More

  ಮದ್ಯ ವ್ಯಸನ ಮುಕ್ತ ಕಾರ್ಯ ಸ್ವಾಗತಾರ್ಹ

  ಸಿಂಧನೂರು: ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್‌ನಿಂದ ಶನಿವಾರ ಮದ್ಯ ವರ್ಜನ ಶಿಬಿರದ ಪೂರ್ವಭಾವಿ ಸಭೆ ನಡೆಯಿತು.

  ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸಭೆ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಈ ಮಹತ್ವದ ಕಾರ್ಯದಿಂದಾಗಿ ಮದ್ಯದಿಂದ ಹಾಳಾಗುತ್ತಿದ್ದ ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕು ಕಂಡುಕೊಂಡಿವೆ. ಈ ಶಿಬಿರ ಅಗತ್ಯವಾಗಿದ್ದು ಮದ್ಯದ ದಾಸರಾಗಿ ಹೆಂಡತಿ-ಮಕ್ಕಳನ್ನು ಬೀದಿಗೆ ತಳ್ಳುವವರನ್ನು ಮದ್ಯ ವ್ಯಸನಮುಕ್ತರಾಗಿಸುವ ಸಂಕಲ್ಪ ಸ್ವಾಗತಾರ್ಹ ಎಂದರು.

  ಪ್ರಮುಖರಾದ ಕೆ.ಕರಿಯಪ್ಪ, ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ.ಭಾಸ್ಕರ್, ರೋಹಿತಾಕ್ಷ ಬಳ್ಳಾರಿ, ಡಾ.ಶರಣಪ್ಪ ಗೊರೇಬಾಳ, ವೀರೇಶ ನೆಟಕಲ್, ಪಂಪಯ್ಯಸ್ವಾಮಿ ಸಾಲಿಮಠ, ಅಶೋಕಗೌಡ ಗದ್ರಟಗಿ, ಮಧ್ವರಾಜ ಆಚಾರ್ಯ, ಶರಣಬಸವ ತೆಂಗಿನಕಾಯಿ, ತಾಲೂಕು ಯೋಜನಾಧಿಕಾರಿ ಶೇಖರ ಶೆಟ್ಟಿ, ಸೇವಾ ಪ್ರತಿನಿಧಿಗಳಾದ ತೋಟಯ್ಯ, ನಂದಾ, ಪ್ರತಿಭಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts