ಬೆಂಗಳೂರು: ಖ್ಯಾತ ನಿರೂಪಕ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ನಲ್ಲಿ ಪೇಜ್ 3 ಪಾರ್ಟಿ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಪಟ್ಟಿರುವ ಡ್ರಗ್ಸ್ ಪೆಡ್ಲರ್ಗಳು ಅಕುಲ್ರ ರೆಸಾರ್ಟ್ನಲ್ಲಿ ಪಾರ್ಟಿ ಮಾಡುತ್ತಿದ್ದಾಗಿ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ವಿಚಾರಣೆ ಎದುರಿಸಲು ಸಿಸಿಬಿ ಕಚೇರಿಗೆ ಅಕುಲ್ ತೆರಳಿದ್ದಾರೆ.
ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿ ಬಳಿ ಅಕುಲ್ಗೆ ಸೇರಿದ ‘ಸನ್ ಶೈನ್ ಬೈ ಜೆಡ್’ ರೆಸಾರ್ಟ್ ಇದೆ. ಲಾಕ್ಡೌನ್ ಸಮಯದಲ್ಲಿ ಅಂದರೆ ಏ.20ರಂದು ಅಕುಲ್ ಬಾಲಾಜಿ ಈ ರೆಸಾರ್ಟ್ನಲ್ಲಿ ಪಾರ್ಟಿ ಮಾಡಿದ್ದರು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ಥಳೀಯ ನಿವಾಸಿ ಮಂಜುನಾಥ್ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು.
ಇನ್ನು ಅಕುಲ್ರ ರೆಸಾರ್ಟ್ಗೆ ಹಲವು ಬಾರಿ ನಟಿ ರಾಗಿಣಿ ದ್ವಿವೇದಿ ಮತ್ತು ರವಿಶಂಕರ್ ಹೋಗಿದ್ದರು ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಡ್ರಗ್ಸ್ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಅಕುಲ್ರ ಆ ರೆಸಾರ್ಟ್ ಹೇಗಿದೆ ಗೊತ್ತಾ? ಇಲ್ಲಿವೆ ಆ ಫೋಟೋಗಳು.