More

    ಸ್ವಾತಂತ್ರ್ಯ ಸಂಗ್ರಾಮ ನೆನಪಿಸಿದ ‘ದೇವಿಯ ದೀವಿಗೆ’

    ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ರಂಗಸೌಗಂಧ ತಂಡ ಈ ವರ್ಷದ ಸಂಚಾರಕ್ಕೆ ಆಯ್ಕೆ ಮಾಡಿಕೊಂಡ ದೇವಿಯ ದೀವಿಗೆ ನಾಟಕ ಪ್ರದರ್ಶನ ಮೆಚ್ಚುಗೆ ಗಳಿಸಿತು.

    ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದ ಸಿದ್ದಾಪುರ ತಾಲೂಕಿನ ಗ್ರಾಮೀಣ ಕುಟುಂಬವೊಂದು ಎದುರಿಸಿದ ಸಂಕಷ್ಟ, ಸ್ವಾತಂತ್ರ್ಯ್ಕಾಗಿ ಮಾಡಿದ ತ್ಯಾಗ, ತೋರಿದ ಕಿಚ್ಚು, ಹಿಂದುಳಿದ ವರ್ಗದ ಮಹಿಳೆಯೊಬ್ಬಳು ತನ್ನ ಬಡತನದ ನಡುವೆಯೂ ಮೆರೆದ ಪ್ರಾಮಾಣಿಕತೆ, ನಿಷ್ಠೆಯನ್ನು ಕೇಂದ್ರವಾಗಿರಿಸಿಕೊಂಡು ನೈಜ ಘಟನೆಗಳನ್ನಾಧರಿಸಿ ಶ್ರೀಪಾದ ಹೆಗಡೆ ಮಗೇಗಾರ ರಚಿಸಿರುವ ನಾಟಕವೇ ದೇವಿಯ ದೀವಿಗೆ.

    ಗಣಪತಿ ಹೆಗಡೆ ಗುಂಜಗೋಡ (ನಾಗೇಶ ಹೆಗಡೆ), ಪ್ರವೀಣ ಹೆಗಡೆ ಗುಂಜಗೋಡ (ದೇವಿ), ಐ.ಕೆ. ಸುಂಗೊಳ್ಳಿಮನೆ (ಶಿವ), ನಾಗಪತಿ ಭಟ್ಟ ವಡ್ಡಿನಗದ್ದೆ (ಸುಬ್ರಾಯ ಹೆಗಡೆ), ಅಜೀತ ಭಟ್ಟ ಹೆಗ್ಗಾರಳ್ಳಿ (ಭಗವಾನ್), ರಾಜಾರಾಮ ಭಟ್ಟ ಹೆಗ್ಗಾರಳ್ಳಿ (ಭಟ್ಟ) ಅವರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸಿ ಗಮನ ಸೆಳೆದರು. ಪೊಲೀಸರಾಗಿ ರಾಮು ಅಂಕೋಲೆಕರ, ಶಮಂತ ಶಿರಳಗಿ, ವಾನರ ಸೇನೆಯಾಗಿ ಪ್ರಥಮ ಭಟ್ಟ, ದೀಕ್ಷಾ ಹೆಗಡೆ ಇತರರು ಮನೋಜ್ಞ ಅಭಿನಯ ನೀಡಿದರು. ನಾಟಕಕ್ಕೆ ಶ್ರೀಪಾದ ಹೆಗಡೆ ಕೋಡನಮನೆ ವಿನ್ಯಾಸ, ರಾಜೇಂದ್ರ ಕೊಳಗಿ ಮತ್ತು ಜಯರಾಮ ಭಟ್ಟ ಗುಂಜಗೋಡ ಸಂಗೀತ ನೀಡಿದ್ದರು.

    ಹವ್ಯಕ ಹಾಗೂ ಗ್ರಾಮೀಣ ಸೊಗಡಿನ ಸಂಭಾಷಣೆಯೊಂದಿಗೆ ನಾಟಕವನ್ನು ಗಣಪತಿ ಹೆಗಡೆ ಹುಲಿಮನೆ ನಿರ್ದೇಶಿಸಿದ್ದಾರೆ. ಧ್ವನಿ- ಬೆಳಕಿನಲ್ಲಿ ನಾಗರಾಜ ಭಂಡಾರಿ ಶಿರಸಿ ಹಾಗೂ ಉದಯ ಶಿರಸಿ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts