More

    ಮಕ್ಕಳಿಗೆ ಸಂವಿಧಾನದ ಪೂರ್ಣ ಪರಿಚಯ, ‘ಸಂಗ್ರಾಮ ಪೀಠಿಕೆ’ ಕೃತಿ ಅನಾವರಣದಲ್ಲಿ ಕರ್ನಲ್ ಶರತ್ ಭಂಡಾರಿ ಸಲಹೆ

    ಮಂಗಳೂರು: ದೇಶದ ರಕ್ಷಣೆೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಸಂವಿಧಾನದ ಪಾಲನೆಯ ಮೇಲೆ ನಿಂತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ದೇಶದ ಸಂವಿಧಾನದ ಪೂರ್ಣ ಪರಿಚಯ ಮಾಡಿಕೊಡುವ ಕೆಲಸ ಆದ್ಯತೆಯಲ್ಲಿ ನಡೆಯಬೇಕು ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

    ಸುರತ್ಕಲ್ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ನಗರದ ಚಿಲಿಂಬಿಯಲ್ಲಿ ಭಾನುವಾರ ಜರುಗಿದ ಅಕ್ಷಯ್ ಹೆಗಡೆ ಅವರ ‘ಸಂಗ್ರಾಮ ಪೀಠಿಕೆ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ದೇಶದ ಭದ್ರತೆೆ, ಸೇನಾನಿಗಳ ಪರಿಚಯದಂತಹ ರಾಷ್ಟ್ರಪ್ರೇಮ ಉದ್ದೀಪಿಸುವಂತಹ ಕೃತಿಗಳು ಮತ್ತಷ್ಟು ಹೊರಬರಬೇಕು. ಇಂತಹ ಕೃತಿಗಳ ಬಗ್ಗೆ ವಿದ್ಯಾರ್ಥಿಗಲ್ಲಿ ಅಭಿರುಚಿ ಬೆಳೆಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

    ಮೆನ್ಷನ್ಸ್ ಇನ್ ಡಿಸ್‌ಪ್ಯಾಚ್ ಶೌರ್ಯ ಪ್ರಶಸ್ತಿ ವಿಜೇತ ಎಂಡಬ್ಲುೃಒ ಲಕ್ಷ್ಮಣ ಹರೇಕಳ ಕೃತಿ ಬಿಡುಗಡೆ ಮಾಡಿದರು. ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

    ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಈ ಕೃತಿ ಆಧರಿಸಿ ಈಗಾಗಲೇ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಏರ್ಪಡಿಸಿದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಿಗೆ ಜಿಲ್ಲೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈಗಾಗಲೇ ವೇದಿಕೆ ವತಿಯಿಂದ 7 ವರ್ಷದಲ್ಲಿ 20 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಅರ್ಹ ಸೈನಿಕ ಕುಟುಂಬಗಳಿಗೆ ನೀಡಲಾಗಿದೆ ಎಂದರು.

    ವೇದಿಕೆ ಗೌರವಾಧ್ಯಕ್ಷೆ ಹುಂಡಿ ಪ್ರಭಾ ಕಾಮತ್, ಬೆಂಗಳೂರಿನ ವಟಿ ಕುಟೀರ ಪ್ರಕಾಶನ ಕಿರಣ ವಟಿ, ವೇದಿಕೆಯ ಶ್ರೀಕಾಂತ್ ಶೆಟ್ಟಿ, ಅಣ್ಣಪ್ಪ ದೇವಾಡಿಗ, ಹರೀಶ್ ಕೆ.ಬಂಗೇರ, ಗುರುಚಂದ್ರ ಹೆಗ್ಡೆ, ಸೈನಿಕರ ಸಂಘದ ಕ್ಯಾ.ದೀಪಕ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು. ಶಶಿಕಲಾ ಶೆಟ್ಟಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು. ಯಶ್‌ಪಾಲ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts