More

    VIDEO: 6 ತಿಂಗಳ ಪುತ್ರಿಗೆ ಅರ್ಧಶತಕವನ್ನು ಅರ್ಪಿಸಿ ಸಂಭ್ರಮಿಸಿದ ಪಾಕ್ ನಾಯಕಿ ಬಿಸ್ಮಾ!

    ಮೌಂಟ್ ಮೌಂಗನುಯಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್​ ಮಹಿಳಾ ವಿಶ್ವಕಪ್‌ನಲ್ಲಿ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಬಳಿಕ ತೊಟ್ಟಿಲು ತೂಗುವ ಸನ್ನೆಯೊಂದಿಗೆ ಸಂಭ್ರಮಿಸಿದರು. ಈ ಮೂಲಕ ಡ್ರೆಸ್ಸಿಂಗ್ ರೂಂನಲ್ಲಿ ತನ್ನ ಅಮ್ಮನ ಜತೆಗಿದ್ದ 6 ತಿಂಗಳ ಪುತ್ರಿ ಫಾತಿಮಾಗೆ ಈ ಅರ್ಧಶತಕವನ್ನು ಅರ್ಪಿಸಿದರು. ಇದರೊಂದಿಗೆ ಮಹಿಳಾ ದಿನದ ವಿಶೇಷ ಸಂಭ್ರಮವನ್ನೂ ಆಚರಿಸಿದರು.

    ತಾಯಿಯಾದ ಆರೇ ತಿಂಗಳಲ್ಲಿ ಮರಳಿ ಮೈದಾನಕ್ಕಿಳಿದು ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿರುವ 30 ವರ್ಷದ ಬಿಸ್ಮಾ ಸಾಧನೆ ಎಲ್ಲ ಮಹಿಳಾ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದು ಭಾರತ ತಂಡದ ಆಟಗಾರ್ತಿ ಸ್ಮತಿ ಮಂದನಾ ಮೆಚ್ಚುಗೆ ಸೂಚಿಸಿದ್ದಾರೆ. ಪಾಕ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದ ಬಳಿಕ ಭಾರತ ತಂಡದ ಆಟಗಾರ್ತಿಯರು ಬಿಸ್ಮಾ ಅವರ ಮಗುವಿನ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕ್ರೀಡಾಸ್ಫೂರ್ತಿಯ ವರ್ತನೆಯೊಂದಿಗೆ ಮನಗೆದ್ದಿದ್ದರು. ಬಿಸ್ಮಾ ಕಳೆದ ಆಗಸ್ಟ್‌ನಲ್ಲಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ನಾಯಕಿ ಬಿಸ್ಮಾ ಮರೂಫ್​ (78*ರನ್, 122 ಎಸೆತ, 8 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ ಪಾಕ್ ತಂಡ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್‌ಗಳಿಂದ ಶರಣಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 6 ವಿಕೆಟ್‌ಗೆ 190 ರನ್‌ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆಸೀಸ್ 34.4 ಓವರ್‌ಗಳಲ್ಲಿ 3 ವಿಕೆಟ್‌ಗೆ 193 ರನ್‌ಗಳಿಸಿ ಜಯದ ನಗೆ ಬೀರಿತು. ಆಸೀಸ್ ತಂಡ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿದರೆ, ಪಾಕ್ ತಂಡ ಸತತ 2ನೇ ಸೋಲಿನ ರುಚಿ ಕಂಡಿತು.

    ಪಾಕಿಸ್ತಾನ: 6 ವಿಕೆಟ್‌ಗೆ 190 (ಬಿಸ್ಮಾ ಮರೂಫ್​ 78*, ಆಲಿಯಾ ರಿಯಾಜ್ 53, ಅಲನಾ ಕಿಂಗ್ 24ಕ್ಕೆ 2, ಎಲ್ಲಿಸ್ ಪೆರ‌್ರಿ 27ಕ್ಕೆ 1, ಮೆಗನ್ ಸ್ಚುಟ್ 43ಕ್ಕೆ 1, ವೆಲ್ಲಿಂಗ್ಟನ್ 25ಕ್ಕೆ 1), ಆಸ್ಟ್ರೇಲಿಯಾ: 34.4 ಓವರ್‌ಗಳಲ್ಲಿ 3 ವಿಕೆಟ್‌ಗೆ 193 (ಅಲಿಸಾ ಹೀಲಿ 72, ರಚೀಲ್ ಹೇನ್ಸ್ 34, ಮೆಗ್ ಲ್ಯಾನಿಂಗ್ 35, ಎಲ್ಲಿಸ್ ಪೆರ‌್ರಿ 26*, ಬೆತ್ ಮೂನಿ 23*, ಸೊಹೈಲ್ 39ಕ್ಕೆ 2, ನಶ್ರಾ ಸಂಧು 30ಕ್ಕೆ 1).

    ವಿಡಿಯೋಗಾಗಿ ಈ ಲಿಂಕ್​ ಒತ್ತಿರಿ:

    https://twitter.com/krithika0808/status/1501037637016354817?ref_src=twsrc%5Etfw%7Ctwcamp%5Etweetembed%7Ctwterm%5E1501037637016354817%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fsports%2Fcricket%2Fwomens-wc-pakistan-skipper-bismah-maroof-does-adorable-baby-cradle-celebration-for-daughter-vs-aus-watch-article-90076411

    ಆರ್‌ಸಿಬಿ ತಂಡದ ಹೊಸ ನಾಯಕನ ಹೆಸರು ಘೋಷಣೆ ಯಾವಾಗ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts