಚಲನವಲನದ ಬಗ್ಗೆ ಗಮನ ಹರಿಸುತ್ತಿರಬೇಕು ಎಂದು ಸಲಹೆ ನೀಡಿದರು.
    ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ. ಎ.ಬಿ.ಉಮೇಶ್, ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳು ಆರ್ಥಿಕವಾಗಿ ಹಿಂದುಳಿದವರು ಆಗಿರುತ್ತಾರೆ. ಈ ಮಕ್ಕಳ ಶೈಕ್ಷಣಿಕ ಏಳಿಗೆಯಲ್ಲಿ ಅಧ್ಯಾಪಕರ ಜತೆ ಸಮುದಾಯ ಸಹ ಕೈಜೋಡಿಸಬೇಕು. ಮಕ್ಕಳು ಶೈಕ್ಷಣಿಕ ವಿಷಯದಲ್ಲಿ ಪಾಲಕರಿಗೆ ಸುಳ್ಳು ಹೇಳುವ ಸಾಧ್ಯತೆ ಇರುತ್ತದೆ. ಪಾಲಕರು ಮಕ್ಕಳ ಬಗ್ಗೆ ಸದಾ ಜಾಗ್ರತೆ ವಹಿಸಬೇಕು ಎಂದರು.
    ಪ್ರಾಚಾರ್ಯ ಡಾ. ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಸವರಾಜಪ್ಪ, ಹನೀಫ್, ಸರೋಜಾ, ವಿಜಯಕುಮಾರ್ ಪಾಟೀಲ್, ಚಿದಾನಂದ್ ಇತರರಿದ್ದರು. ಸಿಂಧೂ ಪ್ರಾರ್ಥಿಸಿದರು. ಪ್ರೊ.ಮಂಜಪ್ಪ ಸ್ವಾಗತಿಸಿದರು. ಪ್ರೊ.ರಾಜು ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts