More

    ಕಲ್ಲಕುರಿಚಿ ಶಾಲಾ ವಿದ್ಯಾರ್ಥಿನಿ ಸಾವು ಪ್ರಕರಣ: ಮರು ಮರಣೋತ್ತರ ಪರೀಕ್ಷೆ ತಡೆಗೆ ಸುಪ್ರೀಂಕೋರ್ಟ್​ ನಕಾರ

    ನವದೆಹಲಿ: ಮದ್ರಾಸ್​ ಹೈಕೋರ್ಟ್​ ನೀಡಿದ್ದ  ಮರುಮರಣೋತ್ತರ ಪರೀಕ್ಷೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಕಲ್ಲಕುರಿಚಿಯ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಪೋಷಕರ ಮನವಿಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ.

    ಇದರೊಂದಿಗೆ ನಾಳೆ ವಿದ್ಯಾರ್ಥಿನಿಯ ಕುಟುಂಬದ ಮನವಿಯನ್ನು ಆಲಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ತಮ್ಮಿಚ್ಛೆಯ ವೈದ್ಯಕೀಯ ತಂಡವನ್ನು ನೇಮಿಸಿ ಮರು ಮರಣೊತ್ತರ ಪರೀಕ್ಷೆ ನಡೆಸಬೇಕೆಂದು ಬಾಲಕಿಯ ತಂದೆ ಮನವಿ ಮಾಡಿದ್ದಾರೆ.

    12ನೇ ತರಗತಿಯ ವಿದ್ಯಾರ್ಥಿ ಸಾವಿನ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಸದ್ಯ ಪ್ರಕರಣ ಸಂಬಂಧ ಸೋಮವಾರ ಮದ್ರಾಸ್​ ಹೈಕೋರ್ಟ್​ 2ನೇ ಬಾರಿಗೆ ಮರಣೋತ್ತರ ಪರೀಕ್ಷೆ ಮಾಡುವಂತೆ ಆದೇಶ ನೀಡಿತ್ತು.

    ಮೃತ ವಿದ್ಯಾರ್ಥಿನಿಯ ಮೊದಲ ಶವಪರೀಕ್ಷೆ ಜುಲೈ 14 ರಂದು ನಡೆದಿತ್ತು, ಅದರಲ್ಲಿ ವಿದ್ಯಾರ್ಥಿಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದಾದ ಬಳಿಕ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿ ತಂದೆ ಇದೊಂದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದು, ಎರಡನೇ ಬಾರಿ ಶವಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದರು. (ಏಜೆನ್ಸೀಸ್​)

    ಇಂದಿಗೂ ಸರಿಸಾಟಿಯಿಲ್ಲ ಈಕೆಯ ಸೌಂದರ್ಯಕ್ಕೆ! ಶೀಘ್ರದಲ್ಲೇ ತೆರೆಗೆ ಬರಲಿದೆ ಮಧುಬಾಲಾ ಬಯೋಪಿಕ್​

    ಹೃತಿಕ್​ ರೋಷನ್​ಗೆ 2ನೇ ಮದುವೆ ಯೋಗ ಇದೆ ಎಂದಿದ್ದ ಜ್ಯೋತಿಷಿಯ ಭವಿಷ್ಯ ನಿಜವಾಯ್ತಾ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts