More

    ಸ್ವಂತ ಉದ್ದಿಮೆಗೆ ಸರ್ಕಾರ ಪ್ರೋತ್ಸಾಹ

    ರಿಪ್ಪನ್‌ಪೇಟೆ: ಜನಸಂಖ್ಯಾ ಸ್ಫೋಟದಿಂದ ನಿರುದ್ಯೋಗ ಸಮಸ್ಯೆ ಅಧಿಕವಾಗುತ್ತಿರುವ ಸಂದರ್ಭದಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದ್ದರಿಂದ ತಮಗಿಷ್ಟವಾದ ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಸದೃಢವಾಗಲು ಸರ್ಕಾರದಿಂದ ಉದ್ಯಮ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ(ಸಿಡಾಕ್) ಜಂಟಿ ನಿರ್ದೇಶಕರಾದ ಆರ್.ಪಿ.ಪಾಟೀಲ್ ಹೇಳಿದರು.

    ಪಟ್ಟಣದ ಗಾಂಧಿನಗರ ಅಂಬೇಡ್ಕರ್ ಭವನದಲ್ಲಿ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯವ ಶೀಲತಾ ಅಭಿವೃದ್ಧಿ ಕೇಂದ್ರ ಹಾಗೂ ಮಲೆನಾಡು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರಿ ಉದ್ಯೋಗ ಎಲ್ಲರಿಗೂ ಸಿಗುವುದಿಲ್ಲ. ಅಂತಹ ವೇಳೆ ಸ್ವಂತ ಉದ್ಯಮ ಸ್ಥಾಪಿಸಿದರೆ ಇನ್ನೊಬ್ಬರಿಗೆ ಉದ್ಯೋಗ ನೀಡುವ ಅವಕಾಶ ನಿಮ್ಮದಾಗುತ್ತದೆ. ಶಿಬಿರಾರ್ಥಿಗಳು ಉದ್ಯಮ ಸ್ಥಾಪಿಸಲು ಮನಸ್ಸು ಮಾಡಿದರೆ ಅದಕ್ಕೆ ಬೇಕಾದ ತರಬೇತಿಯನ್ನು ಸಂಸ್ಥೆಯಿಂದ ನೀಡಲಾಗುವುದು ಎಂದರು.
    ಟ್ರಸ್ಟ್ ಅಧ್ಯಕ್ಷೆ ಲೀಲಾ ಶಂಕರ್, ಸಂಪನ್ಮೂಲ ವ್ಯಕ್ತಿ ಸಿ.ಎಲ್.ರಮೇಶ, ತರಬೇತುದಾರ ಎ.ಅವಿನಾಶ್, ಕುಸುಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts