More

    ಖಗೋಳಶಾಸ್ತ್ರದ ತಿಳುವಳಿಕೆ ಅಗತ್ಯ – ತಾರಾಲಯ ಸಂಯೋಜಕ ಚರಂತಯ್ಯ ಬೂಸನೂರಮಠ ಅಭಿಮತ

    ಅಳವಂಡಿ: ಶಾಲೆ ಮಕ್ಕಳು ಹಾಗೂ ಶಿಕ್ಷಕರಿಗೆ ಖಗೋಳಶಾಸ್ತ್ರ, ನಕ್ಷತ್ರಪುಂಜ, ಆಕಾಶ ಕಾಯಗಳು, ಸೂರ್ಯ, ಚಂದ್ರ, ಹಾಗೂ ಭೂಮಂಡಲದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ತಾರಾಲಯದ ಸಂಯೋಜಕ ಚರಂತಯ್ಯ ಬೂಸನೂರಮಠ ಹೇಳಿದರು.

    ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿವಿಧ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ತಾರಾಲಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಮಕ್ಕಳಿಗಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿ 11 , ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 7 ಸಂಚಾರಿ ಡಿಜಿಟಲ್ ತಾರಾಲಯ ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

    ಮುಖ್ಯ ಶಿಕ್ಷಕಿ ಜಯಾ ತಳಗೇರಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆಯ ಅಂಗಳದಲ್ಲಿಯೇ ಭೂಮಂಡಲದ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿರುವುದು ಮಕ್ಕಳಿಗೆ ಬಹಳ ಅನುಕೂಲವಾಗುತ್ತಿದೆ ಎಂದರು. ತಾಂತ್ರಿಕ ಸಲಹೆಗಾರ ಅನ್ವರ್‌ಸಾಬ್ ಇಟಗಿ, ಶಿಕ್ಷಕಿಯರಾದ ವಿಮಲಾಕ್ಷಿ ಕಟ್ಟಿ, ಕ್ಕೀರಮ್ಮ ಮಠದ, ಸುನಿತಾ, ಇಸ್ರತ್ ಬಾನು, ಸುಜಾತಾ, ಸವಿತಾ, ಚನ್ನಮ್ಮ ಚಿನ್ನೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts