More

    ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಎರಡೂವರೆ ವರ್ಷದ ಪೋರ: ಅಗಸ್ತ್ಯ ಅಪಾರ ಗ್ರಹಿಕೆ ಶಕ್ತಿಗೆ ಸಂದ ಪ್ರಶಸ್ತಿ

    ಅಳವಂಡಿ: ಗ್ರಾಮದ ಪ್ರತಾಪ್ ಬಾವಿಹಳ್ಳಿ-ಮಧು ದಂಪತಿ ಪುತ್ರ ಎರಡೂವರೆ ವರ್ಷದ ಅಗಸ್ತ್ಯ ಬಾವಿಹಳ್ಳಿ, ಅಪಾರ ಜ್ಞಾಪಕ ಶಕ್ತಿ, ಅಸಾಧಾರಣ ಪ್ರತಿಭೆಯಿಂದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಬಾಚಿಕೊಂಡಿದ್ದಾನೆ.

    ಸದ್ಯ ಅಗಸ್ತ್ಯಗೆ 2 ವರ್ಷ 7 ತಿಂಗಳು ವಯಸ್ಸು. ಹೆಚ್ಚಿನ ಜ್ಞಾಪಕ ಶಕ್ತಿ ಮತ್ತು ಸದಾ ಲವಲವಿಕೆಯಿಂದ ಇದ್ದು, ಒಮ್ಮೆ ಹೇಳಿದ ಹಾಗೂ ಕೇಳಿದ ವಿಷಯ ಹಾಗೂ ವಸ್ತುಗಳನ್ನು ಹೆಸರು ಸಮೇತ ಗುರುತಿಸುವ ಸಾಮರ್ಥ್ಯ ಹೊಂದಿದ್ದಾನೆ. ಪ್ರಾಣಿಗಳು, ಪಕ್ಷಿಗಳು, ವಾಹನಗಳು, ಸ್ವಾತಂತ್ರೃ ಯೋಧರ ಹೆಸರು ಪಟಪಟನೆ ಹೇಳುತ್ತಾನೆ. ಕೇವಲ ನಾಲ್ಕು ನಿಮಿಷ 27 ಸೆಕೆಂಡ್‌ನಲ್ಲಿ 64 ಕಾರು, 29 ಬೈಕ್, 6 ಟ್ರ್ಯಾಕ್ಟರ್, ದೇಶದ ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿ ಹೆಸರು, ಎಚ್‌ಎಂಟಿ, ಐಎಎಸ್ ವಿಸ್ತಾರ ರೂಪ ಲೀಲಾಜಾಲವಾಗಿ ಹೇಳುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿ ಗಮನ ಸೆಳೆದಿದ್ದಾನೆ.

    ಈ ಕುರಿತು ಪ್ರತಿಕ್ರಿಯಿಸಿದ ಅಗಸ್ತ್ಯ ತಂದೆ ಪ್ರತಾಪ ಬಾವಿಹಳ್ಳಿ, ಮಗ ಅಗಸ್ತ್ಯನ ವಯಸ್ಸು 3 ವರ್ಷ ದಾಟಿಲ್ಲ. ಅವನ ಅಪಾರ ಜ್ಞಾಪಕ ಶಕ್ತಿ ಕಂಡು ವಿವಿಧ ವಿಷಯ, ವ್ಯಕ್ತಿ, ಸಾಧಕರು, ವಾಹನಗಳ ಗುರುತು, ಹೆಸರುಗಳನ್ನು ತಿಳಿಸಲಾಯಿತು. ಅವನ ಗ್ರಹಿಕೆ ಶಕ್ತಿ ಕಂಡು ಪ್ರೋತ್ಸಾಹ ನೀಡಿದ್ದೇವೆ. ಮಗನಿಗೆ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ. ಅವನ ಉಜ್ವಲ ಭವಿಷ್ಯಕ್ಕೆ ಶ್ರಮಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts