More

    ಆಲಿಯಾ ಬರೋವರೆಗೂ ‘ಆರ್​ಆರ್​ಆರ್​’ ಮುಂದುವರೆಯಲ್ಲ …

    ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ಚಿತ್ರವಾದ ‘ಆರ್​ಆರ್​ಆರ್​’ ಮೂಲಕ, ಬಾಲಿವುಡ್​ ನಟಿ ಆಲಿಯಾ ಭಟ್​ ಟಾಲಿವುಡ್​ಗೆ ಎಂಟ್ರಿ ಕೊಡುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ತಾರಕ್​ ಅಲಿಯಾಸ್​ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ರಾಮ್​ಚರಣ್​ ತೇಜ ನಾಯಕರಾಗಿ ನಟಿಸುತ್ತಿದ್ದು, ಈ ಪೈಕಿ ರಾಮ್​ಚರಣ್​ಗೆ ನಾಯಕಿಯಾಗಿ ಆಲಿಯಾ ನಟಿಸುತ್ತಿದ್ದಾರೆ.

    ಎಲ್ಲಾ ಸರಿ, ಈ ಚಿತ್ರಕ್ಕೆ ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಲೇ ಇದ್ದು, ಅಂತಿಮವಾಗಿ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಮುಗಿದು, 2021ರ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಿರಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಎಲ್ಲವೂ ತಲೆ ಕೆಳಗಾಗಿದೆ.

    ಇದನ್ನೂ ಓದಿ: ಟ್ರೋಲ್​ಗೆ ಹೆದರಿದ ಆಲಿಯಾ; ಟ್ವಿಟರ್ ಕಮೆಂಟ್​ ಬಾಕ್ಸ್ ಬ್ಲಾಕ್​ ಮಾಡಿ ‘ಸಡಕ್​ 2’ ಬಿಡುಗಡೆ ದಿನಾಂಕ ಘೋಷಣೆ 

    ಈ ಮಧ್ಯೆ, ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆ ಒಂದು ವರ್ಷ ಮುಂದಕ್ಕೆ ಹೋಗಿದೆ ಎಂದು ಹೇಳಲಾಗಿತ್ತು. ಅಂದರೆ, 2021ರ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿದ್ದ ಚಿತ್ರವು, 2022ಕ್ಕೆ ಬಿಡುಗಡೆಯಾಗುತ್ತದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಲೇ ಇತ್ತು. ಚಿತ್ರತಂಡದವರು ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಈಗ ಈ ಸುದ್ದಿ ನಿಜ ಎಂದನಿಸುತ್ತಿದೆ.

    ಅದಕ್ಕೆ ಕಾರಣ, ಆಲಿಯಾ ಭಟ್​ ಡೇಟ್​ ಕೊಟ್ಟಿರುವುದು 2021ಕ್ಕಂತೆ. ಹೌದು, ಲಾಕ್​ಡೌನ್​ಗೂ ಮುನ್ನ ‘ಬ್ರಹ್ಮಾಸ್ತ್ರ’ ಎಂಬ ಚಿತ್ರದಲ್ಲಿ ಆಲಿಯಾ ನಟಿಸುತ್ತಿದ್ದರು. ಈ ಚಿತ್ರದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದೆಯಂತೆ. ಇನ್ನು ಕೆಲವು ದಿನಗಳ ಚಿತ್ರೀಕರಣ ಮುಗಿದರೆ, ಕುಂಬಳಕಾಯಿ ಒಡೆಯಬಹುದು.

    ಇದನ್ನೂ ಓದಿ: PHOTOS: ರಾಣಾ ದಗ್ಗುಬಾಟಿ- ಮಿಹಿಕಾ ಮದುವೆಗೆ ಶುರುವಾಗಿದೆ ತಯಾರಿ

    ಒಂದು ಪಕ್ಷ, ಆಲಿಯಾ ಏನಾದರೂ ‘ಆರ್​ಆರ್​ಆರ್​’ ಶೂಟಿಂಗ್​ಗೆ ಹೋದರೆ, ಆಗ ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣ ಇನ್ನಷ್ಟು ತಡವಾಗುತ್ತದೆ. ಹಾಗಾಗಿ, ಮೊದಲು ‘ಬ್ರಹ್ಮಾಸ್ತ್ರ’ ಚಿತ್ರೀಕರಣ ಮುಗಿಸಿ, ಆ ನಂತರ ‘ಆರ್​ಆರ್​ಆರ್​’ ಚಿತ್ರೀಕರಣದಲ್ಲಿ ಆಲಿಯಾ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸರಿಯಾಗಿ ಆಲಿಯಾ 2021ರಲ್ಲಿ ತಮ್ಮ ಡೇಟ್​ಗಳನ್ನು ಕೊಟ್ಟಿದ್ದಾರಂತೆ.

    ಅಲ್ಲಿಗೆ, ‘ಆರ್​ಆರ್​ಆರ್​’ ಚಿತ್ರದ ಚಿತ್ರೀಕರಣವೇನಿದ್ದರೂ ಮುಂದಿನ ವರ್ಷ ಪ್ರಾರಂಭವಾಗಿ, ಅದರ ಮುಂದಿನ ವರ್ಷ ಬಿಡುಗಡೆಯಾಗುತ್ತದೆ ಎಂಬ ಸ್ಥಿತಿ ಇದೆ. ಮುಂದಿನ ವರ್ಷವೇ ಚಿತ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿದ್ದ ಅಭಿಮಾನಿಗಳು, ಇನ್ನೂ ಒಂದು ವರ್ಷ ಕಾಯದೇ ಬೇರೆ ವಿಧಿಯಿಲ್ಲ.

    ರಾಮ ಮಂದಿರ ನಿರ್ಮಾಣಕ್ಕೆ ಶಾರೂಖ್​ ಕೊಟ್ಟ ದೇಣಿಗೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts