More

    ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶ ಇಟ್ಟಿದ್ದಾರೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಂದೆ ದೇಶದಲ್ಲಿ ಏನೆಲ್ಲ ಬದಲಾವಣೆ ಆಗಬಹುದು ಎಂಬ ದೂರದೃಷ್ಟಿ ಇಟ್ಟುಕೊಂಡು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಸಂವಿಧಾನದಲ್ಲಿ ತಿದ್ದುಪಡಿಗೂ ಅವಕಾಶ ಇಟ್ಟಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

    ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಭಾನುವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶ ಮತ್ತು ಅಂಬೇಡ್ಕರ್ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

    ರಾಷ್ಟ್ರಪಿತ ಗಾಂಧೀ ಅವರನ್ನು ಮಹಾತ್ಮ ಎಂದು ಕರೆದಂತೆ, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೂ ಮಹಾತ್ಮ ಅಂಬೇಡ್ಕರ್ ಎಂದು ಕರೆಯಬೇಕು. ಪಾಶ್ಚಿಮಾತ್ಯ ದೇಶಗಳ ಸಂವಿಧಾನ ಹಲವಾರು ಸಂದರ್ಭಗಳಲ್ಲಿ ವಿಫಲವಾಗಿದೆ. ಆದರೆ, ಭಾರತದ ಸಂವಿಧಾನ ಎಂದಿಗೂ ವಿಫಲವಾಗಿಲ್ಲ. ಸರ್ಕಾರ ಬದಲಾದರೂ ಸಂವಿಧಾನ ಹಾಗೆಯೇ ಇರುತ್ತದೆ. ಉತ್ತಮ ಆಡಳಿತಕ್ಕೆ ನಮ್ಮ ಸಂವಿಧಾನವೇ ಮೂಲ ಕಾರಣ. ಅದರಲ್ಲಿ ಸಾಮಾಜಿಕ ನ್ಯಾಯ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಹತ್ವ ತಿಳಿಸಲಾಗಿದೆ ಎಂದು ಹೇಳಿದರು.

    ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯನ್ನು, ಪ್ರಜಾಪ್ರಭುತ್ವವನ್ನು ಹೇಗೆ ನಿಭಾಯಿಸಬೇಕು ಎನ್ನುವ ಚಿಂತನೆ ನಮಗೆ ಇರಲಿಲ್ಲ. ಅದಕ್ಕೊಂದು ಚೌಕಟ್ಟು, ನೀತಿ, ರೀತಿಯನ್ನು ಸಂವಿಧಾನದ ಮೂಲಕ ಅಳವಡಿಸಿ ಕೊಟ್ಟವರು ಡಾ. ಅಂಬೇಡ್ಕರ್. ಅವರ ಚಿಂತನೆ, ತತ್ವ-ಸಿದ್ಧಾಂತ ಇಂದಿಗೂ ಪ್ರಸ್ತುತ ಎಂದರು.

    ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಶಾಕೀರ್ ಸನದಿ, ಮೆಹಮೂದ್ ಕೋಳೂರ, ಗುರುನಾಥ ಉಳ್ಳಿಕಾಶಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts