More

    ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಡಳಿತದ ವಿರುದ್ಧ ಭ್ರಷ್ಟಾಚಾರ, ಕಮಿಷನ್ ವ್ಯವಹಾರ ಆರೋಪ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತದ ವಿರುದ್ಧ ಭ್ರಷ್ಟಾಚಾರ, ಕಮಿಷನ್ ವ್ಯವಹಾರಗಳ ಆರೋಪದ ಸರಣಿ ಮುಂದುವರಿದಿದೆ. ತಮ್ಮ ಮಾಸಿಕ ವೇತನದಲ್ಲಿ ಗುತ್ತಿಗೆದಾರರು ಪ್ರತಿ ತಿಂಗಳು 1,500ರಿಂದ 3,000 ರೂ. ವರೆಗೆ ಕಡಿತ (ಕಮಿಷನ್) ಮಾಡುತ್ತಿದ್ದಾರೆ ಎಂದು ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಚಾಲಕರು (ಹೊರ ಗುತ್ತಿಗೆ) ಆರೋಪಿಸಿದ್ದಾರೆ.

    ಸೋಮವಾರ ಸಂಜೆ ಪಾಲಿಕೆ ಸಭಾಭವನದಲ್ಲಿ ಪೌರ ಕಾರ್ವಿುಕರ ಸಮಸ್ಯೆಗಳ ಕುರಿತು ಶಾಸಕ ಪ್ರಸಾದ ಅಬ್ಬಯ್ಯ ಅವರು ಕರೆದಿದ್ದ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹಾಗೂ ಅಧಿಕಾರಿಗಳ ಎದುರಿನಲ್ಲಿಯೇ ಆಟೋ ಟಿಪ್ಪರ್ ಚಾಲಕರು, ಗುತ್ತಿಗೆದಾರರು ನಡೆಸುತ್ತಿರುವ ದಬ್ಬಾಳಿಕೆ, ಶೋಷಣೆಯನ್ನು ಬಹಿರಂಗ ಪಡಿಸಿದರು.

    ‘ಸುಮಾರು 200 ಜನ ಆಟೋ ಟಿಪ್ಪರ್ ಚಾಲಕರಿದ್ದಾರೆ. ಆದರ್ಶ ಎಂಟರ್​ಪ್ರೖೆಸಿಸ್​ನವರು ಗುತ್ತಿಗೆ ಹಿಡಿದ್ದಾರೆ. ಪ್ರತಿ ಆಟೋ ಟಿಪ್ಪರ್ ಚಾಲಕರಿಗೆ 12,810 ಸಂಬಳ ಪಾವತಿ (ಇಸಿಎಸ್) ಪಾವತಿಯಾಗುತ್ತದೆ. ಬಳಿಕ ಗುತ್ತಿಗೆದಾರರಿಗೆ ನಗದು ರೂಪದಲ್ಲಿ 1,500-3,000 ವಾಪಸ್ ಕೊಡಬೇಕು. ಕಳೆದ 3 ವರ್ಷಗಳಿಂದ ಹೀಗೆ ನಡೆದಿದೆ. ಪ್ರಶ್ನೆ ಮಾಡಿದರೆ ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ. ಗಾಡಿ ಚಾವಿ ಕೊಟ್ಟು ಹೋಗು ಎನ್ನುತ್ತಾರೆ. ಇದರಲ್ಲಿ (ಕಮಿಷನ್) ಅಧಿಕಾರಿಗಳ ಪಾಲು ಇದೆ ಎನ್ನುತ್ತಾರೆ’ ಎಂದು ಆಟೋ ಟಿಪ್ಪರ್ ಚಾಲಕ ಚಂದ್ರಶೇಖರ ಶಿರಗುಪ್ಪಿ ಹಾಗೂ ರಾಘವೇಂದ್ರ ದೂರಿದರು.

    ಣ ತಿಂದರೆ ಒಳ್ಳೆಯದಾಗುವುದಿಲ್ಲ

    ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸ್ವಚ್ಛತೆ ಗುತ್ತಿಗೆದಾರರು, ಪಾಲಿಕೆ ಅಧಿಕಾರಿಗಳು ಸೇರಿಕೊಂಡು ಪೌರ ಕಾರ್ವಿುಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದೀಗ ನೀವು ಬಹಿರಂಗವಾಗಿ ಹೇಳಿದ್ದೀರಿ. ಇಲ್ಲಿಯವರೆಗೂ ಯಾರೂ ನನ್ನ ಗಮನಕ್ಕೆ ತಂದಿಲ್ಲ. ನಾಳೆ ಯಾರನ್ನಾದರೂ ಕೆಲಸದಿಂದ ತೆಗೆದರೆ ನಾನು ನೋಡಿಕೊಳ್ಳುತ್ತೇನೆ. ಇಂಥವರಿಂದ ಹಣ ಪಡೆದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು.

    ಗುತ್ತಿಗೆದಾರ ಎಷ್ಟೇ ದೊಡ್ಡವನಾಗಿರಲಿ, ಬುದ್ಧಿ ಕಲಿಸಲು ನಮ್ಮ ಬಳಿ ಬಹಳ ದಾರಿ ಇದೆ. ಆಟೋ ಟಿಪ್ಪರ್ ರಿಪೇರಿಯನ್ನು ನಮ್ಮಿಂದಲೇ ಮಾಡಿಸುತ್ತಾರೆ ಎಂದು ಚಾಲಕರು ನನ್ನ ಬಳಿ ದೂರಿದ್ದಾರೆ. ಆಟೋ ಟಿಪ್ಪರ್ ರಿಪೇರಿಗೆ ಗ್ಯಾರೇಜ್ ಎಂಬುದು ಇಲ್ಲವೇ ? ನಿಮ್ಮ ನಿರ್ಲಕ್ಷ್ಯಂದ ಕಳೆದ ವಾರ ಚಾಲಕನೊಬ್ಬನ ಜೀವ ಹೋಯಿತು ಎಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಕೆಲಸದಿಂದ ತೆಗೆದಿರುವ 16 ಜನ ಆಟೋ ಟಿಪ್ಪರ್ ಚಾಲಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು. ಸಂಬಳದಲ್ಲಿ ಕಮಿಷನ್ ಪಡೆದಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು. ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts