More

  ಪರಿಶುದ್ಧವಾದ ವ್ಯಕ್ತಿತ್ವಕ್ಕೆ ಮನ್ನಣೆ

  ಅಳವಂಡಿ: ಮನುಷ್ಯ ಜೀವನ ಕ್ಷಣಿಕ. ಹಾಗಾಗಿ ಶಾಂತಿ ಸಂಸ್ಕಾರಯುತ ಬದುಕಿಗೆ ಆದ್ಯತೆ ನೀಡಬೇಕು ಎಂದು ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

  ಸಮೀಪದ ಯತ್ನಟ್ಟಿ ಗ್ರಾಮದಲ್ಲಿ ಬಸವರಾಜೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಶನಿವಾರ ಮಾತನಾಡಿದರು. ಸಂಸ್ಕಾರದಿಂದ ಸಮಾಜ ಗುರುತಿಸಲಿದೆ. ಧಾರ್ಮಿಕ ಸಭೆಗಳಲ್ಲಿ ಮಹಾತ್ಮರ ಸಂದೇಶಗಳು ಸಿಗುತ್ತವೆ ಎಂದರು.

  ನಿಷ್ಕಲ್ಮಷ ಮನಸ್ಸು ಹಾಗೂ ಕಾರ್ಯಗಳು ಪರಿಶುದ್ಧವಾಗಿದ್ದಲ್ಲಿ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ಜನರು ಗುರುತಿಸುವ ಕಾರ್ಯ ಮಾಡಬೇಕು. ಕಷ್ಟದಲ್ಲಿದ್ದಾಗ ಜತೆಗೆ ಯಾರು ನಿಲ್ಲುತ್ತಾರೆ ಎಂಬುದು ಮುಖ್ಯ ಎಂದು ಹೇಳಿದರು.

  ಸಾಹಿತಿ ಷಣ್ಮುಖಯ್ಯ ತೋಟದ ಮಾತನಾಡಿ, ಮಠ ಮಾನ್ಯಗಳು ಜಾಗೃತಿ ಕೇಂದ್ರಗಳಾಗಿವೆ. ಇಂತಹ ಕೇಂದ್ರಗಳು ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವಲ್ಲಿ ಹಾಗೂ ಸರ್ವರಲ್ಲಿ ಒಗ್ಗಟ್ಟನ್ನು ಮೂಡಿಸುವ ಹಾಗೂ ಮನಃಶಾಂತಿ ನೀಡುವ ನೆಮ್ಮದಿಯ ತಾಣಗಳಾಗಿವೆ ಎಂದರು.

  ಹೂವಿನ ಹಡಗಲಿಯ ಹಿರೇಶಾಂತವೀರ ಸ್ವಾಮೀಜಿ, ಪ್ರಮುಖರಾದ ಪತ್ರೆಪ್ಪ ಮೂಲಿಮನಿ, ಎಲ್.ಎಪ್.ಪೋಲಿಸ್ ಪಾಟೀಲ, ಈಶಪ್ಪ ಮಾಸ್ತರ ಓಜನಹಳ್ಳಿ, ಸಿದ್ದಣ್ಣ, ಡಾ.ಷಣ್ಮುಖಯ್ಯ ತೋಟದ ಹಾಗೂ ಮೈನಹಳ್ಳಿ, ಓಜನಹಳ್ಳಿ, ಕಾಮನೂರು, ಭಾಗ್ಯನಗರ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ವಾಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts