More

  ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ

  ಅಳವಂಡಿ: ಪ್ರೋತ್ಸಾಹ, ಸೂಕ್ತ ವೇದಿಕೆ ಸಿಗದೆ ಎಲೆಮರೆಕಾಯಂತಿರುವ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಜನಪ್ರತಿನಿಧಿಗಳು, ಸಮುದಾಯ, ಸಂಘ-ಸಂಸ್ಥೆಗಳಿಂದ ಆಗಬೇಕಿದೆ ಎಂದು ಕೊಪ್ಪಳದ ಮಹಿಳಾಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಪ್ರಿಯದರ್ಶಿನಿ ಮುಂಡರಗಿಮಠ ತಿಳಿಸಿದರು.

  ಇದನ್ನೂ ಓದಿರಿ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಕ್ರೀಡಾಕೂಟ ಸಹಕಾರಿ

  ಗ್ರಾಮದ ಶ್ರೀಸಿದ್ಧೇಶ್ವರ ಮಠದಲ್ಲಿ ಕೊಪ್ಪಳದ ಮಹಿಳಾಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ಕ್ರೀಡಾಪಟುಗಳಿಗೆ ಕ್ರೀಡಾ ಉಡುಪುಗಳನ್ನು ಉಚಿತವಾಗಿ ನೀಡಿ ಬುಧವಾರ ಮಾತನಾಡಿದರು.

  ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮೂಲ ಸೌಕರ್ಯ ಕಲ್ಪಿಸಿದರೆ ಆಟದಲ್ಲಿ ಯಶಸ್ವಿಯಾಗುತ್ತಾರೆ ಎಂದರು.

  ಏಕಲ್ ವಿದ್ಯಾಲಯದ ಪ್ರಾಚಾರ್ಯ ಶಾರದಾ ನಾಯಕ ಮಾತನಾಡಿದರು. ಅನ್ವರ್ ಗಡಾದ, ಚನ್ನಪ್ಪ ಮುತ್ತಾಳ, ರೇಣುಕಪ್ಪ ಹಳ್ಳಿಕೇರಿ, ಪ್ರತಿಭಾ ಮೇಟಿ, ಪ್ರಕಾಶ ಇಳಿಗೇರ, ಮಂಜುನಾಥ ಹಿರೇಮಠ, ನೀಲಪ್ಪ, ಅಂಬರೀಷ, ಬಿ.ಎನ್.ಹೊರಪೇಟಿ, ಜೂನುಸಾಬ್ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts