More

    ರಾತ್ರಿ ಗಸ್ತು ಮಾಡುವ ಎಎಸ್​​ಐಗಳಿಗೆ ಶಸ್ತ್ರಾಸ್ತ್ರ: ಸಾರ್ವಜನಿಕ ಭೇಟಿ ಕಡ್ಡಾಯಕ್ಕೆ ಪೊಲೀಸ್ ಅಧಿಕಾರಿಗಳಿಗೆ ಅಲೋಕ್​ ಕುಮಾರ್​​ ಸೂಚನೆ

    ಕಲಬುರಗಿ: ಜನರ ಹಾಗೂ ಪೊಲೀಸರ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ನಿಗದಿತವಾಗಿ ಠಾಣೆಗಳಲ್ಲಿ ಜನ ಸಂಪರ್ಕ ಸಭೆ ಹಾಗೂ ಪ್ರತಿದಿನ ಸಂಜೆ ಐದರಿಂದ ಆರು ಗಂಟೆವರೆಗೆ ವಿಸಿಟರ್ಸ್​ ಹವರ್ಸ್​​ ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ( ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಅಲೋಕ್​ ಕುಮಾರ್​​ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಎರಡು ದಿನಗಳ ಭೇಟಿಯಾಗಿ ನಗರಕ್ಕೆ ಆಗಮಿಸಿದ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ನಿಗದಿತ ಜನ ಸಂಪರ್ಕ ನಡೆದರೆ ಅಲ್ಲೇ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆಯಲ್ಲದೇ ಜನಸ್ನೇಹಿ ವಾತಾವರಣ ನಿರ್ಮಾಣವಾಗುತ್ತದೆ. ಅದಲ್ಲದೇ ವಿಜಿಟರ್ಸ್​ ಹವರ್ಸ್​​ ಅಳವಡಿಸಿಕೊಂಡರೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ವಿವರಣೆ ನೀಡಿದರಲ್ಲದೇ ಈ ಕುರಿತು ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಅಲ್ಲದೇ ರಾತ್ರಿ ಗಸ್ತು‌ಮಾಡುವ ಎಎಸ್​​ಐಗಳಿಗೆ ಕಡ್ಡಾಯವಾಗಿ ಶಸ್ತ್ರಾಸ್ತ್ರಗಳ ಜತಗೆ ಹೋಗುವುದು ಕಡ್ಡಾಯ ‌ಮಾಡಲಾಗುವುದು ಎಂದರು.

    ರೌಡಿಗಳ ನಿಗ್ರಹಕ್ಕೆ ಸೂಚನೆ: ರೌಡಿ ಪಡೆ ನಿಗ್ರಹಕ್ಕೂ ಸೂಚನೆ ನೀಡಲಾಗಿದ್ದು, ಗೂಂಡಾ ಕಾಯ್ದೆ ಅಥವಾ ಸಾಧ್ಯವಾದರೆ ಕೋಕಾ ಕಾಯ್ದೆ ಜಾರಿ ತರುವಂತೆ ನಿರ್ದೇಶನ ನೀಡಲಾಗಿದೆ. ಪ್ರಮುಖ ವಾಗಿ ಈಗಾಗಲೇ ನೀಡಲಾಗಿರುವ ಆಯುಧ ಅನುಮತಿಯನ್ನು ಪರಾಮರ್ಶಿಸುವಂತೆ ಹಾಗೂ ಮುಂದೆ ನೀಡಲಾಗುವ ಆಯುಧ ಅನುಮತಿಯನ್ನು ಎಲ್ಲ ಪರಾಮರ್ಶಿಸುವಂತೆ ಸೂಚನೆ ನೀಡಲಾಗುವುದು ಎಂದರು.

    ರೌಡಿ ಶೀಟರ್ ದಿಂದ ಹೆಸರು ತೆಗೆದು ಹಾಕಿರುವುದನ್ನು ಅವಲೋಕನ ನಡೆಸುವಂತೆ ಹಾಗೂ ಮತ್ತೆ ಅಕ್ರಮ ಚಟುವಟಿಕೆ ಕಂಡು ಬಂದರೆ ರೌಡಿ ಶೀಟರ್ ಓಪನ್ ಮಾಡುವಂತೆ ಸೂಚಿಸಲಾಗಿದೆ ಎಂದು ಅಲೋಕ್​ ಕುಮಾರ್​ ತಿಳಿಸಿದರು.

    ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್, ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಡಾ. ರವಿಕುಮಾರ, ಎಸ್ಪಿ ಇಶಾ ಪಂತ್​, ಬೀದರ್ ಎಸ್ಪಿ ಡಿ. ಕಿಶೋರ್​ ಬಾಬು, ಡಿಸಿಪಿ ಅಡ್ಡೂರು ಶ್ರೀ ನಿವಾಸುಲು ಸೇರಿದಂತೆ ಮುಂತಾದವರಿದ್ದರು.

    ಕಲ್ಲಕುರಿಚಿ ಶಾಲಾ ವಿದ್ಯಾರ್ಥಿನಿ ಸಾವು ಪ್ರಕರಣ: ಮರು ಮರಣೋತ್ತರ ಪರೀಕ್ಷೆ ತಡೆಗೆ ಸುಪ್ರೀಂಕೋರ್ಟ್​ ನಕಾರ

    ಇಂದಿಗೂ ಸರಿಸಾಟಿಯಿಲ್ಲ ಈಕೆಯ ಸೌಂದರ್ಯಕ್ಕೆ! ಶೀಘ್ರದಲ್ಲೇ ತೆರೆಗೆ ಬರಲಿದೆ ಮಧುಬಾಲಾ ಬಯೋಪಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts