More

    ‘ನಮ್ಮವರನ್ನು ಕಳೆದುಕೊಂಡ ನೋವು ನಮಗಿದೆ, ಶೂಟಿಂಗ್ ಮಾಡಲ್ಲ’

    ಬೆಂಗಳೂರು: ಕರ್ನಾಟಕದಾದ್ಯಂತ ಮೇ 10ರಿಂದ 24ರವರೆಗೆ ಲಾಕ್ಡೌನ್ ಮಾಡಬೇಕೆಂಬ ಆದೇಶಕ್ಕೆ ತಾವು ಸಿದ್ಧವಿರುವುದಾಗಿ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ. 

    ಮೇ 10ರಿಂದ 14 ದಿನಗಳ ಕಾಲ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಧಾರಾವಾಹಿ, ಸಿನಿಮಾ ಮತ್ತು ರಿಯಾಲಿಟಿ ಷೋಗಳ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶಕ್ಕೆ ನಮ್ಮ ಬೆಂಬಲವಿದೆ. ನಾವು ಚಿತ್ರೀಕರಣ ಮಾಡುವುದಿಲ್ಲ. ಕರೊನಾದಿಂದಾಗಿ ನಮ್ಮ ಉದ್ಯಮದ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಕಲಾವಿದರ ನಿಧನ ನಮಗೂ ನೋವು ತಂದಿದೆ. ಹಾಗಾಗಿ ಯಾವುದೇ ಶೂಟಿಂಗ್ಗೆ ಅನುಮತಿ ನೀಡುವುದಿಲ್ಲ ಎಂದು ಅಸೋಸಿಯೇಷನ್ ತಿಳಿಸಿದೆ.

    ಒಂದು ವೇಳೆ ಯಾರಾದರೂ ಕದ್ದು ಮುಚ್ಚಿ ಶೂಟಿಂಗ್ ಮಾಡಿರುವುದು ತಿಳಿದುಬಂದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ದಿಗ್ವಿಜಯ ನ್ಯೂಸ್ಗೆ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಎಸ್ ವಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts