More

    ಕರೊನಾ ರೋಗಿಯ ಅಂತ್ಯಕ್ರಿಯೆ ಮಾಡಿದ್ದ ಕುಟುಂಬಕ್ಕೆ ಮರುದಿನವೇ ಆತ ಬದುಕಿದ್ದಾನೆಂಬ ಸುದ್ದಿ ಬಂತು!

    ಅಹಮದಾಬಾದ್​: ಇಲ್ಲಿನ ಸಿವಿಲ್​ ಆಸ್ಪತ್ರೆಯು ಕರೊನಾ ಬಿಕ್ಕಟ್ಟಿನ ಅಸಮರ್ಪಕ ನಿರ್ವಹಣೆಯಿಂದಾಗಿ ಮಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ. ಗುಜರಾತ್​ ರಾಜಧಾನಿಯ ಪ್ರಮುಖ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದ್ದು, ಕೋವಿಡ್​-19 ರೋಗಿಯ ಕುಟುಂಬವೊಂದು ರೋಗಿ ಮೃತಪಟ್ಟಿದ್ದಾನೆಂದು ನಂಬಿ ಅಂತ್ಯಕ್ರಿಯೆ ಮಾಡಿದ ಬಳಿಕ ಆತ ಬದುಕಿದ್ದಾನೆ ಎಂಬುದನ್ನು ಕೇಳಿ ದಿಗ್ಭ್ರಮೆಗೊಂಡ ಪ್ರಸಂಗ ಜರುಗಿದೆ. ಆದರೆ, ನಿಜಕ್ಕೂ ಆತ ಸತ್ತಿದ್ದ.

    ಇದನ್ನೂ ಓದಿ: ಕರೆ ಮಾಡಿ ನೆರೆಮನೆಯವರನ್ನು ಕರೆದ ಯುವಕ: ಬಂದು ನೋಡಿದವರಿಗೆ ಕಾದಿತ್ತೊಂದು ಶಾಕ್!

    ದೇವರಾಂಭಾಯ್​ ಭಿಸಿಕರ್ ಎಂಬಾತ ಕರೊನಾ ರೋಗ ಲಕ್ಷಣಗಳಿಂದ ಅಹಮದಾಬಾದ್​ ಸಿವಿಲ್​ ಆಸ್ಪತ್ರೆಗೆ ಮೇ 28ರಂದು ದಾಖಲಾಗಿದ್ದರು. ಮಾರನೇ ದಿನ ಅಂದರೆ ಮೇ 29ರ ಮಧ್ಯಾಹ್ನ ಆತ ಮೃತಪಟ್ಟಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಆಘಾತಕ್ಕೀಡಾದ ಕುಟುಂಬ ಅಳುತ್ತಲೇ ಆಸ್ಪತ್ರೆಗೆ ಧಾವಿಸಿತ್ತು. ಅದೇ ವೇಳೆ ಭಿಸಿಕರ್ ಅವರ​ ಸ್ಯಾಂಪಲ್​ ಅನ್ನು ಟೆಸ್ಟಿಂಗ್​ ಕಳುಹಿಸಿದ್ದ ವರದಿ ಇನ್ನು ಬಂದಿರಲಿಲ್ಲ. ಆದಾಗ್ಯೂ ಮುನ್ನೆಚ್ಛರಿಕಾ ಕ್ರಮಗಳನ್ನು ತೆಗೆದುಕೊಂಡು ಅಂತ್ಯಕ್ರಿಯೆ ನಡೆಸಲು ಮೃತದೇಹದ ಗುರುತನ್ನು ಬಹಿರಂಗಪಡಿಸಿದೇ ಸೀಲ್​ ಡೌನ್​ ಮಾಡಿ ಕುಟಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಯಿತು.

    ಮೇ 29ರಂದು ಕೆಲವೇ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆಯು ನಡೆಯಿತು. ಆದರೆ, ಮೇ 30ರಂದು ಆಸ್ಪತ್ರೆಯಿಂದ ಮತ್ತೆ ಕರೆ ಬಂದಿತ್ತು. ಕರೆ ಸ್ವೀಕರಿಸಿದ ಭಿಸಿಕರ್​ ಕುಟುಂಬಕ್ಕೆ ಅಕ್ಷರಶಃ ಶಾಕ್​ ಕಾದಿತ್ತು. ಏಕೆಂದರೆ ಈಗಾಗಲೇ ಅಂತ್ಯಕ್ರಿಯೆ ಮಾಡಿದ್ದ ಭಿಸಿಕರ್​ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂಬುದನ್ನು ಕೇಳಿ ದಿಗ್ಭ್ರಮೆಗೊಂಡರು.​

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಗುರುತಿಸಿದ್ರೆ ನಿಮಗೆ ಫುಲ್​ ಮಾರ್ಕ್ಸ್​!

    ಈ ಬಗ್ಗೆ ಮಾತನಾಡಿರುವ ಭಿಸಿಕರ್​ ಸಂಬಂಧಿ ನೈಲೇಶ್​ಭಾಯ್, ಭಿಸಿಕರ್​ ಬದುಕಿದ್ದಾನೋ? ಇಲ್ಲವೋ?​ ಕುಟುಂಬ ಮಾತ್ರ ಈ ಕ್ಷಣಕ್ಕೂ ಗೊಂದಲಕ್ಕೀಡಾಗಿದೆ. ಕರೆ ಸ್ವೀಕರಿಸಿದ ಬಳಿಕ ಆಸ್ಪತ್ರೆಗೆ ಹೋದೆವು. ಆದರೆ, ಸಿಬ್ಬಂದಿಯೂ ಗೊಂದಲಕ್ಕೀಡಾಗಿ ಕರೆ ಮಾಡಿದ್ದಾರೆ. ಭಿಸಿಕರ್​ ನಿಜವಾಗಿಯೂ ಮೇ 29ರಂದು ಮೃತಪಟ್ಟಿದ್ದಾರೆ ಎಂದು ಹೇಳಿ ಕಳುಹಿಸಿದರು ಎಂದರು.

    ಕೊನೆಗೂ ನಿಜಾಂಶ ತಿಳಿಯಿತ್ತಲ್ಲ ಎಂದು ಸುಮ್ಮನ್ನಾಗಿದ್ದ ಕುಟುಂಬಕ್ಕೆ ಮತ್ತೊಂದು ಬಾರಿ ಕರೆ ಬಂದಿತ್ತು. ಭಿಸಿಕರ್​ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಅವರ ಕರೊನಾ ವರದಿಯು ನಗೆಟಿವ್​ ಬಂದಿದೆ ಎಂಬುದನ್ನು ಕೇಳಿ ಆತನ ಕುಟುಂಬ ಮತ್ತಷ್ಟು ಆಘಾತಕ್ಕೆ ಒಳಗಾಯಿತು. ಆದರೆ, ಕೊನೆಗೆ ಆಸ್ಪತ್ರೆಯ ವೈದ್ಯರಾದ ಶಶಾಂಕ್​ ಜೆ ಪಾಂಡ್ಯ ಅವರು ಭಿಸಿಕರ್​ ಮೃತಪಟ್ಟ ಸುದ್ದಿಯನ್ನು ಖಚಿತ ಪಡಿಸುತ್ತಾರೆ. ಅವರು ಕರೊನಾದಿಂದಲ್ಲದೆ, ಸುಗರ್​ ಲೆವೆಲ್​ ಹೆಚ್ಚಾಗಿ ಉಸಿರಾಟದಲ್ಲಿ ತೊಂದರೆಯಾಗಿ ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ, ರೋಗಿಯ ಕುಟುಂಬಕ್ಕೆ ಎದುರಾದ ಎರಡೆರಡು ಶಾಕ್​ ಮಾತ್ರ ದುಃಖಕರ ಸಂಗತಿಯೇ ಸರಿ. (ಏಜೆನ್ಸೀಸ್​)

    ಕ್ಯಾಪ್ಟನ್​ ಕೂಲ್​ ರಾತ್ರಿ ನಿದ್ದೆಯಲ್ಲಿ ಕನವರಿಸುವುದು ಕ್ರಿಕೆಟ್​ ಅಲ್ಲ, ಇದನ್ನಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts