More

    ಕ್ರಿಕೆಟ್​ನಲ್ಲಿ 24 ಸಾವಿರ ರನ್, 66ನೇ ಶತಕ ಪೂರೈಸಿದ ಅಲಸ್ಟೈರ್ ಕುಕ್

    ಲಂಡನ್: ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಅಲಸ್ಟೈರ್ ಕುಕ್ (129*) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 66ನೇ ಶತಕ ಮತ್ತು 24 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಬಾಬ್ ವಿಲ್ಲಿಸ್ ಟ್ರೋಫಿಯಲ್ಲಿ ಹ್ಯಾಂಪ್‌ಶೈರ್ ತಂಡದ ವಿರುದ್ಧ ಎಸೆಕ್ಸ್ ಪರ ಆಡಿದ ಪಂದ್ಯದಲ್ಲಿ 35 ವರ್ಷದ ಕುಕ್ ಈ ಮೈಲಿಗಲ್ಲು ನಿರ್ಮಿಸಿದ್ದಾರೆ.

    ಇಂಗ್ಲೆಂಡ್ ಪರ 161 ಟೆಸ್ಟ್, 92 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿ 2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಅಲಸ್ಟೈರ್ ಕುಕ್, ದೇಶೀಯ ಕ್ರಿಕೆಟ್‌ನಲ್ಲಿ ಆಟ ಮುಂದುವರಿಸಿದ್ದಾರೆ. ಎಸೆಕ್ಸ್-ಹ್ಯಾಂಪ್‌ಶೈರ್ ನಡುವಿನ ಪಂದ್ಯ ಮಳೆಯಿಂದಾಗಿ ಡ್ರಾಗೊಂಡರೂ, ಕುಕ್ ಹಲವು ದಾಖಲೆಗಳನ್ನು ಬರೆದು ಗಮನಸೆಳೆದರು.

    ಕುಕ್ ಅವರು ಸದ್ಯ ಸಕ್ರಿಯವಾಗಿರುವ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ರನ್ ಸಿಡಿಸಿರುವ ಸಾಧನೆ ಮಾಡಿದ್ದಾರೆ. 180 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ 24 ಸಾವಿರ ರನ್ ಪೂರೈಸಿದ ವಿಶ್ವದ 148ನೇ ಬ್ಯಾಟ್ಸ್‌ಮನ್ ಎನಿಸಿದರು. ಜಾಕ್ ಹಾಬ್ಸ್ 61,760 ರನ್ ಸಿಡಿಸಿರುವುದು ವಿಶ್ವದಾಖಲೆ ಎನಿಸಿದೆ.

    ಇದನ್ನೂ ಓದಿ: ಸಚಿನ್​ ನಿವೃತ್ತಿ ಬಳಿಕ ಐಪಿಎಲ್​ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!

    ಟೆಸ್ಟ್ ಕ್ರಿಕೆಟ್‌ನಲ್ಲಿ 12,472 ರನ್ ಮತ್ತು 33 ಶತಕ ಸಿಡಿಸಿರುವ ಕುಕ್ ಸಕ್ರಿಯವಾಗಿರುವ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಶತಕ ಸಿಡಿಸಿರುವ ಸಾಧಕರಾಗಿದ್ದಾರೆ. ಇಂಗ್ಲೆಂಡ್‌ನವರೇ ಆದ ಇಯಾನ್ ಬೆಲ್ (57), ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲ (52) ಮತ್ತು ಭಾರತದ ಚೇತೇಶ್ವರ ಪೂಜಾರ (50) ನಂತರದ ಸ್ಥಾನದಲ್ಲಿದ್ದಾರೆ.

    VIDEO |ದುಬೈನಲ್ಲಿ ರೋಹಿತ್ ಶರ್ಮ ಕ್ವಾರಂಟೈನ್ ವರ್ಕ್‌ಔಟ್‌ಗೆ ಪತ್ನಿ ರಿತಿಕಾ ಸಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts